ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA CRIME NEWS | 22 FEBRUARY 2021
ಮಳೆಯಿಂದಾಗಿ ತುಂಗಾ ಚಾನಲ್ ತಡೆಗೋಡೆ ಕುಸಿದು ಮನೆಗಳಿಗೆ ನೀರು ನುಗ್ಗಿದೆ. ಶಿವಮೊಗ್ಗ ಲೈವ್ ವೆಬ್‍ಸೈಟ್‍ನಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಇದನ್ನೂ ಓದಿ | ಮಳೆಗೆ ಚಾನೆಲ್ ಕಾಂಪೌಂಡ್ ಕುಸಿದು ಮನೆಗಳಿಗೆ ನೀರು, ಈತನಕ ಕ್ಯಾರೆ ಅನ್ನದ ಅಧಿಕಾರಿಗಳು, ಕೇಳೋರಿಲ್ಲ ಜನರ ಗೋಳು
ವಿದ್ಯಾನಗರ ವಾರ್ಡ್‍ನ ಸುಭಾಷ್ ನಗರದಲ್ಲಿ, ಚಾನಲ್‍ನ ತಡೆಗೋಡೆ ಕುಸಿದು, ಮನೆಗಳಿಗೆ ನೀರು ನುಗ್ಗಿತ್ತು. ಅಧಿಕಾರಿಗಳ್ಯಾರು ಸ್ಪಂದಿಸದ ಹಿನ್ನೆಲೆ, ಸ್ಥಳೀಯರೆ ನೀರಿನ ರಭಸ ತಡೆಗೆ ಪ್ರಯತ್ನಿಸಿದ್ದರು. ಶಿವಮೊಗ್ಗ ಲೈವ್‍ನಲ್ಲಿ ಈ ಸಂಬಂಧ ವರದಿ ಪ್ರಕಟವಾಗುತ್ತಿದ್ದಂತೆ, ಬೆಳಗ್ಗೆ ಅಧಿಕಾರಿಗಳು ದೌಡಾಯಿಸಿದ್ದಾರೆ.
ಪರಿಶೀಲನೆ ನಡೆಸಿದ ಅಧಿಕಾರಿಗಳು
ನೀರು ನುಗ್ಗಿದ್ದ ಪ್ರದೇಶದಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ಹಾನಿಯ ಕುರಿತು ಮಾಹಿತಿ ಪಡೆದರು.
ಇನ್ನು, ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಮಹಾನಗರ ಪಾಲಿಕೆ ಕಮಿಷನರ್ ಚಿದಾನಂದ ವಟಾರೆ, ಮಹಾನಗರ ಪಾಲಿಕೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಸುಮಾರು 30 ಮನೆಗಳಿಗೆ ನೀರು ನುಗ್ಗಿದೆ ಅಂತಾ ಅಂದಾಜು ಇದೆ. ಎಲ್ಲರಿಗೂ ಪರಿಹಾರ ಕೊಡಿಸುವ ಬಗ್ಗೆ ವರದಿ ಸಿದ್ದಪಡಿಸಲಾಗುತ್ತದೆ. ಇನ್ನು, ಆ ತಡೆಗೋಡೆ ತುಂಗಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದ್ದು. ಅದರ ಬಗ್ಗೆಯು ಪರಿಶೀಲಿಸಲಾಗುತ್ತಿದೆ ಎಂದರು.
ವಿಡಿಯೋ ರಿಪೋರ್ಟ್
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422