ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 10 OCTOBER 2023
SHIMOGA : ವಿದ್ಯಾನಗರದ ವೃತ್ತಾಕಾರದ ರೈಲ್ವೆ ಮೇಲ್ಸೇತುವೆ (Flyover) ನಿರ್ಮಾಣ ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ. ಕಾಮಗಾರಿ ಬಹುತೇಕ ಕೊನೆಯ ಹಂತಕ್ಕೆ ತಲುಪಿದೆ. ಸ್ಟೀಲ್ ಕಾಂಪೋಸಿಟ್ ಅಳವಡಿಕೆ ಕಾರ್ಯ ಆರಂಭಾಗಿದೆ.
ಸ್ಟೀಲ್ ಕಾಂಪೋಸಿಟ್ ಅನ್ನು ಸೇತುವೆಯ ಎತ್ತರಕ್ಕೆ ಎತ್ತರಿಸಿ ನಿಲ್ಲಿಸಲಾಗಿದೆ. ಈಗ ಅದನ್ನು ಸೇತುವೆಯ ಎರಡು ಬದಿಯಲ್ಲಿ ಇರಿಸಬೇಕಿದೆ. ನವೆಂಬರ್ ತಿಂಗಳ ಮೊದಲ ವಾರದಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ.
ವಾಹನಗಳ ಮಾರ್ಗ ಬದಲಾವಣೆ
ಸ್ಟೀಲ್ ಕಾಂಪೋಸಿಟ್ ಅಳವಡಿಕೆ ಕಾರ್ಯದ ಹಿನ್ನೆಲೆ ನವೆಂಬರ್ 8ರವರೆಗೆ ಶಿವಮೊಗ್ಗ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಪರ್ಯಾಯ ಮಾರ್ಗ ಸೂಚಿಸಿ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಆದೇಶಿಸಿದ್ದಾರೆ.
ಶಿವಮೊಗ್ಗದಿಂದ ಚಿತ್ರದುರ್ಗ ಕಡೆಗೆ ತೆರಳುವ ಬೈಕ್, ಕಾರು, ಲಘು ವಾಹನಗಳು ಶಾಂತಮ್ಮ ಲೇಔಟ್ ಮುಖಾಂತರ ಹೋಗಬೇಕು.
ಬಸ್, ಲಾರಿ, ಸರಕು ಸಾಗಣೆ ವಾಹನಗಳು ಸಂಗೊಳ್ಳಿ ರಾಯಣ್ಣ ವೃತ್ತ, ಹೊನ್ನಾಳಿ ರಸ್ತೆ, ಹೊಳಲೂರು ಮಾರ್ಗವಾಗಿ ತುಂಗಭದ್ರಾ ಹೊಸ ಸೇತುವೆ, ಸನ್ಯಾಸಿ ಕೋಡಮಗ್ಗೆ, ಹೊಳೆಹೊನ್ನೂರು ಮೂಲಕ ಸಂಚರಿಸಬಹುದು. ಅಥವಾ ಎಂಆರ್‌ಎಸ್ ಸರ್ಕಲ್, ಹರಿಗೆ, ಮಾಚೇನಹಳ್ಳಿ, ಭದ್ರಾವತಿ ಮೂಲಕ ಚಲಿಸಬಹುದು.
ಇದನ್ನೂ ಓದಿ – ವಿದ್ಯಾನಗರ ರೈಲ್ವೆ ಮೇಲ್ಸೇತುವೆ, ಹೇಗಾಗಿದೆ ಕೆಲಸ? ಮೇಲ್ಭಾಗದಲ್ಲಿ ಹೇಗೆ ಕಾಣುತ್ತೆ? ಇಲ್ಲಿದೆ ಸೇತುವೆಯ 8 ವಿಶೇಷತೆ
ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ಬರುವ ವಾಹನಗಳು ರೈಲ್ವೆ ಮೇಲ್ವೇತುವೆ ಸರ್ವೀಸ್ ರಸ್ತೆ ಮೂಲಕವೇ ನಗರಕ್ಕೆ ಆಗಮಿಸಬಹುದು ಎಂದು ತಿಳಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422