ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 17 ಡಿಸೆಂಬರ್ 2019
ಈರುಳ್ಳಿ ಬೆಲೆ ಏರಿಕೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಮಹಿಳೆಯರಂತು ಸರ್ಕಾರಕ್ಕೆ ಹಿಡಿ ಶಾಪ ಹಾಕಿದ್ದರು. ಆದರೀಗ ಉಳಿದ ತರಕಾರಿಗಳು ಈರುಳ್ಳಿ ಜೊತೆಗೆ ಸ್ಪರ್ಧೆಗೆ ಬಿದ್ದಂತೆ ಕಾಣುತ್ತಿದೆ. ದಿಢೀರನೆ ಹಲವು ತರಕಾರಿ ಬೆಲೆ ನೂರರ ಗಡಿ ದಾಟಿದೆ.
ಶಿವಮೊಗ್ಗ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ಒಂದು ಕೆಜಿ ತರಕಾರಿ ಕೊಳ್ಳಲು ಗರಿಗರಿ ನೋಟನ್ನು ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಯಾವೆಲ್ಲ ತರಕಾರಿಗೆ ಎಷ್ಟಾಗಿದೆ ಬೆಲೆ?
200 ರೂ.ವರೆಗೆ ಮುಟ್ಟಿದ್ದ ಈರುಳ್ಳಿ ಬೆಲೆ ಈಗ 100 ರೂ. ನಿಂದ 120 ರೂ.ವರೆಗೆ ತಗ್ಗಿದೆ. ಆದರೆ ಕೆಲವು ತರಕಾರಿಗಳು ಈರುಳ್ಳಿಗಿಂತಲೂ ಹೆಚ್ಚಾಗಿದೆ ಅನ್ನುತ್ತಾರೆ ವ್ಯಾಪಾರಿಗಳು.
ಶಿವಮೊಗ್ಗದಲ್ಲಿ ಈರುಳ್ಳಿ 100, ಟೊಮ್ಯಾಟೋ 10, ಬಿಟ್ರೋಟ್ 60, ಆಲೂಗೆಡ್ಡೆ 40, ಸೀಮೆ ಬದನೆ 40, ಮುಳುಗಾಯಿ 30, ಕ್ಯಾರೇಟ್ 80, ಬೆಂಡೆಕಾಯಿ 60, ಮೂಲಂಗಿ 40, ಬೀನ್ಸ್ 80, ಹಸಿ ಮೆಣಸು 40, ಹಿರೇಕಾಯಿ 60, ಗೆಡ್ಡೆಕೋಸು 40, ಹೂಕೋಸು 40, ಕ್ಯಾಪ್ಸಿಕಂ 60, ಬಣ್ಣದ ಸೌತೆ 20, ಬೆಳ್ಳುಳ್ಳಿ 200, ಎಲೆಕೋಸು 20, ತೊಂಡೆಕಾಯಿ 60, ಹಾಗಲಕಾಯಿ 60, ನುಗ್ಗೆ ಕಾಯಿ 400, ಕಾಳುಬೀನ್ಸ್ 100, ಅವರೆಕಾಯಿ 40, ಕುಂಬಳಕಾಯಿ 20, ಹಸಿ ಅರಿಶಿನ 100, ಬಾಳೆಕಾಯಿ 10 (1 ಪೀಸ್), ಬಟಾಣಿ 80, ನೆಲ್ಲಿಕಾಯೊ 60, ಸಿಹಿಗೆಣಸು 40, ಸುವರ್ಣಗೆಡ್ಡೆ 40 ರೂ. ಇದೆ.
ತರಕಾರಿ ಬೆಲೆ ಏರಿಕೆಗೆ ಕಾರಣವೇನು?
ಸಾಮಾನ್ಯವಾಗಿ ಮಳೆಗಾಲದ ನಂತರ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬರುತ್ತದೆ. ಆದರೆ ಈ ಬಾರಿ ಅಕ್ಟೋಬರ್’ವರೆಗೂ ಮಳೆ ಮುಂದುವರೆದಿದ್ದರಿಂದ ತರಕಾರಿ ಬೆಳೆ ನಾಶವಾಗಿತ್ತು. ತಮಿಳುನಾಡು ಭಾಗದಲ್ಲಿ ನವೆಂಬರ್’ವರೆಗೆ ಸುರಿದ ಮಳೆಗೂ ಭಾರಿ ಪ್ರಮಾಣದಲ್ಲಿ ಬೆಳೆ ನಾಶವಾಗಿತ್ತು. ಹೀಗಾಗಿ ಮಾರುಕಟ್ಟೆಗೆ ಆವಕ ಕಡಿಮೆಯಾಗಿದೆ.
ಹೊಸ ಬೆಳೆ ಬರಬೇಕು
ಈ ವರ್ಷದಷ್ಟು ಬೆಲೆ ಏರಿಕೆ ಯಾವ ವರ್ಷವೂ ಆಗಿಲ್ಲ. ಸುತ್ತಮುತ್ತಲ 20 ಜಿಲ್ಲೆಗಳಿಂದ ತರಕಾರಿ ಬರುತಿತ್ತು. ಈ ವರ್ಷ ಮಳೆ ಕಾರಣಕ್ಕೆ ಬೆಳೆ ನಾಶವಾಗಿದೆ. ಈರುಳ್ಳಿ ದರ 240 ರೂ.ಗೆ ಹೋಗಿದ್ದು ನಾನು ನೋಡೇ ಇಲ್ಲ. ಪ್ರಸ್ತುತ ತಮಿಳುನಾಡಿನಿಂದ ತರಕಾರಿ ತರಲಾಗುತ್ತಿದೆ. ಹಾಗಾಗಿ ಬೆಲೆ ಇಷ್ಟಿದೆ. ಇಲ್ಲದಿದ್ದರೆ ತರಕಾರಿ ಮಾರುವುದೇ ಕಷ್ಟವಿತ್ತು. ಹೊಸ ಬೆಳೆ ಬರುವವರೆಗೂ ಬೆಲೆ ಇಳಿಕೆಯಾಗಲ್ಲ ಎನ್ನುತ್ತಾರೆ ಗಾಂಧಿ ಬಜಾರ್ ತರಕಾರಿ ವ್ಯಾಪಾರಿ ನೂರಲ್ಲಾ.
ಗ್ರಾಹಕರ ಜೇಬಿಗೆ ತಟ್ಟಿದ ಬಿಸಿ
ಮಗಳ ಮದುವೆ ಇದೆ. ಈರುಳ್ಳಿ ಕೊಳ್ಳುವುದೇ ಹೇಗೆಂಬ ಚಿಂತೆ ಇತ್ತು. ಎಲ್ಲ ತರಕಾರಿಗಳು ದುಬಾರಿಯಾಗಿವೆ. ಬಡವರು, ಮಧ್ಯಮ ವರ್ಗದವರು ಮದುವೆ ಮಾಡುವುದೇ ಕಷ್ಟವಾಗಿದೆ ಅನ್ನುತ್ತಾರೆ ಭದ್ರಾವತಿಯ ರಾಜಣ್ಣ.
ಬೆಲೆ ಇಳಿಕೆಯ ನಿರೀಕ್ಷೆಯಲ್ಲಿ
ಚಳಿಗಾಲದಲ್ಲಿ ಮರಗಿಡಗಳು ಎಲೆ ಉದುರುವ ಕಾಲವಾಗಿದ್ದು, ಜತೆಗೆ ಚಳಿಗೆ ಹೂವು ಬಿಡುವುದಿಲ್ಲ. ಹೀಗಾಗಿ ಇಳುವರಿ ಕೂಡ ಕಡಿಮೆ ಇರುತ್ತದೆ. ಡಿ.17ರಿಂದ ಧನುರ್ಮಾಸ ಆರಂಭ ಆಗುವುದರಿಂದ ಶುಭ ಮುಹೂರ್ತಗಳು ಇರುವುದಿಲ್ಲ. ನಂತರ ತರಕಾರಿ ಬೆಲೆ ಇಳಿಯುವ ನಿರೀಕ್ಷೆಯಲ್ಲಿದ್ದಾರೆ ವ್ಯಾಪಾರಿಗಳು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
Vegetable price raises in Shimoga city. Onion price was about 200 rupees a KG. Now various other vegetable prices raise.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422