ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 23 MAY 2021
ಲಸಿಕೆ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಇದರ ವಿಡಿಯೋ, ಫೋಟೊಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪರ, ವಿರೋಧ ಚರ್ಚೆಗೆ ಕಾರಣವಾಗಿದೆ.
ಕುವೆಂಪು ರಸ್ತೆಯಲ್ಲಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತರಬೇತಿ ಕೇಂದ್ರದಲ್ಲಿ ಲಸಿಕೆ ನೀಡಲಾಗುತ್ತಿದೆ. ಇಲ್ಲಿ ಲಸಿಕೆಗಾಗಿ ಜನರು ಬೆಳಗ್ಗೆಯಿಂದಲೆ ಸರತಿಯಲ್ಲಿ ನಿಲ್ಲುತ್ತಾರೆ. ಟೋಕನ್ ಕೊಟ್ಟು ನಿಗದಿತ ಸಮಯಕ್ಕೆ ಲಸಿಕೆ ನೀಡುವ ಪದ್ಧತಿ ಇಲ್ಲಿದೆ. ಇದೆ ಕೇಂದ್ರದಲ್ಲಿ ಇವತ್ತು ಮಾತಿನ ಚಕಮಕಿ ನಡೆದಿದೆ.
ಬಿಜೆಪಿ ಕಾರ್ಯಕರ್ತರ ವಾದ ಏನು?
ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಬಿಜೆಪಿ ಯುವ ಮೋರ್ಚಾ ಮುಖಂಡ ಸುಹಾಸ್ ಶಾಸ್ತ್ರಿ, ಪ್ರತಿದಿನ ಲಸಿಕಾ ಕೇಂದ್ರಕ್ಕೆ ಹೋಗಿ ಪರಿಶೀಲಿಸುತ್ತಿದ್ದೆವು. ಮೂರ್ನಾಲ್ಕು ದಿನದಿಂದ ಲಸಿಕಾ ಕೇಂದ್ರಕ್ಕೆ ಹೋಗಿರಲಿಲ್ಲ. ಹಾಗಾಗಿ ಕಾಂಗ್ರೆಸ್ ಕಾರ್ಯಕರ್ತರು, ಮಾಜಿ ಶಾಸಕರ ಶಿಫಾರಸು ಪತ್ರ ಹಿಡಿದು ಬಂದು ಲಸಿಕೆ ಹಾಕಿಸಿಕೊಂಡು ಹೋಗುತ್ತಿದ್ದರು. ಇದರಿಂದ ಕ್ಯೂನಲ್ಲಿ ನಿಂತ ಹಲವರು ಲಸಿಕೆ ಸಿಗದೆ ಹಿಂತಿರುಗುತ್ತಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ನಮ್ಮ ಮೇಲೆ ಕೂಗಾಡಿ ವಿಡಿಯೋ ಮಾಡಿಕೊಂಡಿದ್ದಾರೆ. ನಾವು ಎಲ್ಲರನ್ನು ಹೊರಗೆ ಕಳುಹಿಸಿ, ಟೋಕನ್ ಪಡೆದವರಿಗೆ ಲಸಿಕೆ ಕೊಡಿಸಿದೆವು ಎಂದು ಆರೋಪಿಸಿದರು.
ಕಾಂಗ್ರೆಸ್ ಕಾರ್ಯಕರ್ತರು ಹೇಳುವುದು ಏನು?
ಇನ್ನು, ಕಾಂಗ್ರೆಸ್ ಮುಖಂಡ, ಸೌರಭ ಸಂಸ್ಥೆಯ ಪ್ರಮುಖ ದೀಪಕ್ ಸಿಂಗ್ ವಿವಾದದ ಕುರಿತು ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ್ದಾರೆ. ಲಸಿಕೆ ಪಡೆಯುವವರ ಅನುಕೂಲಕ್ಕೆ, ಕಂಟೈನ್ಮೆಂಟ್ ಜೋನ್ಗಳಲ್ಲಿರುವವರಿಗೆ ಔಷಧ, ಆಹಾರ ವಿತರಣೆಗೆ ಸೌರಭ ಸಂಸ್ಥೆಯ ವತಿಯಿಂದ ಸ್ವಯಂ ಸೇವಕರು ಕೆಲಸ ಮಾಡುತ್ತಿದ್ದಾರೆ. ಇಂತಹ ಸ್ವಯಂ ಸೇವಕರು ಫ್ರಂಟ್ ಲೈನ್ ವಾರಿಯರ್ಗಳೆಂದು ಕೇಂದ್ರ ಸರ್ಕಾರವೆ ಹೇಳಿದೆ. ಅವರಿಗೆ ಲಸಿಕೆ ಹಾಕಿಸಿಕೊಳ್ಳಲು ಅವಕಾಶವಿದೆ. ಮಾಜಿ ಶಾಸಕ ಪ್ರಸನ್ನ ಕುಮಾರ್ ಅವರು ಸೌರಭ ಸಂಸ್ಥೆಯ ಅಧ್ಯಕ್ಷರು. ನಮ್ಮ ಸಂಸ್ಥೆಯ ಸ್ವಯಂ ಸೇವಕರಾರು ಅನ್ನವುದನ್ನು ಅವರ ಲೆಟರ್ಹೆಡ್ನಲ್ಲೆ ಬರೆದುಕೊಡಬೇಕಾಗುತ್ತದೆ ಅಲ್ಲವೆ ಎಂದು ಪ್ರಶ್ನಿಸುತ್ತಾರೆ.
ಸೌರಭ ಸಂಸ್ಥೆ ಕಳೆದ ನಾಲ್ಕು ವಾರದಿಂದ ಲಸಿಕೆ ಹಾಕಿಸಿಕೊಳ್ಳುವವರ ಅನುಕೂಲಕ್ಕೆ ವಾಹನದ ವ್ಯವಸ್ಥೆ ಮಾಡಿದೆ. ಹಿರಿಯ ನಾಗರಿಕರು ಕ್ಯೂನಲ್ಲಿ ನಿಲ್ಲಲು ಆಗುವುದಿಲ್ಲ. ಅಂತಹವರ ಪರವಾಗಿ ನಮ್ಮ ಸ್ವಯಂ ಸೇವಕರು ಕ್ಯೂನಲ್ಲಿ ನಿಂತು ಲಸಿಕೆ ಹಾಕಿಸುತ್ತಿದ್ದಾರೆ. ಇದೆಲ್ಲವನ್ನು ಸಹಿಸಿಕೊಳ್ಳಲು ಆಗದೆ ರಾಜಕಾರಣ ಮಾಡುತ್ತಿದ್ದಾರೆ. ನಾವು ರಾಜಕಾರಣಿಗಳೆ. ಆದರೆ ರಾಜಕೀಯ ಮಾಡುವ ಸಮಯ ಇದಲ್ಲ. ಇವತ್ತು ನಮ್ಮೊಂದಿಗೆ ಮಾತಿನ ಚಕಮಕಿ ಮಾಡಿದ ಬಿಜೆಪಿ ಕಾರ್ಯಕರ್ತನೊಬ್ಬನ ಪೋಷಕರನ್ನು ನಾವೆ ಕರೆದೊಯ್ದು ಲಸಿಕೆ ಹಾಕಿಸಿದ್ದೇವೆ ಅನ್ನುತ್ತಾರೆ ದೀಪಕ್ ಸಿಂಗ್.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ, ಫೋಟೋ
ಇನ್ನು, ಮಾತಿನ ಚಕಮಕಿ ವೇಳೆ ಎರಡು ಕಡೆಯವರು ವಿಡಿಯೋ, ಫೋಟೊಗಳನ್ನು ಕ್ಲಿಕ್ಕಿಸಿಕೊಂಡಿದ್ದರು. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ಪರ, ವಿರೋಧ ಚರ್ಚೆ ಆರಂಭಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಶಿಫಾರಸು ಪತ್ರದೊಂದಿಗೆ ಬಂದು ತಮ್ಮವರಿಗೆ ಬೇಕಾದವರಿಗೆ ಲಸಿಕೆ ಹಾಕಿಸುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದರೆ. ಇವತ್ತು ಗಲಾಟೆ ಮಾಡಿದ ಯುವಕನೊಬ್ಬನ ಪೋಷಕರನ್ನು ಸೌರಭ ಸಂಸ್ಥೆ ವತಿಯಿಂದ ಕರೆತಂದು ಲಸಿಕೆ ಹಾಕಿಸಲಾಯಿತು ಎಂದು ಕಾಂಗ್ರೆಸಿಗರು ಪೋಸ್ಟ್ ಮಾಡಿದ್ದಾರೆ.
