13 ರೈತರ ಹೋರಾಟಕ್ಕೆ ಜಯ, ಕಳಪೆ ಬೀಜ ಪೂರೈಸಿದವರಿಗೆ ಲಕ್ಷ ಲಕ್ಷ ರೂ. ದಂಡ, ಏನಿದು ಕೇಸ್‌?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ : ಕೃಷಿಕರಿಗೆ ಕಳಪೆ ಗುಣಮಟ್ಟದ ಭತ್ತದ ಬೀಜ (seeds) ಪೂರೈಸಿದ ಪೂರೈಕೆದಾರರಿಗೆ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ವಿಧಿಸಿ ಆದೇಶ ನೀಡಿದೆ.

ಇದನ್ನೂ ಓದಿ » ಶಿವಮೊಗ್ಗದ ತುಂಗಾ ನದಿ ಸೇತುವೆ ಮೇಲೆಯೇ ನಿಂತ ಮೈಸೂರು ಇಂಟರ್‌ಸಿಟಿ ರೈಲು, ಆಗಿದ್ದೇನು?

ಶಿಕಾರಿಪುರ ತಾಲೂಕು ಮಾಲಗೊಂಡನಕೊಪ್ಪ ಮತ್ತು ಬಿಳಿಕಿ ಗ್ರಾಮದ 12 ಕೃಷಿಕರು ಮೂರು ಸಂಸ್ಥೆಗಳು ಕಳಪೆ ಗುಣಮಟ್ಟದ ಭತ್ತದ ಬೀಜಗಳನ್ನು (seeds) ಪೂರೈಸಿವೆ ಎಂದು ಆಯೋಗಕ್ಕೆ ದೂರು ನೀಡಿದ್ದರು. ಚಾರ್ಮಿ ತಳಿಯ ಭತ್ತದ ಬೀಜಗಳನ್ನು ಖರೀದಿಸಿ, ಬಿತ್ತನೆ ಮಾಡಿದ 40-50 ದಿನಗಳಾದರೂ ಸರಿಯಾದ ರೀತಿಯಲ್ಲಿ ಪೈರು ಬೆಳವಣಿಗೆಯಾಗಿರಲಿಲ್ಲ.

ಪೂರೈಕೆದಾರರನ್ನು ವಿಚಾರಿಸಿ, ಕೆಳದಿ ಶಿವಪ್ಪ ನಾಯಕ ವಿಶ್ವವಿದ್ಯಾಲಯದವರು ಪರಿಶೀಲಿಸಿ ನೀಡಿದ ವರದಿಯನ್ನು ಆಧರಿಸಿ, ಪೂರೈಕೆದಾರರು ನೀಡಿರುವ ಭತ್ತದ ಬೀಜ ಕಳಪೆ ಗುಣಮಟ್ಟದ್ದಾಗಿದೆ. ಇಳುವರಿ ಕಡಿಮೆಯಾಗಿದೆ ಎಂದು ದೂರು ನೀಡಿದ್ದರು.

ದೂರುದಾರರ ಮತ್ತು ಎದುರುದಾರರ ಪ್ರಮಾಣ ಪತ್ರ, ದಾಖಲೆಗಳನ್ನು ಪರಿಶೀಲಿಸಿ, ಪೂರೈಕೆದಾರರು ನೀಡಿರುವ ಭತ್ತದ ಬೀಜ ಕಳಪೆ ಗುಣಮಟ್ಟದ್ದಾಗಿದೆ ಎಂದು ಆಯೋಗ ಆದೇಶಿಸಿದೆ. ನಷ್ಟ ಅನುಭವಿಸಿದ 13 ಕೃಷಿಕರಿಗೆ 2023ರ ಜನವರಿ 1ರಿಂದ ಅನ್ವಯ ಆಗುವಂತೆ ಶೇ.8ರ ಬಡ್ಡಿ ಸಹಿತ ಒಟ್ಟು 4,43,724 ರೂ. ಪರಿಹಾರ ನೀಡಬೇಕು. ಆದೇಶವಾದ 45 ದಿನಗಳೊಳಗೆ ಪರಿಹಾರದ ಮೊತ್ತ ಪಾವತಿಸಬೇಕು.

ಇದನ್ನೂ ಓದಿ » ಕಾಶ್ಮೀರ ದಾಳಿ, ಶಿವಮೊಗ್ಗದ ಉದ್ಯಮಿಯ ಮೃತದೇಹದ ಮುಂದೆ ಕಣೀರಾದ ಪತ್ನಿ, ಧೈರ್ಯ ತುಂಬಿದ ಮಿನಿಸ್ಟರ್

ತಪ್ಪಿದ್ದಲ್ಲಿ ಈ ಮೊತ್ತಕ್ಕೆ ಶೇ. 10ರಂತೆ ಬಡ್ಡಿಯನ್ನು ಪೂರ ಹಣ ಪಾವತಿಸುವವರೆಗೆ ಹಾಗೂ 10 ಸಾವಿರ ರೂ.ಗಳನ್ನು ಮಾನಸಿಕ ಹಾನಿಗೆ ಮತ್ತು ರೂ. 5 ಸಾವಿರ ರೂ.ಗಳನ್ನು ವ್ಯಾಜ್ಯದ ಖರ್ಚು-ವೆಚ್ಚಗಳ ಬಾಬ್ತು ಎಂದು ಪ್ರತಿ ದೂರುದಾರರಿಗೆ ನೀಡಬೇಕೆಂದು ನಿರ್ದೇಶಿಸಿ, ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ಆದೇಶಿಸಿದೆ.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ

HOME LOAN SERVICES
ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!

🏠 ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಇಂದೇ ಸಂಪರ್ಕಿಸಿ:


📞 99721 94422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment