ಚಿಕಿತ್ಸೆಗೆ ಬಂದಿದ್ದ ಚಿತ್ರದುರ್ಗದ ಮಹಿಳೆ ಸೇರಿ ಇಬ್ಬರು ರೋಗಿಗಳು ಶಿವಮೊಗ್ಗದಲ್ಲಿ ನಾಪತ್ತೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 3 JANUARY 2023

SHIMOGA : ಎರಡು ಪ್ರತ್ಯೇಕ ಪ್ರಕರಣದಲ್ಲಿ ಚಿಕಿತ್ಸೆಗೆಂದು ಶಿವಮೊಗ್ಗದ ಎರಡು ಆಸ್ಪತ್ರೆಗೆ ಬಂದಿದ್ದ ಇಬ್ಬರು ರೋಗಿಗಳು ನಾಪತ್ತೆಯಾಗಿದ್ದಾರೆ (missing). ಈ ಸಂಬಂಧ ಎರಡು ದೂರು ದಾಖಲಾಗಿದೆ.

ಪ್ರಕರಣ 1 – ಮಾನಸಿಕ ಅಸ್ವಸ್ಥೆ ನಾಪತ್ತೆ

ಶಿವಮೊಗ್ಗ ಮಾನಸ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆಗೆಂದು ಬಂದಿದ್ದ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ನಾಪತ್ತೆಯಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಚಿಗಳಿಕಟ್ಟೆ ಗ್ರಾಮದ ದುರ್ಗಮ್ಮ (50) ನಾಪತ್ತೆಯಾಗಿರುವ ಮಹಿಳೆ. ಚಿಕಿತ್ಸೆಗೆಂದು ಮಾನಸ ನರ್ಸಿಂಗ್ ಹೋಂನಲ್ಲಿ ದಾಖಲಾಗಿದ್ದರು. missing persons in Shimogaಡಿ.25ರಂದು ಆಸ್ಪತ್ರೆಯಿಂದ ದುರ್ಗಮ್ಮ ತಪ್ಪಿಸಿಕೊಂಡಿದ್ದಾರೆ (missing). ಇವರ ಸುಳಿವು ಸಿಕ್ಕಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಕರಣ 2 – ಚಿಕಿತ್ಸೆಗೆ ಬಂದವರು ಕಾಣೆ

ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದಿದ್ದ ವ್ಯಕ್ತಿಯೊಬ್ಬರು ಕಾಣೆಯಾಗಿದ್ದಾರೆ. ಸೊರಬ ತಾಲೂಕಿನ ರಮೇಶ್ (35) ನಾಪತ್ತೆಯಾಗಿದ್ದಾರೆ. ನ.19ರಂದು ರಮೇಶ್ ಅವರು ಮೆಗ್ಗಾನ್ ಆಸ್ಪತ್ರೆಗೆ ಬಂದಿದ್ದರು. ಆ ಬಳಿಕ ಅವರು ನಾಪತ್ತೆಯಾಗಿದ್ದಾರೆ. ಇವರ ಕುರಿತು ಸುಳಿವು ಸಿಕ್ಕಲ್ಲಿ ದೊಡ್ಡಪೇಟೆ ಠಾಣೆಗೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ – ಮನೆಯ ಶೌಚಾಲಯದಲ್ಲಿ ನೇಣು ಬಿಗಿದು ವ್ಯಕ್ತಿ ಸಾವು

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment