ಶಿವಮೊಗ್ಗ : ಗಾಂಧಿ ಪಾರ್ಕ್‌ನ (Gandhi Park) ನಿರ್ವಹಣೆ ಕೊರತೆ ಕುರಿತು ಶಿವಮೊಗ್ಗ ಲೈವ್.ಕಾಂ ವರದಿ ಬೆನ್ನಿಗೆ ಉಪ ಲೋಕಾಯುಕ್ತ ನ್ಯಾ. ಕೆ.ಎನ್.ಫಣೀಂದ್ರ ಭೇಟಿ ನೀಡಿದ್ದರು. ಗಾಂಧಿ ಪಾರ್ಕ್ ದುಸ್ಥಿತಿ ಕಂಡು ಗರಂ ಆದರು. ಕಮಿಷನರ್ ವಿರುದ್ಧ ಕೇಸ್ ದಾಖಲಿಸುವುದಾಗಿ ತಿಳಿಸಿದ್ದಾರೆ.
ಶಿವಮೊಗ್ಗಕ್ಕೆ ಭೇಟಿ ನೀಡಿರುವ ನ್ಯಾ. ಕೆ.ಎನ್.ಫಣೀಂದ್ರ ಅವರು ನಗರದ ವಿವಿಧೆಡೆ ಇಂದು ಬೆಳಗ್ಗೆಯಿಂದ ದಿಢೀರ್ ಭೇಟಿ ನೀಡುತ್ತಿದ್ದಾರೆ. ಗಾಂಧಿ ಪಾರ್ಕ್‌ಗೆ ಭೇಟಿ ನೀಡಿದ್ದ ಅವರು ಇಲ್ಲಿನ ಅವಸ್ಥೆ ಕಂಡು ಹೌಹಾರಿದರು. ಪಾಲಿಕೆ ಕಮಿಷನರ್ ಕವಿತಾ ಯೋಗಪ್ಪನವರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಪಾರ್ಕ್ ಅವಸ್ಥೆ ಕಂಡು ಫುಲ್ ಗರಂ
ಗಾಂಧಿ ಪಾರ್ಕ್‌ನ (Gandhi Park) ವಿವಿಧೆಡೆ ತೆರಳಿದ ಉಪ ಲೋಕಾಯುಕ್ತ ನ್ಯಾ. ಫಣೀಂದ್ರ ಅವರು, ವಾಯು ವಿಹಾರಕ್ಕೆ ಬಂದಿದ್ದವರು ಮತ್ತು ಸಾರ್ವಜನಿಕರಿಂದ ಮಾಹಿತಿ ಪಡೆದರು. ಈ ಸಂದರ್ಭ ಪಾರ್ಕ್‌ನ ಅವ್ಯವಸ್ಥೆ ಕುರಿತು ಜನರು ಮಾಹಿತಿ ನೀಡಿದರು. ಇದರಿಂದ ಗರಂ ಅದ ಉಪ ಲೋಕಾಯುಕ್ತರು ಮಹಾನಗರ ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಉಪ ಲೋಕಾಯುಕ್ತರು ಏನೆಲ್ಲ ಸೂಚಿಸಿದರು?
ಗಾಂಧಿ ಪಾರ್ಕ್‌ನಲ್ಲಿ ಜನರು ಆರೋಪ ಮಾಡುತ್ತಿರುವುದು ಸುಳ್ಳಲ್ಲ. ಇಲ್ಲಿನ ಅವ್ಯವಸ್ಥೆ ಬರಿಗಣ್ಣಿಗೆ ಗೋಚರಿಸುತ್ತಿದೆ ಎಂದು ಉಪ ಲೋಕಾಯಕ್ತ ನ್ಯಾ. ಫಣೀಂದ್ರ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಅಧಿಕಾರಿಗಳಿಗೆ ಹಲವು ಸಲಹೆ ನೀಡಿದರು. ಇಲ್ಲಿದೆ ಪಾಯಿಂಟ್ಸ್.
ಕುಡಿಯುವ ನೀರು, ಸ್ವಚ್ಚತೆ ಮತ್ತು ಶೌಚಾಲಯದ ಸಮಸ್ಯೆಯನ್ನು ತುರ್ತಾಗಿ ಪರಿಹರಿಸಬೇಕು. ಇನ್ನು, 20 ದಿನದಲ್ಲಿ ಈ ಕುರಿತು ತಮಗೆ ವರದಿ ನೀಡಬೇಕು. ಪ್ರತಿ 15 ದಿನಕ್ಕೊಮ್ಮೆ ಲೋಕಾಯುಕ್ತ ಡಿವೈಎಸ್‌ಪಿ ನೇತೃತ್ವದಲ್ಲಿ ಗಾಂಧಿ ಪಾರ್ಕ್‌ನ್ನು ಪರಿಶೀಲಿಸಲಾಗುತ್ತದೆ.
ಇದನ್ನೂ ಓದಿ » ಧಗಧಗ ಹೊತ್ತಿ ಉರಿಯಲಿದೆ ಗಾಂಧಿ ಪಾರ್ಕ್, ಕೆಲವರಿಗಿದು ಓಪನ್ ಬಾರ್, ಹೇಗಿದೆ ಒಳಗಿನ ಸ್ಥಿತಿ?
ಕಮಿಟಿ ಸ್ಥಾಪಿಸಿ ಗಾಂಧಿ ಪಾರ್ಕ್‌ನ ನಿರ್ವಹಣೆ ಮಾಡಬೇಕು. ಸಾದ್ಯವಿರುವ ಕಡೆಯಲ್ಲೆಲ್ಲ ಗುಂಡಿ ತೆಗೆದು ಗೊಬ್ಬರ ಮಾಡಿಕೊಳ್ಳಲು ಇಲ್ಲಿಯೇ ಅವಕಾಶವಿದೆ. ಇನ್ನು, ದೋಷವಿರುವ ಆಟಿಕೆ ಪೂರೈಸಿದವರಿಗೆ ನೊಟೀಸ್ ನೀಡಬೇಕು. ಗಾಂಧಿ ಪಾರ್ಕ್‌ನಲ್ಲಿ ನಿರಂತರವಾಗಿ ಮೂರ್ನಾಲ್ಕು ಸಿಬ್ಬಂದಿ ಕಾರ್ಯನಿರ್ವಹಿಸಬೇಕು.
ಪಾರ್ಕ್‌ನಲ್ಲಿರುವ ಗಿಡಗಳಿಗೆ ಟ್ಯಾಂಕರ್‌ನಲ್ಲಿ ನೀರು ಹಾಯಿಸಲು ಸಮಸ್ಯೆಯೇನು? ಬೋರ್‌ವೆಲ್ ಸಮಸ್ಯೆಯಾದರೆ ಪರ್ಯಾಯ ವ್ಯವಸ್ಥೆ ಮಾಡಲು ಸದ್ಯವಿಲ್ಲವೆ? 20 ದಿನದೊಳಗೆ ನೀರಿನ ಸಮಸ್ಯೆ ಪರಿಹರಿಸಬೇಕು. ಪಾರ್ಕ್‌ನಲ್ಲಿ ಕುಡಿಯುವ ನೀರಿನ ಫಿಲ್ಟರ್‌ಗಳನ್ನು ಇರಿಸಬೇಕು.
ಅನುದಾನವಿಲ್ಲ ಎಂದು ಉತ್ತರ ನೀಡುವುದು ಸರಿಯಲ್ಲ. ಸರ್ಕಾರದಿಂದ ಅನುದಾನ ತರಿಸಿಕೊಂಡು ಉದ್ಯಾನವನದ ನಿರ್ವಹಣೆ ಮಾಡಬೇಕು. ಜನರು ತಮ್ಮ ವಿರುದ್ಧ ವೈಯಕ್ತಿಕವಾಗಿ ಆರೋಪ ಮಾಡುತ್ತಿಲ್ಲ. ಕಮಿಷನರ್ ಆಗಿ ಈ ಉದ್ಯನವನದ ಜವಾಬ್ದಾರಿ ತಮ್ಮ ಮೇಲಿದೆ.
ಕಮಿಷನರ್, ಇಂಜಿನಿಯರ್ ವಿರುದ್ಧ ಕೇಸ್
ಇನ್ನು, ಗಾಂಧಿ ಪಾರ್ಕ್ (Gandhi Park) ಅವ್ಯವಸ್ಥೆ ಹಿನ್ನಲೆ ಮಹಾನಗರ ಪಾಲಿಕೆ ಕಮಿಷನರ್ ಮತ್ತು ಕಾರ್ಯನಿರ್ವಾಹಕ ಇಂಜಿನಿಯರ್ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸುವುದಾಗಿ ತಿಳಿಸಿದರು.
ಕಮಿಷನರ್ ಮತ್ತು ಕಾರ್ಯನಿರ್ವಾಹಕ ಇಂಜಿನಿಯರ್ ವಿರುದ್ಧ ಇಂದೇ ಪ್ರಕರಣ ದಾಖಲಿಸಲಾಗುತ್ತದೆ. ಇಲ್ಲಿನ ಸಮಸ್ಯೆಗಳು ಪರಿಹಾರದ ಆದ ಬಳಿಕ ಪ್ರಕರಣ ಹಿಂಪಡೆಯಲಾಗುತ್ತದೆ. ಇಲ್ಲವಾದಲ್ಲಿ ಒಂದು ವರ್ಷವಾದರು ತಮ್ಮ ವಿರುದ್ಧ ಕೇಸ್ ಇರಲಿದೆ. ಅನುದಾನ ಬಂದ ಕೂಡಲೆ ತುರ್ತಾಗಿ ಇಲ್ಲಿನ ಸಮಸ್ಯೆ ಪರಿಹರಿಸಬೇಕು.
– ನ್ಯಾ. ಫಣೀಂದ್ರ, ಉಪ ಲೋಕಾಯುಕ್ತ
ಜನರ ಮೇಲೂ ಇದೆ ಜವಾಬ್ದಾರಿ
ಇನ್ನು, ವಾಕಿಂಗ್‌ಗೆ ಬಂದವರ ಜೊತೆಗೆ ಚರ್ಚೆ ನಡೆಸಿದ ಉಪ ಲೋಕಾಯುಕ್ತ ನ್ಯಾ. ಫಣೀಂದ್ರ, ಗಾಂಧಿ ಪಾರ್ಕ್ ನಿರ್ವಹಣೆಯಲ್ಲಿ ಸಾರ್ವಜನಿಕರ ಪಾತ್ರವು ಇದೆ ಎಂದು ತಿಳಿಸಿದರು.
ಗಾಂಧಿ ಪಾರ್ಕ್‌ಗೆ ಬರುವವರು ಅಸೋಸಿಯೇಷನ್ ಸ್ಥಾಪಿಸಿಕೊಳ್ಳಬೇಕು. ಇದು ನಮ್ಮೆಲ್ಲರ ಪಾರ್ಕ್. ಇಲ್ಲಿನ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರಬೇಕು. ಪಾರ್ಕ್‌ನಲ್ಲಿ ಎಲ್ಲೆಂದರಲ್ಲಿ ಕಸ ಹಾಕುವವರು, ಇಲ್ಲಿನ ಉಪಕರಣ ಹಾನಿ ಮಾಡುವವರ ಕುರಿತು ಅಧಿಕಾರಿಗಳ ಗಮನಕ್ಕೆ ತಂದು ಶಿಕ್ಷೆಯಾಗುವಂತೆ ಮಾಡಬೇಕಿದೆ.
– ನ್ಯಾ. ಫಣೀಂದ್ರ, ಉಪ ಲೋಕಾಯುಕ್ತ
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯಿತಿ ಸಿ.ಇ.ಒ ಹೇಮಂತ್ ಕುಮಾರ್, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಮಂಜುನಾಥ ಚೌದರಿ ಸೇರಿದಂತೆ ಹಲವು ಅಧಿಕಾರಿಗಳು ಈ ಸಂದರ್ಭ ಇದ್ದರು.

ಇದನ್ನೂ ಓದಿ » ಸಾಗರದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಜಫ್ತಿ, ನ್ಯಾಯಾಲಯದ ಆವರಣಕ್ಕೆ ರವಾನೆ, ಕಾರಣವೇನು?
upa lokayukta sudden visit to gandhi park. case to be filed against Palike Commissioner.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200