ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 9 JANUARY 2023
ಶಿವಮೊಗ್ಗ : ಪ್ರಮುಖ ರಸ್ತೆಗಳಲ್ಲಿ ಭಾರಿ ವಾಹನ ಸಂಚಾರ (traffic) ನಿರ್ಬಂಧ, ತಂಗುದಾಣಗಳ ಬಳಿ ಮಾತ್ರ ಸಿಟಿ ಬಸ್ ನಿಲುಗಡೆ ನಿಯಮ ಇಂದಿನಿಂದ ಜಾರಿಗೆ ಬಂದಿದೆ. ಬೆಳಗ್ಗೆಯಿಂದಲೆ ಸಂಚಾರಿ ಪೊಲೀಸರು ನಗರದಾದ್ಯಂತ ಈ ನಿಯಮ ಕಟ್ಟುನಿಟ್ಟು ಜಾರಿಗೊಳಿಸಿದ್ದಾರೆ.
ಭಾರಿ ವಾಹನ ಸಂಚಾರ ನಿರ್ಬಂಧ
ವಿದ್ಯಾರ್ಥಿಗಳು ಶಾಲೆ, ಕಾಲೇಜು, ನೌಕರರು ಕಚೇರಿಗೆ ತೆರಳುವ ಮತ್ತು ಮನೆಗೆ ಮರಳುವ ಸಮಯದಲ್ಲಿ ನಗರದಲ್ಲಿ ಸಂಚಾರ (traffic) ದಟ್ಟಣೆ ಹೆಚ್ಚು. ಈ ಹಿನ್ನೆಲೆ ನಗರದ ಪ್ರಮುಖ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಸಲುವಾಗಿ ಪ್ರಮುಖ ರಸ್ತೆಗಳಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ಸಮಯ ನಿಗದಿಪಡಿಸಲಾಗಿದೆ. ಹಲವು ರಸ್ತೆಗಳಲ್ಲಿ ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆವರೆಗೆ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಇದನ್ನೂ ಓದಿ – ಶಿವಮೊಗ್ಗ ನಗರದ 19 ರಸ್ತೆಯಲ್ಲಿ ಸರಕು ಸಾಗಣೆ, ಭಾರಿ ವಾಹನ ಪ್ರವೇಶ ನಿಷೇಧ, ಸಂಚಾರಕ್ಕೆ ಟೈಮ್ ಫಿಕ್ಸ್
ಈ ಸಂಬಂಧ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಅಧಿಸೂಚನೆ ಹೊರಡಿಸಿದ್ದು, ಇಂದಿನಿಂದ ನಗರದಲ್ಲಿ ನಿಯಮ ಜಾರಿಗೆ ಬಂದಿದೆ. ಬೆಳಗ್ಗೆಯಿಂದಲೆ ಪೊಲೀಸರು ಭಾರಿ ವಾಹನಗಳು ನಗರ ಪ್ರವೇಶವನ್ನು ನಿರ್ಬಂಧಿಸಿದ್ದಾರೆ. ಹಲವು ಕಡೆ ಬ್ಯಾರಿಕೇಡ್ ಹಾಕಿ, ಜಾಗೃತಿಗಾಗಿ ಫ್ಲೆಕ್ಸ್ ಅಳವಡಿಸಿದ್ದಾರೆ.
ಸಿಟಿ ಬಸ್ಸುಗಳಿಗೆ ಬಿಸಿ ಮುಟ್ಟಿಸಿದ ಪೊಲೀಸ್
ಇನ್ನು, ಜನ ಕೈ ತೋರಿಸಿದ ಕಡೆಯಲ್ಲೆಲ್ಲ ಸಿಟಿ ಬಸ್ಸುಗಳ ನಿಲುಗಡೆ ಮಾಡಲಾಗುತ್ತಿದೆ ಎಂಬ ಆರೋಪವಿತ್ತು. ಈ ಹಿನ್ನೆಲೆ ನಗರದಾದ್ಯಂತ ಸಿಟಿ ಬಸ್ಸುಗಳ ನಿಲುಗಡೆಯನ್ನು ಗುರುತಿಸಿ, ಅಧಿಸೂಚನೆ ಹೊರಡಿಸಲಾಗಿತ್ತು. ಇವತ್ತಿನಿಂದ ಈ ನಿಯಮ ಕೂಡ ಜಾರಿಗೆ ಬಂದಿದೆ. ಬೆಳಗ್ಗೆಯಿಂದಲೆ ನಗರದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರು, ನಿಗದಿತ ನಿಲ್ದಾಣ ಹೊರತು ಬೇರೆಡೆ ಬಸ್ಸುಗಳನ್ನ ನಿಲ್ಲಿಸುವವರಿಗೆ ದಂಡ ಹಾಕುತ್ತಿದ್ದಾರೆ.
ಇದನ್ನೂ ಓದಿ – ಇನ್ಮುಂದೆ ಎಲ್ಲೆಂದರಲ್ಲಿ ಸಿಟಿ ಬಸ್ ನಿಲ್ಲಿಸುವಂತಿಲ್ಲ, ಶಿವಮೊಗ್ಗದಲ್ಲಿ 117 ಬಸ್ ಸ್ಟಾಪ್ ಗುರುತಿಸಿ ಅಧಿಸೂಚನೆ ಪ್ರಕಟ
ಪ್ರಯಾಣಿಕರಿಗೆ ಬಸ್ ಸಿಬ್ಬಂದಿ ಜಾಗೃತಿ
ಇತ್ತ ಸಿಟಿ ಬಸ್ಸುಗಳಲ್ಲಿ ಪ್ರಯಾಣಿಕರಿಗೆ ಕಂಡಕ್ಟರ್ ಗಳು, ಬಸ್ ಸಿಬ್ಬಂದಿ ಜಾಗೃತಿ ಮೂಡಿಸುತ್ತಿದ್ದಾರೆ. ಇನ್ಮುಂದೆ ನಿಗದಿತ ನಿಲ್ದಾಣಗಳಲ್ಲಿ ಮಾತ್ರ ಬಸ್ಸುಗಳನ್ನು ನಿಲ್ಲಿಸಲಾಗುತ್ತದೆ. ಎಲ್ಲೆಂದರಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದಿಲ್ಲ, ಇಳಿಸುವುದಿಲ್ಲ ಎಂದು ಮನವರಿಕೆ ಮಾಡಿಕೊಡುತ್ತಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422