BREAKING NEWS – ಶಿವಮೊಗ್ಗದಲ್ಲಿ ಮುಷ್ಕರದ ಬಿಸಿ, ರಸ್ತೆಗಿಳಿದಿದ್ದ ಲಾರಿಗಳಿಗೆ MRS ಬಳಿ ತಡೆ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS | 18 JANUARY 2024

SHIMOGA : ಹಿಟ್‌ ಅಂಡ್‌ ರನ್‌ ಪ್ರಕರಣಗಳ ಕುರಿತು ಕಠಿಣ ಕಾನೂನು ಜಾರಿಗೆ ತಂದಿರುವುದನ್ನು ಹಿಂಪಡೆಯುವಂತೆ ಆಗ್ರಹಿಸಿ ಲಾರಿ ಚಾಲಕರು, ಮಾಲೀಕರು ಮುಷ್ಕರ ನಡೆಸುತ್ತಿದ್ದಾರೆ. ಈ ಮಧ್ಯೆ ರಸ್ತೆಗಿಳಿದಿದ್ದ ಕೆಲವು ಲಾರಿಗಳನ್ನು ಶಿವಮೊಗ್ಗ ಎಂಆರ್‌ಎಸ್‌ ಬಳಿ ತಡೆ ಹಿಡಿದು ಮುಷ್ಕರಕ್ಕೆ ಸಹಕರಿಸುವಂತೆ ಲಾರಿ ಚಾಲಕರು ಮನವಿ ಮಾಡಿದರು.

ಬುಧವಾರದಿಂದ ದೇಶಾದ್ಯಂತ ಲಾರಿ ಮುಷ್ಕರ ಆರಂಭವಾಗಿದೆ. ಜಿಲ್ಲೆಯಲ್ಲಿ ಬುಧವಾರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಹುತೇಕ ಲಾರಿಗಳು ರಸ್ತೆಗಿಳಿಯದೆ ಉಳಿದಿದ್ದವು. ಆದರೆ ಕೆಲವು ಲಾರಿ ಚಾಲಕರು ಎಂದಿನಂತೆ ಕೆಲಸ ಮುಂದುವರೆಸಿದ್ದರು.

ಎಂಆರ್‌ಎಸ್‌ ಬಳಿ ಲಾರಿ ತಡೆ

ಗುರುವಾರ ಬೆಳಗ್ಗೆ ಮುಷ್ಕರ ನಿರತ ಲಾರಿ ಚಾಲಕರು ರಸ್ತೆಗಿಳಿದಿದ್ದ ಲಾರಿಗಳನ್ನು ತಡೆದು ಮುಷ್ಕರಕ್ಕೆ ಬೆಂಬಲ ಸೂಚಿಸುವಂತೆ ಮನವಿ ಮಾಡಿದರು. ಎಂಆರ್‌ಎಸ್‌ ಬಳಿ ಲಾರಿಗಳನ್ನು ತಡೆಯಲಾಗಿದೆ. ಬಿ.ಹೆಚ್.ರಸ್ತೆಯಲ್ಲಿ ಸಂಚರಿಸುತ್ತಿದ್ದ ಲಾರಿಗಳನ್ನು ತಡೆದು ರಸ್ತೆ ಪಕ್ಕದಲ್ಲಿ ನಿಲ್ಲಿಸಲಾಗಿದೆ. ದೊಡ್ಡ ಸಂಖ್ಯೆಯ ಲಾರಿಗಳು ಸಾಲುಗಟ್ಟಿ ನಿಂತಿವೆ.

truck strike

truck strike

ಇದನ್ನೂ ಓದಿ – ನೇಣು ಬಿಗಿದ ಸ್ಥಿತಿಯಲ್ಲಿ ನವ ವಿವಾಹಿತೆ ಮೃತದೇಹ ಪತ್ತೆ

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment