ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA, 13 AUGUST 2024 : ತೀವ್ರ ಕುತೂಹಲ ಕೆರಳಿಸಿದ್ದ ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದೆ. ತಡರಾತ್ರಿ ಫಲಿತಾಂಶ (Result) ಪ್ರಕಟಿಸಲಾಯಿತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
21 ನಿರ್ದೇಶಕರ ಸ್ಥಾನಕ್ಕೆ 29 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. 4137 ಮತದಾರರ ಪೈಕಿ ಭಾನುವಾರು ನಡೆದ ಮತದಾನದಲ್ಲಿ 2599 ಮತದಾರರು ಹಕ್ಕು ಚಲಾಯಿಸಿದ್ದರು. ಸೋಮವಾರ ಒಕ್ಕಲಿಗರ ಸಂಘದ ಆವರಣದಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ಬ್ಯಾಲೆಟ್ ಪೇಪರ್ ಆಗಿದ್ದರಿಂದ ತಡರಾತ್ರಿವರೆಗೆ ಎಣಿಕೆ ನಡೆಯಿತು.
ಇದನ್ನೂ ಓದಿ ⇒ ಗಾಜನೂರು ತುಂಗಾ ಜಲಾಶಯದಲ್ಲಿ ತಪ್ಪಿದ ದುರಂತ, ತುಂಡಾಗುವ ಹಂತದಲ್ಲಿದೆ ಗೇಟ್ ರೋಪ್
ಯಾರೆಲ್ಲ ಎಷ್ಟು ಮತ ಪಡೆದಿದ್ದಾರೆ?
ಬಿ.ಎ.ರಮೇಶ್ ಹೆಗ್ಡೆ 2001 ಮತ ಗಳಿಸಿದ್ದಾರೆ, ರವಿಕುಮಾರ್ 1856 ಮತ, ಡಾ. ಕಡಿದಾಳ್ ಗೋಪಾಲ್ 1805, ಆಶಿತ್ ಬಳಗಟ್ಟೆ 1630, ಬಂಡೆ ವೆಂಕಟೇಶ್ 1527, ಸುದರ್ಶನ್ ತಾಯಿಮನೆ 1461, ಎಂ.ಎ.ರಮೇಶ ಹೆಗ್ಡೆ 1442, ಉಂಬಳೇಬೈಲು ಮೋಹನ್ 1436, ಪುಟ್ಟಸ್ವಾಮಿ 1417, ಆದಿಮೂರ್ತಿ 1410, ಪ್ರತಿಮಾ ಡಾಕಪ್ಪ 1367, ರಮೇಶ್ ಬಿ ನಾಯಕ್ 1366, ನೀರುಳ್ಳಿ ನಾಗರಾಜ್ 1342, ಸುಂದರೇಶ್ 1301, ಸುಮಿತ್ರ ಕೇಶವಮೂರ್ತಿ 1298, ಭಾರತಿ ರಾಮಕೃಷ್ಣ 1262, ಚೇತನ್ 1260, ಅನ್ನಪೂರ್ಣ 1259, ಸಹನಾ 1055, ವನಮಾಲ 1031 ಮತ ಪಡೆದಿದ್ದಾರೆ.
ಬೆಂಬಲಿಗರ ಸಂಭ್ರಮಾಚರಣೆ
ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದಂತೆ ಅವರ ಅಭಿಮಾನಿಗಳು, ಬೆಂಬಲಿಗರು, ಸ್ನೇಹಿತರು, ಕುಟುಂಬದವರು ಸಂಭ್ರಮಾಚರಣೆ ಮಾಡಿದರು. ಸಿಹಿ ತಿನ್ನಿಸಿ, ಹಾರ ಹಾಕಿ, ಘೋಷಣೆ ಕೂಗಿ ಖುಷಿ ಪಟ್ಟರು.
ಇದನ್ನೂ ಓದಿ ⇒ ತುಂಗಾ, ಭದ್ರಾ, ಲಿಂಗನಮಕ್ಕಿ ಜಲಾಶಯಗಳ ನೀರಿನ ಒಳ ಹರಿವು ಇವತ್ತು ಎಷ್ಟಿದೆ? ಇಲ್ಲಿದೆ ಡಿಟೇಲ್ಸ್