ಈ ಕೇಂದ್ರದ್ದು ಬರಿ ದೂರು
ಕುವೆಂಪು ರಸ್ತೆಯ ಲಸಿಕಾ ಕೇಂದ್ರದಲ್ಲಿ ಆರಂಭದಿಂದಲೂ ದುರುಗಳಿವೆ. ಲಸಿಕೆಗಾಗಿ ಟೋಕನ್ ಪಡೆಯಬೇಕು. ಆ ಟೋಕನ್ಗಾಗಿ ಬೆಳಗ್ಗೆಯಿಂದಲೇ ಗಂಟೆಗಟ್ಟಲೆ ಕಾಯಬೇಕು. ಇಲ್ಲಿ ಕಾದು ಕಾದು ಸುಸ್ತಾಗಿ ಬಿದ್ದ ಹಿರಿಯ ನಾಗರಿಕರ ಸಂಖ್ಯೆ ಕಡಿಮೆಯೇನಿಲ್ಲ. ಆದರೆ ರಾಜಕಾರಣಿಗಳ ಶಿಫಾರಸು, ಅಧಿಕಾರಿಗಳ ಫೋನ್ ಕರೆ ಬಂದರೆ ಕ್ಯೂ ನಿಲ್ಲದವರಿಗೂ ಟೋಕನ್ ಸಿದ್ಧವಾಗುತ್ತದೆ. ನಿಗದಿತ ಸಮಯಕ್ಕೆ ಬಂದು ಲಸಿಕೆ ಹಾಕಿಸಕೊಳ್ಳಬಹುದಾಗಿದೆ ಎಂಬ ದೂರುಗಳಿವೆ.
ಇದನ್ನು ಓದಿ | ಶಿವಮೊಗ್ಗದಲ್ಲಿ ಲಸಿಕೆಗಾಗಿ ಕಾದು ಕಾದು ತಲೆ ಸುತ್ತು ಬಂದು ಬಿದ್ದರು
ಆರೋಗ್ಯ ಇಲಾಖೆ ತರಬೇತಿ ಕೇಂದ್ರದ ಲಸಿಕಾ ಕೇಂದ್ರಕ್ಕೆ ಸದ್ಯ ಸರ್ಜರಿಯ ಅವಶ್ಯಕತೆ ಇದೆ. ಈ ಬಗ್ಗೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ ನಿಗಾ ವಹಿಸಬೇಕಿದೆ. ಇಲ್ಲವಾದರೆ ಇದು ಮತ್ತಷ್ಟು ಗೊಂದಲ ಮತ್ತು ಕರೋನ ಹರಡುವ ಹಾಟ್ ಸ್ಪಾಟ್ ಆಗಿ ಬದಲಾದರೂ ಅಚ್ಚರಿ ಇಲ್ಲ.
- ದೇಶದ ಅತಿ ದೊಡ್ಡ ಕೊಡುಗೆ
# Nation’s Biggest Offer Starts Midnight at shop.bigbazaar.com. Shop for ₹1500 & get ₹1000 Cashback! Be the first to shop! https://bit.ly/3v6Fu44
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422