SHIVAMOGGA LIVE NEWS | 15 NOVEMBER 2023
SHIMOGA : ಮೈಸೂರು ರಂಗಾಯಣವು ಶಿವಮೊಗ್ಗ ರಂಗಾಯಣದ ಸಹಯೋಗದೊಂದಿಗೆ ‘ಮುಟ್ಟಿಸಿಕೊಂಡವನು’ ಹಾಗೂ ‘ಕಸಾಂದ್ರ ಮತ್ತು ಸತಿ’ ನಾಟಕಗಳ (Drama) ಪ್ರದರ್ಶನ ಆಯೋಜಿಸಲಾಗಿದೆ.
![]() |
ಶಿವಮೊಗ್ಗ ರಂಗಾಯಣದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ನ.18ರಂದು ‘ಮುಟ್ಟಿಸಿಕೊಂಡವನು’ ನಾಟಕ, ನ.19ರಂದು ‘ಕಸಾಂದ್ರ ಮತ್ತು ಸತಿ’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.
‘ಮುಟ್ಟಿಸಿಕೊಂಡವನು’ ನಾಟಕ ಪಿ. ಲಂಕೇಶ್ ಕಥೆಯಾಧಾರಿತವಾದದ್ದು. ರಂಗಾಯಣದ ಹಿರಿಯ ಕಲಾವಿದೆ ನಂದಿನಿ ಕೆ.ಆರ್. ಅವರು ನಿರ್ದೆಶಿಸಿದ್ದಾರೆ. ‘ಕಸಾಂದ್ರ ಮತ್ತು ಸತಿ’ ನಾಟಕ ಹೆಚ್.ಎಸ್. ಶಿವಪ್ರಕಾಶ್ ಅವರು ರಚಿಸಿದ್ದಾರೆ. ಮೊದಲ ಬಾರಿಗೆ ಎರಡು ನಾಟಕಗಳನ್ನು ಸೇರಿಸಿ ಪ್ರದರ್ಶಿಸುತ್ತಿರುವ ಹೊಸ ರಂಗಪ್ರಯೋಗ ಇದಾಗಿದೆ. ಈ ನಾಟಕವನ್ನು ಹೆಗ್ಗೋಡಿನ ಹಿರಿಯ ರಂಗ ನಿರ್ದೇಶಕರಾದ ಶ್ರೀ ಬಿ.ಆರ್. ವೆಂಕಟರಮಣ ಐತಾಳ ಅವರು ನಿರ್ದೇಶನ ಮಾಡಿದ್ದಾರೆ.
ಸಾಗರದಲ್ಲಿ ಗ್ಲಾನಿ ನಾಟಕ ಪ್ರದರ್ಶನ
ರಂಗಕರ್ಮಿ ಡಾ. ಗುರುರಾವ್ ಬಾಪಟ ಅವರ ನೆನಪಿನಲ್ಲಿ ನ.20ರಂದು ಎಲ್.ಬಿ.ಕಾಲೇಜಿನ ದೇವರಾಜ ಅರಸು ಕಲಾಕ್ಷೇತ್ರದ ಆವರನದಲ್ಲಿ ‘ಗ್ಲಾನಿ’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಈ ನಾಟಕವನ್ನು ಸಾಗರದ ಜಿ.ಎಸ್. ಭಟ್ಟ ಅವರು ರಚಿಸಿದ್ದಾರೆ. ಉದಯ ಕಲಾವಿದರು ರಂಗ ಸಂಸ್ಥೆ ನೇತೃತ್ವದಲ್ಲಿ ನಾಟಕ ಆಯೋಜಿಸಲಾಗಿದೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗ ನಿರ್ದೇಶಕರಾದ ಚಿದಂಬರರಾವ್ ಜಂಬೆ ನಾಟಕದ ನಿರ್ದೇಶನ ಮಾಡಿದ್ದಾರೆ. ನಾಟಕಕ್ಕೆ ಪ್ರವೇಶ ಉಚಿತ ಇರಲಿದೆ ಎಂದು ಇಲ್ಲಿನ ವಿನೋಬಾ ನಗರದ ನಿಧಿ ಪ್ರಕಾಶನ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ – ಶಿವಮೊಗ್ಗ ಮಾರಿಕಾಂಬಾ ಜಾತ್ರೆ, ವಾಟ್ಸಪ್ನಲ್ಲಿ ಡೇಟ್ ವೈರಲ್, ದೇಗುಲ ಸಮಿತಿ ಹೇಳಿದ್ದೆ ಬೇರೆ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200