SHIVAMOGGA LIVE NEWS | 20 FEBRUARY 2024
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
SHIMOGA : ಚಪ್ಪಲಿ ಸ್ಟಾಂಡ್ ವಿಚಾರವಾಗಿ ಎದುರಾಬದುರಾ ಮನೆಯವರ ಮಧ್ಯೆ ನಡೆಯುತ್ತಿದ್ದ ಜಗಳ ವಿಕೋಪಕ್ಕೆ ತಿರುಗಿ, ಕೈ ಕೈ ಮಿಲಾಯಿಸಿದ್ದಾರೆ. ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರೆ. ಠಾಣೆಗೆ ದೂರು, ಪ್ರತಿದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
‘ಬೆಳಗ್ಗೆದ್ದರೆ ಚಪ್ಪಲಿ ದರ್ಶನ’
ಶಿವಮೊಗ್ಗದ ಅಶೋಕ ನಗರದಲ್ಲಿ ಘಟನೆ ಸಂಭವಿಸಿದೆ. ಫ್ಯಾಕ್ಟರಿ ಕಾರ್ಮಿಕ ಮತ್ತು ಆತನ ಎದುರು ಮನೆಯ ವ್ಯಕ್ತಿ ಮಧ್ಯೆ ಜಗಳವಾಗಿದೆ. ಎದುರು ಮನೆಯವರು ಅವರಿಗೆ ಸೇರಿದ್ದ ಜಾಗದಲ್ಲಿ ಚಪ್ಪಲಿ ಸ್ಟಾಂಡ್ ಇರಿಸಿದ್ದರು. ಫ್ಯಾಕ್ಟರಿ ಕಾರ್ಮಿಕನ ಮನೆ ಬಾಗಿಲು ತೆಗೆದರೆ ಚಪ್ಪಲಿ ಸ್ಟಾಂಡ್ ಕಾಣಿಸಿತ್ತಿತ್ತು. ಬೆಳಗ್ಗೆದ್ದು ಬಾಗಿಲು ತೆಗೆದರೆ ಚಪ್ಪಲಿ ದರ್ಶನವಾಗುತ್ತದೆ ಎಂದು ಫ್ಯಾಕ್ಟರಿ ಕಾರ್ಮಿಕನ ಕುಟುಂಬದವರು ಆಕ್ಷೇಪಿಸಿದ್ದರು. ಈ ವಿಚಾರವಾಗಿ ಹಲವು ಬಾರಿ ಇಬ್ಬರ ಮಧ್ಯೆ ಜಗಳವಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಫ್ಯಾಕ್ಟರಿ ಕಾರ್ಮಿಕನ ದೂರಿನಲ್ಲಿ ಏನಿದೆ?
ಭಾನುವಾರ ಬೆಳಗ್ಗೆ ಫ್ಯಾಕ್ಟರಿ ಕಾರ್ಮಿಕ ಎದುರು ಮನೆಯವರ ಚಪ್ಪಲಿ ಸ್ಟಾಂಡ್ ಕಾಣದಂತೆ ಅಡ್ಡಲಾಗಿ ಫೈಬರ್ ಶೀಟ್ ಇರಿಸಿದ್ದ. ಇದನ್ನು ಗಮನಿಸಿದ ಎದುರು ಮನೆಯಾತ ಭಾನುವಾರ ರಾತ್ರಿ ಗಲಾಟೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಗಲಾಟೆ ವಿಕೋಪಕ್ಕೆ ತಿರುಗಿ, ಕೈ ಕೈ ಮಿಲಾಯಿಸಿದ್ದಾರೆ. ಎದುರು ಮನೆಯಾತ ಫ್ಯಾಕ್ಟರಿ ಕಾರ್ಮಿಕನ ತಲೆಗೆ ಕಲ್ಲಿನಿಂದ ಹೊಡೆದು ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಎದುರು ಮನೆಯಾತನ ದೂರಿನಲ್ಲೇನಿದೆ?
ಗಲಾಟೆ ವೇಳೆ ಎದುರು ಮನೆಯಾತ ಫ್ಯಾಕ್ಟರಿ ಕಾರ್ಮಿಕನನ್ನು ದಬ್ಬಿದ್ದಾನೆ. ಆಗ ಫ್ಯಾಕ್ಟರಿ ಕಾರ್ಮಿಕ ಅಲ್ಲಿದ್ದ ಕಲ್ಲಿನಿಂದ ಎದುರು ಮನೆಯಾತನ ಕಣ್ಣಿನ ಕೆಳಭಾಗಕ್ಕೆ ಹೊಡೆದಿದ್ದಾನೆ. ಮೈಕೈಗು ಹೊಡೆದಿದ್ದು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾಗಿ ಆರೋಪಿಸಿದ್ದಾರೆ.
ಘಟನೆ ಸಂಬಂಧ ಇಬ್ಬರು ದೂರಗಳನ್ನು ಸ್ವಕೀರಿಸಿರುವ ದೊಡ್ಡಪೇಟೆ ಠಾಣೆ ಪೊಲೀಸರು, ಪ್ರತೇಕ ಎಫ್‌ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ – ಭದ್ರಾ ನದಿ, ನಾಲೆ ಸುತ್ತಮುತ್ತ 144 ಸೆಕ್ಷನ್ ನಿಷೇಧಾಜ್ಞೆ, ಕಾರಣವೇನು?
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು






