ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 8 ಜನವರಿ 2022
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ವೀಕೆಂಡ್ ಕರ್ಫ್ಯೂ ಹಿನ್ನೆಲೆ ಶಿವಮೊಗ್ಗದಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತವಾಗಿದೆ. ಪ್ರಮುಖ ವಹಿವಾಟು ಕೇಂದ್ರಗಳಲ್ಲಿ ಅಂಗಡಿಗಳು ಬಂದ್ ಆಗಿವೆ.
ಬಿಕೋ ಅನ್ನುತ್ತಿದೆ ಗಾಂಧಿ ಬಜಾರ್
ಶಿವಮೊಗ್ಗದ ಪ್ರಮುಖ ವಾಣಿಜ್ಯ ಕೇಂದ್ರ ಗಾಂಧಿ ಬಜಾರ್ ಇವತ್ತು ಬಿಕೋ ಅನ್ನುತ್ತಿದೆ. ಜವಳಿ, ಚಿನ್ನಾಭರಣ ಸೇರಿದಂತೆ ಎಲ್ಲಾ ಬಗೆಯ ವ್ಯಾಪಾರ, ವಹಿವಾಟು ಬಂದ್ ಮಾಡಲಾಗಿದೆ. ಇಲ್ಲಿರುವ ದಿನಸಿ ಅಂಗಡಿಗಳು, ತರಕಾರಿ ಮಳಿಗೆಗಳಲ್ಲಿ ವ್ಯಾಪಾರ ನಡೆಯುತ್ತಿದೆ. ಹಾಗಾಗಿ ಬೆಳಗಿನ ಅವಧಿಯಲ್ಲಿ ಗಾಂಧಿ ಬಜಾರ್’ನಲ್ಲಿ ಜನ, ವಾಹನ ಸಂಚಾರವಿತ್ತು. ಆ ಬಳಿಕ ಜನ ಸಂಚಾರ ಕಡಿಮೆಯಾಯಿತು.
ಬಿ.ಹೆಚ್.ರಸ್ತೆಯೂ ಖಾಲಿ ಖಾಲಿ
ನಗರದ ಬಿ.ಹೆಚ್.ರಸ್ತೆಯ ಬಹುತೇಕ ಅಂಗಡಿಗಳು ಬಂದ್ ಆಗಿವೆ. ಹಾಗಾಗಿ ರಸ್ತೆ ಖಾಲಿ ಖಾಲಿಯಾಗಿದೆ. ಜವಳಿ, ಕೃಷಿ ಉಪಕರಣಗಳು, ಮೊಬೈಲ್ ಶಾಪ್, ಶೋಂ ರೂಂಗಳು ಈ ರಸ್ತೆಯಲ್ಲಿವೆ. ಅವು ಅಗತ್ಯ ವಸ್ತುಗಳ ಪಟ್ಟಿಗೆ ಬರುವುದಿಲ್ಲ. ಹಾಗಾಗಿ ಬಿ.ಹೆಚ್.ರಸ್ತೆ ಬಣಗುಡುತ್ತಿದೆ. ಅಮೀರ್ ಅಹಮದ್ ಸರ್ಕಲ್, ಶಿವಪ್ಪ ನಾಯಕ ಪ್ರತಿಮೆ ಬಳಿ ಪೊಲೀಸರು ವಾಹನಗಳನ್ನು ತಡೆದು ತಪಾಸಣೆ ಮಾಡುತ್ತಿದ್ದಾರೆ. ಹಾಗಾಗಿ ಈ ಭಾಗದಲ್ಲಿ ವಾಹನ ಸಂಚಾರವು ವಿರಳವಾಗಿದೆ.
ನೆಹರೂ ರೋಡ್ ಸಂಪೂರ್ಣ ಸ್ಥಬ್ಧ
ವೀಕೆಂಡ್ ಸಂದರ್ಭ ರಂಗು ಪಡೆಯುತ್ತಿದ್ದ ನೆಹರೂ ರಸ್ತೆ ಕರ್ಫ್ಯೂ ಕಾರಣಕ್ಕೆ ಸಂಪೂರ್ಣ ಸ್ಥಬ್ಧವಾಗಿದೆ. ಆಮೀರ್ ಅಹಮದ್ ಸರ್ಕಲ್ ಕಡೆಯಿಂದ ನೆಹರೂ ರಸ್ತೆಗೆ ಹೋಗುವ ಒಂದು ಭಾಗದಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಗೋಪಿ ಸರ್ಕಲ್ ಕಡೆಯಲ್ಲೂ ಬ್ಯಾರಿಕೇಡ್ ಹಾಕಿ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಇನ್ನು, ಈ ರಸ್ತೆಯಲ್ಲಿರುವ ಬಹತೇಕ ಮಳಿಗೆಗಳು ಅಗತ್ಯ ವಸ್ತುಗಳ ಪಟ್ಟಿಗೆ ಸೇರುವುದಿಲ್ಲ. ಹಾಗಾಗಿ ಎಲ್ಲಾ ಅಂಗಡಿಗಳು ಬಂದ್ ಆಗಿವೆ.
