ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 28 DECEMBER 2020
ಕಬ್ಬಿಣದ ಬೆಲೆ ದಿಢೀರ್ ಏರಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಪ್ರತಿ ಟನ್ ಕಬ್ಬಿಣಕ್ಕೆ ಸುಮಾರು 20 ಸಾವಿರ ರೂ. ಹೆಚ್ಚಳವಾಗಿದೆ. ಇದರಿಂದ ವೆಲ್ಡಿಂಗ್ ಶಾಪ್‍ನವರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಆರೋಪಿಸಿ ಕರ್ನಾಟಕ ವೆಲ್ಡಿಂಗ್ ಅಸೋಸಿಯೇಷನ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಅಸೋಷಿಯೇಷನ್ ಸದಸ್ಯರು, ಪ್ರತಿ ಟನ್ ಕಬ್ಬಣಕ್ಕೆ 30 ರಿಂದ 50 ಸಾವಿರ ರೂ. ಇತ್ತು. ಈಗ ಏಕಾಏಕಿ ಪ್ರತಿ ಟನ್‍ಗೆ 15 ರಿಂದ 22 ಸಾವಿರ ರೂ. ಹೆಚ್ಚಳ ಮಾಡಲಾಗಿದೆ. ಇದರಿಂದ ಕಬ್ಬಿಣದ ಬೆಲೆ 50 ರಿಂದ 75 ಸಾವಿರ ರೂ. ಪ್ರತಿ ಟನ್‍ಗೆ ಏರಿಕೆ ಆಗಿದೆ ಎಂದು ಆರೋಪಿಸಿದರು.
ಕಬ್ಬಿಣ ಬೆಲೆ ಏರಿಕೆಯಿಂದಾಗಿ ವೆಲ್ಡಿಂಗ್ ಅಂಗಡಿಯವರು ಜೀವನ ನಿರ್ವಹಣೆ ಕಷ್ಟಪಡವಂತೆ ಆಗಿದೆ. ಈಗಾಗಲೇ ಕರೋನ ಮತ್ತು ಲಾಕ್‍ಡೌನ್‍ನಿಂದಾಗಿ ಉದ್ಯಮ ಸಂಕಷ್ಟದಲ್ಲಿದೆ. ಚೇತರಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಕಬ್ಬಿಣದ ಬೆಲೆ ಏರಿಕೆ ಮಾಡಲಾಗಿದೆ. ಮುಂಗಡವಾಗಿ ಹಣ ಪಡೆದು ಕೆಲಸ ಆರಂಭಿಸುವ ಹೊತ್ತಿಗೆ ಬೆಲೆ ಏರಿಕೆಯಾಗಿರುವುದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರ ಮಧ್ಯ ಪ್ರವೇಶಿಸಿ, ಕಬ್ಬಿಣದ ಬೆಲೆ ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು.
ವೆಲ್ಡಿಂಗ್ ಅಸೋಸಿಯೇಷನ್ ಪ್ರಮುಖರಾದ ರವಿಕುಮಾರ್, ವೆಂಟಕೇಶ್, ಮೊಹಮ್ಮದ್ ರಫಿಕ್, ಮನೋಹರ್, ಅಬ್ದುಲ್ ಸಲಾಂ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]