ಶಿವಮೊಗ್ಗ ಲೈವ್.ಕಾಂ | SHIMOGA NEWS | 1 ಆಗಸ್ಟ್ 2020
ಸಚಿವ ಕೆ.ಎಸ್.ಈಶ್ವರಪ್ಪ ನಗರದ ಜನತೆಗೆ ಆಯುಷ್ ಶಕ್ತಿವರ್ಧಕ ಕಿಟ್‍ನ್ನು ವಿತರಿಸುತ್ತಿರುವುದು ಸ್ವಾಗತವೇ. ಇದಕ್ಕಾಗಿ ಆಧಾರ್ ಕಾರ್ಡ್ ಏಕೆ ಬೇಕು ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಪ್ರಶ್ನೆ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಸನ್ನ ಕುಮಾರ್, ಆಧಾರ್ ಕಾರ್ಡ್ ಎಂಬುದು ಒಂದು ಗೌಪ್ಯತೆಯ ಸಂಕೇತ. ಇದನ್ನು ಬಳಸಿಕೊಂಡು ಬಿಜೆಪಿಯವರು ಏನು ಮಾಡುತ್ತಾರೆ. ಹಾಗಾಗಿ ಕೂಡಲೇ ಆಧಾರ್ ಕಾರ್ಡ್ ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು. ಕಿಟ್ ವಿತರಣೆ ವಿಚಾರದಲ್ಲಿ ನಮ್ಮ ವಿರೋಧ ಇಲ್ಲ ಎಂದರು.
ಕೆಲವು ಕಡೆ ಕಿಟ್‍ಗಾಗಿ ಹಣ ಕೂಡ ಪಡೆಯುತ್ತಿದ್ದಾರೆ ಎಂದ ಆರೋಪವಿದೆ. ಇದು ಈಶ್ವರಪ್ಪನವರಿಗೆ ಗೊತ್ತಿರಲಿಕ್ಕಿಲ್ಲ. ಇಂತವಕ್ಕೆಲ್ಲ ಅವರು ಆಸ್ಪದ ನೀಡಬಾರದು ಎಂದರು.
ಮಾಸ್ಕ್ ದಂಡದ ಕುರಿತು ಗಮನ ಕೊಡಿ
ಮಾಸ್ಕ್ ಧರಿಸದವರಿಗೆ ಇರುವವರಿಗೆ ದಂಡ ಹಾಕಲು ಪಾಲಿಕೆ ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಇವರು ಕೆಲವರನ್ನು ಸೇರಿಸಿಕೊಂಡು ಗಲಾಟೆ ಕೂಡ ಮಾಡಿ ಹಣ ವಸೂಲಿ ಮಾಡುತ್ತಾರೆ. ಇದರಿಂದ ರಸ್ತೆಯಲ್ಲಿ ಜನ ಗುಂಪುಗೂಡುವಂತಾಗುತ್ತಿದೆ. ಹಾಗಾಗಿ ಅವರಿಂದ ವಸೂಲಿ ಮಾಡಿದ ದಂಡದ ಹಣದಲ್ಲೇ ಮಾಸ್ಕ್ ನೀಡಲಿ ಎಂದು ಪ್ರಸನ್ನಕುಮಾರ್ ಆಗ್ರಹಿಸಿದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200