ಸಿಟಿ ಸೆಂಟರ್ ಮಾಲ್ ಗೇಟ್ ಕ್ಲೋಸ್
ಶನಿವಾರ, ಭಾನುವಾರದಂದು ಗಿಜುಗುಡುತ್ತಿದ್ದ ಸಿಟಿ ಸೆಂಟರ್ ಮಾಲ್’ಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಗೇಟ್’ಗಳನ್ನು ಬಂದ್ ಮಾಡಿ, ಸೆಕ್ಯೂರಿಟಿಗಳನ್ನು ನಿಯೋಜಿಸಲಾಗಿದೆ.
ದುರ್ಗಿಗುಡಿ, ಜೈಲ್ ರೋಡ್
ಟ್ರಾಫಿಕ್ ದಟ್ಟಣೆ ಹೆಚ್ಚಿರುತ್ತಿದ್ದ ದುರ್ಗಿಗುಡಿ, ಜೈಲ್ ರೋಡ್’ನಲ್ಲಿ ವಾಹನ ಸಂಚಾರ ಕಡಿಮೆ ಇದೆ. ಅಂಗಡಿಗಳು ಬಂದ್ ಆಗಿವೆ. ಜೈಲ್ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿರುವುದು ಮತ್ತು ಕರ್ಫ್ಯೂ ಹಿನ್ನಲೆ ವಾಹನ ಸಂಚಾರ ಕಡಿಮೆ ಇದೆ.
ಇತ್ತ ಕುವೆಂಪು ರಸ್ತೆಯಲ್ಲಿ ಆಸ್ಪತ್ರೆಗಳು ಇರುವುದರಿಂದ ಜನ ಸಂಚಾರ ಕಂಡು ಬರುತ್ತಿದೆ. ವಿನೋಬನಗರ ನೂರು ಅಡಿ ರಸ್ತೆಯಲ್ಲಿಯೂ ದಿನಸಿ, ತರಕಾರಿ ಮಾರಾಟಕ್ಕೆ ಅವಕಾಶವಿದೆ. ಇಲ್ಲಿಯೂ ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನಗಳ ತಪಾಸಣೆ ಕಾರ್ಯ ನಡೆಸುತ್ತಿದ್ದಾರೆ.
ವೀಕೆಂಡ್ ಕರ್ಫ್ಯೂಗೆ ಶಿವಮೊಗ್ಗದಲ್ಲಿ ವ್ಯಾಪಾರಿಗಳು, ಜನರು ಉತ್ತಮ ಸ್ಪಂದನೆ ನೀಡಿದ್ದಾರೆ. ವಾಹನ, ಜನ ಸಂಚಾರ ಬಹುತೇಕ ತಗ್ಗಿದೆ. ಆದರೆ ಕರ್ಖಾನೆ, ಅಗತ್ಯ ಸೇವೆ, ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಇರುವುದರಿಂದ ಜನ ಸಂಚಾರ ಕಂಡು ಬರುತ್ತಿದೆ. ಈ ಮಧ್ಯೆ ಅನಗತ್ಯವಾಗಿ ಓಡಾಡುತ್ತಿರುವವರಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ.
ಇದನ್ನೂ ಓದಿ | ಶಿವಮೊಗ್ಗದಲ್ಲಿ ವೀಕೆಂಡ್ ಕರ್ಫ್ಯೂ, ಹೇಗಿದೆ ಬಸ್ ಸಂಚಾರ? ಸಿಟಿ ಬಸ್ಸುಗಳು ರಸ್ತೆಗಿಳಿದಿವೆಯಾ?
ಇದನ್ನೂ ಓದಿ | ಶಿವಮೊಗ್ಗದಲ್ಲಿ ವೀಕೆಂಡ್ ಕರ್ಫ್ಯೂ, ಪೊಲೀಸರಿಂದ ತಪಾಸಣೆ ಶುರು, ವಾಹನಗಳು ಸೀಜ್