ಶಿವಮೊಗ್ಗ ಲೈವ್.ಕಾಂ | SHIMOGA NEWS | 14 ಜೂನ್ 2020
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಸ್ಮಾರ್ಟ್ ಸಿಟಿ ಯೋಜನೆ ಅಡಿ ಕೋಟಿ ಕೋಟಿ ಸುರಿದು ಶಿವಮೊಗ್ಗದ ಕನ್ಸರ್‍ವೆನ್ಸಿಗಳಿಗೆ ಹೊಸ ಲುಕ್ ನೀಡಲಾಗಿದೆ. ಆದರೆ ಕೆಲವು ಕಡೆ ಅಭಿವೃದ್ಧಿಯಾದ ಕನ್ಸರ್‍ವೆನ್ಸಿಗಳು ಕುಡುಕರ ಅಡ್ಡೆಯಾಗಿದೆ. ಪಬ್ಲಿಕ್ ಟಾಯ್ಲೆಟ್‍ಗಳಾಗಿ ಪುನಃ ಪರಿವರ್ತನೆ ಆಗಿವೆ.
ಬೆಳಗ್ಗೆ, ರಾತ್ರಿ ಎಣ್ಣೆ ಹಾಕ್ತಾರೆ
ಶಿವಮೊಗ್ಗದ ಜೈಲ್ ಸರ್ಕಲ್ ಸಮೀಪ, ಅಚ್ಚತರಾವ್ ಲೇಔಟ್ ಮೊದಲ ಅಡ್ಡರಸ್ತೆಗೆ ಹೊಂದಿಕೊಂಡಂತೆ ಇರುವ ಕನ್ಸರ್‍ವೆನ್ಸಿ ಕುಡುಕರ ಪಾಲಿಗೆ ಸೇಫ್ ಲೊಕೇಷನ್ ಆಗಿದೆ. ಬೆಳಗೆ ಅಂದರೆ ಬೆಳಗ್ಗೆ, ರಾತ್ರಿಯಾದರೆ ರಾತ್ರಿ ಇಲ್ಲಿ ಟವಲ್ ಹಾಸಿಕೊಂಡು ಕುಳಿತು ಎಣ್ಣೆ ಹಾಕುತ್ತಾರೆ ಎಂದು ಸ್ಥಳೀಯರು ಶಿವಮೊಗ್ಗ ಲೈವ್.ಕಾಂಗೆ ತಿಳಿಸಿದ್ದಾರೆ.

ರಾಶಿ ರಾಶಿ ಮದ್ಯದ ಪೌಚುಗಳು
ಈ ಕನ್ಸರ್‍ವೆನ್ಸಿಯಲ್ಲಿ ರಾಶಿ ರಾಶಿ ಮದ್ಯದ ಪೌಚುಗಳು ಬಿದ್ದಿವೆ. ಮದ್ಯದ ಬಾಟಲಿಗಳು ಕಾಣಸಿಗುತ್ತವೆ. ಮದ್ಯದಂಗಡಿಯಿಂದ ಮದ್ಯ ಖರೀದಿಸಿ ತಂದು ಈ ಕನ್ಸರ್‍ವೆನ್ಸಿಯಲ್ಲಿ ಸೇವಿಸಿ, ಪೌಚ್‍ಗಳನ್ನು ಅಲ್ಲಿಯೇ ಬಿಸಾಡಿ ಹೊಗುತ್ತಿದ್ದಾರೆ. ಬಿಯರ್ ಬಾಟಲಿಗಳು ಕೂಡ ಇಲ್ಲಿ ಬಿದ್ದಿವೆ.
ಪಬ್ಲಿಕ್ ಟಾಯ್ಲೆಟ್ ಆಯ್ತು ಹೈಟೆಕ್ ಕನ್ಸರ್‍ವೆನ್ಸಿ
ಈ ಕನ್ಸರ್‍ವೆನ್ಸಿ ಅಭಿವೃದ್ಧಿಗೂ ಮೊದಲು ಇದು ಪಬ್ಲಿಕ್ ಟಾಯ್ಲೆಟ್ ಆಗಿತ್ತು. ಲಕ್ಷ ಲಕ್ಷ ಸುರಿದು ಕನ್ಸರ್‍ವೆನ್ಸಿ ಅಭಿವೃದ್ಧಿ ಮಾಡುತ್ತಿದ್ದಾಗ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದರು. ದುರ್ವಾಸನೆಯಿಂದ ಮುಕ್ತರಾಗುತ್ತೇವೆ ಎಂದು ನಿರಮ್ಮಳವಾಗಿದ್ದರು. ಕನ್ಸರ್‍ವೆನ್ಸಿ ಹೈಟೆಕ್ ಆಯ್ತು. ಅಷ್ಟೇ ಅಲ್ಲ, ಪುನಃ ಪಬ್ಲಿಕ್ ಟಾಯ್ಲೆಟ್ ಆಗಿ ಪರಿವರ್ತನೆಯಾಯ್ತು.
ಏನೆಲ್ಲ ಅಭಿವೃದ್ಧಿಯಾಯ್ತು? ರಕ್ಷಣೆ ಏಕಿಲ್ಲ?
ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆ ಅಡಿ 24.79 ಕೋಟಿ ರೂ. ವೆಚ್ಚದಲ್ಲಿ 111 ಕನ್ಸರ್‍ವೆನ್ಸಿಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಕೆಲವು ಕನ್ಸರ್‍ವೆನ್ಸಿಗಳಲ್ಲಿ ಮಕ್ಕಳ ಆಟಿಕೆಗಳನ್ನು ಅಳವಡಿಸಲಾಗಿದೆ. ಅಚ್ಚುತರಾವ್ ಲೇಔಟ್‍ನ ಈ ಕನ್ಸರ್‍ವೆನ್ಸಿಗೂ ಲಕ್ಷ ಲಕ್ಷ ಖರ್ಚು ಮಾಡಲಾಗಿದೆ. ಚರಂಡಿ, ಒಳ ಚರಂಡಿ ವ್ಯವಸ್ಥೆ ಮಾಡಿ, ಲಿಂಕ್ ಟೈಲ್ಸ್ ಹಾಕಲಾಗಿದೆ. ಲೈಟ್ ವ್ಯವಸ್ಥೆ ಕೂಡ ಮಾಡಲಾಗಿದೆ. ಕನ್ಸರ್‍ವೆನ್ಸಿಯ ಎರಡೂ ಬದಿಯಲ್ಲಿ ಗೇಟ್ ಹಾಕಲಾಗಿದೆ. ಆದರೆ ಆ ಗೇಟ್‍ಗೆ ಬೀಗ ಹಾಕದೆ ಬಿಟ್ಟಿದ್ದಾರೆ. ಹಾಗಾಗಿ ಕನ್ಸರ್‍ವೆನ್ಸಿ ಪುನಃ ಹಳೆ ರೂಪಕ್ಕೆ ಬಂದಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು






