SHIVAMOGGA LIVE NEWS | EXAM | 31 ಮೇ 2022
ಯುಪಿಎಸ್ಸಿ ಪರೀಕ್ಷೆಯಲ್ಲಿ ಶಿವಮೊಗ್ಗದ ವೈದ್ಯ ಡಾ. ಪ್ರಶಾಂತ್ ಕುಮಾರ್ 641ನೇ RANK ಪಡೆದು ಸಾಧನೆ ಮಾಡಿದ್ದಾರೆ. ಇವರ ಸಾಧನೆಗೆ ಜಿಲ್ಲೆಯಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.
ನಾಗರಿಕ ಸೇವೆಯ ಕನಸು ಕಟ್ಟಿಕೊಂಡಿರುವವರಿಗೆ ಡಾ. ಪ್ರಶಾಂತ್ ಕುಮಾರ್ ಅವರ ಸಾಧನೆ ಮಾದರಿ ಅನಿಸಿದೆ. ಈ ನಡುವೆ ಅವರು ಅಧ್ಯಯನ ಕ್ರಮ ಹೇಗಿತ್ತು, ಯಾವೆಲ್ಲ ವಿಷಯಗಳನ್ನು ಹೇಗೆ ಓದಿಕೊಂಡರು ಅನ್ನುವ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಪರೀಕ್ಷೆ ಸಿದ್ಧತೆ ಹೇಗಿತ್ತು?
ಡಾ.ಪ್ರಶಾಂತ್ ಕುಮಾರ್ ಅವರು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯದಿಂದ ಎಂಬಿಬಿಎಸ್ ಪದವಿ ಪಡೆದಿದ್ದಾರೆ. ಆ ನಂತರ ಬೆಂಗಳೂರಿನ ಇಂಡಿಯಾ 4 ಐಎಎಸ್ ಸಂಸ್ಥೆಯ ವಿಷಯ ವಸ್ತುಗಳ ಅಧ್ಯಯನಕ್ಕೆ ಸಬ್‌ಸ್ಕ್ರೈಬ್ ಮಾಡಿದ್ದರು.
ಯುಪಿಎಸ್ಸಿ ಪರೀಕ್ಷೆಗಾಗಿ ಡಾ.ಪ್ರಶಾಂತ್ ಕುಮಾರ್ ಅವರು ಎರಡು ವರ್ಷದ ಸತತ ಅಧ್ಯಯನ ನಡೆಸಿದ್ದರು. ನಿತ್ಯ 8-10 ಗಂಟೆ ಅಧ್ಯಯನ ಮಾಡಿದ್ದರು. ಕೆಲವು ಸಂದರ್ಭ 12 ಗಂಟೆ ಓದುತ್ತಿದ್ದರು.
ಮಡಿಕಲ್ ಸೈನ್ಸ್ ಐಚ್ಛಿಕ ವಿಷಯವಾಗಿತ್ತು. ಇನ್ನು, ಉಳಿದ ಪಠ್ಯಗಳ ವಿಚಾರವಾಗಿ ಆರಂಭದಲ್ಲಿ ಗೊಂದಲವಾಗಿತ್ತು. ಆದರೆ ಅಧ್ಯಯನ ಆರಂಭಿಸುತ್ತಿದ್ದಂತೆ ಸ್ಪಷ್ಟತೆ ಸಿಕ್ಕಿತು ಅನ್ನುತ್ತಾರೆ ಡಾ.ಪ್ರಶಾಂತ್ ಕುಮಾರ್.
ಅಭ್ಯರ್ಥಿಗಳು ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಕುರಿತು ಸ್ಪಷ್ಟತೆ ಪಡೆದುಕೊಳ್ಳಬೇಕು. ಸರಿಯಾಗಿ ಯೋಜನೆ ಸಿದ್ಧಪಡಿಸಿಕೊಂಡು, ಓದುವ ವಿಷಯದಲ್ಲಿ ಸ್ಪಷ್ಟತೆ ಪಡೆದುಕೊಳ್ಳಬೇಕು. ಕಷ್ಟಪಟ್ಟು ಓದಬೇಕು.
ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಯ ಪ್ರಮುಖರು ಎಲ್.ಬಿ.ಎಸ್. ನಗರದಲ್ಲಿರುವ ಡಾ.ಪ್ರಶಾಂತ್ ಕುಮಾರ್ ಅವರ ಮನೆಗೆ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ – ಮೊದಲ ಪ್ರಯತ್ನದಲ್ಲೇ UPSC ಪರೀಕ್ಷೆ ಪಾಸಾದ ಶಿವಮೊಗ್ಗದ ವೈದ್ಯ
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200