ಶಿವಮೊಗ್ಗದಲ್ಲಿ ಬೆಳಗ್ಗೆ ಶಾಲೆಗೆ ಆಗಮಿಸಿದ ಸಿಬ್ಬಂದಿಗೆ ಕಾದಿತ್ತು ಶಾಕ್‌, ಆಗಿದ್ದೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIMOGA NEWS, 4 NOVEMBER 2024 : ಸರ್ಕಾರಿ ಶಾಲೆಯ (School) ಅಡುಗೆ ಮನೆಯ ಬಾಗಿಲಿನ ಬೀಗ ಒಡೆದು ಪಾತ್ರೆಗಳನ್ನು ಕಳ್ಳತನ ಮಾಡಲಾಗಿದೆ. ಕರ್ನಾಟಕ ಸಂಘದಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳ್ಳತನವಾಗಿದೆ.

ಶಾಲೆಯ ಅಡುಗೆ ಸಿಬ್ಬಂದಿ ಬೆಳಗ್ಗೆ ಆಗಮಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಅಡುಗೆ ಕೊಠಡಿಯಲ್ಲಿದ್ದ ಎರಡು ಕುಕ್ಕರ್‌, ಒಂದು ಮಿಕ್ಸಿ, ಎರಡು ಪಾತ್ರೆ, ಒಂದು ಬಾಣಲೆ ಕಳುವಾಗಿದೆ ಎಂದು ಆರೋಪಿಸಲಾಗಿದೆ.

Kote Police station building

ಇದನ್ನೂ ಓದಿ » ಶಿವಮೊಗ್ಗದಲ್ಲಿ ಮನೆ ಬಾಗಿಲು ಮುರಿದು ಪಾತ್ರೆ, ಸ್ಟೌ ಕಳ್ಳತನ

ಎಂದಿನಂತೆ ಸಂಜೆ ಶಾಲೆಯ ಎಲ್ಲ ಕೊಠಡಿಗೆ ಬೀಗ ಹಾಕಿ ಸಿಬ್ಬಂದಿ ತೆರಳಿದ್ದರು. ಬೆಳಗ್ಗೆ ಶಾಲೆಗೆ ಬಂದಾಗ ಬಾಗಿಲಿನ ಬೀಗ ಒಡೆದು ಕಳ್ಳತನ ಮಾಡಿರುವುದು ಗೊತ್ತಾಗಿದೆ. ಘಟನೆ ಸಂಬಂಧ ಪ್ರಭಾರ ಪ್ರಾಂಶುಪಾಲರ ದೂರಿನ ಮೇರೆಗೆ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RED-LINE-

A government school in Karnataka Sanga in Shimoga was burglarized. Thieves broke the kitchen door lock, stealing two cookers, one mixer, two vessels, and one bucket. Staff discovered the theft upon arrival. A case was registered at Kote police station based on the headmaster’s complaint. Investigation is underway.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment