ಮಟಮಟ ಮಧ್ಯಾಹ್ನ ಮನೆಗೆ ನುಗ್ಗಿದ ಕಳ್ಳ, ಹೊರಬಂದು ಚಿಲಕ ಹಾಕಿದ ಮಹಿಳೆ, ಜನ ಮನೆಯೊಳಗೆ ಹೋದಾಗ ಕಾದಿತ್ತು ಶಾಕ್

SHIVAMOGGA LIVE NEWS | 12 FEBRUARY 2024➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

SHIMOGA : ಮಧ್ಯಾಹ್ನದ ವೇಳೆ ಮನೆಯೊಂದಕ್ಕೆ ನುಗ್ಗಿದ ಕಳ್ಳನೊಬ್ಬ ವ್ಯಾನಿಟಿ ಬ್ಯಾಗಿನಿಲ್ಲಿ ಇಟ್ಟಿದ್ದ 50 ಸಾವಿರ ರೂ. ನಗದು ಕಳ್ಳತನ ಮಾಡಿದ್ದಾನೆ. ಮನೆಯಲ್ಲಿದ್ದ ಮಹಿಳೆ ಕಳ್ಳನನ್ನು ಗಮನಿಸಿ ಹೊರಗೆ ಓಡಿ ಬಂದು ಚಿಲಕ ಹಾಕಿ ಜೋರಾಗಿ ಕೂಗಿಕೊಂಡಿದ್ದಾರೆ. ಅಕ್ಕಪಕ್ಕದವರು ಒಳ ಹೋಗಿ ಹುಡುಕಿದಾಗ ಕಳ್ಳ ಮನೆಯ ಹೆಂಚು ತೆಗೆದು ಪರಾರಿಯಾಗಿದ್ದಾನೆ.

ಶಿವಮೊಗ್ಗದ ವಿದ್ಯಾನಗರದಲ್ಲಿ 7ನೇ ಅಡ್ಡರಸ್ತೆಯ ವೆಂಕಟೇಶ್‌ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ವೆಂಕಟೇಶ್‌ ಅವರು ತಮ್ಮ ಸಹೋದರ ನೀಡಿದ್ದ 50 ಸಾವಿರ ರೂ. ಹಣವನ್ನು ತಂದು ತಮ್ಮ ಮನೆಯಲ್ಲಿದ್ದ ವ್ಯಾನಿಟಿ ಬ್ಯಾಗ್‌ನಲ್ಲಿಟ್ಟಿದ್ದರು. ಫೆ.8ರಂದು ಮಧ್ಯಾಹ್ನ ವೆಂಕಟೇಶ್‌ ಅವರ ಪತ್ನಿ ಮಲಗಿದ್ದಾಗ ಕಳ್ಳ ಒಳನುಗ್ಗಿ ಹಣ ಕಳವು ಮಾಡಿದ್ದಾನೆ.

ಘಟನೆ ಸಂಬಂಧ ಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ಇದನ್ನೂ ಓದಿ – ಕೆಮಿಕಲ್‌ನಲ್ಲಿ ಪೇಪರ್‌ ಅದ್ದಿ 500 ರೂ. ನೋಟ್‌ ತಯಾರಿ, ಕಣ್ಣಾರೆ ಕಂಡು ನಂಬಿದ ವ್ಯಕಿಗೆ ಲಕ್ಷ ಲಕ್ಷ ಟೋಪಿ

Leave a Comment