ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 27 APRIL 2023
SHIMOGA : ಲಾಡ್ಜ್ ರೂಂನಲ್ಲಿ (Lodge Room) ಪತಿಯನ್ನು ಲಾಕ್ ಮಾಡಿ, ಆತನ ಮೊಬೈಲ್ ಫೋನ್, ಪರ್ಸ್, ಬಟ್ಟೆ ಬ್ಯಾಗ್ ಸಹಿತ ಪತ್ನಿ ನಾಪತ್ತೆಯಾಗಿದ್ದಾಳೆ. ಪತ್ನಿಯನ್ನು ಹುಡುಕಿ ಕೊಡುವಂತೆ ಪತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಶಿವಮೊಗ್ಗ ಬಸ್ ನಿಲ್ದಾಣದ ಎದುರಿನ ಅಶೋಕ ಲಾಡ್ಜ್ನಲ್ಲಿ ಘಟನೆ ಸಂಭವಿಸಿದೆ. ಹಾವೇರಿ ಜಿಲ್ಲೆಯ ಶ್ರೀಕಾಂತ ಎಂಬುವವರು ತಮ್ಮ ಪತ್ನಿಯೊಂದಿಗೆ ಲಾಡ್ಜ್ನಲ್ಲಿ ರೂಂ (Lodge Room) ಮಾಡಿದ್ದಾಗ ಘಟನೆ ಸಂಭವಿಸಿದೆ.
ಇದನ್ನೂ ಓದಿ – ಶಿವಮೊಗ್ಗ ಜೈಲಿನಿಂದ ಪೊಲೀಸ್ ಭದ್ರತೆಯಲ್ಲಿ ಭದ್ರಾವತಿ ಠಾಣೆಗೆ ತೆರಳಿ ದೂರು ನೀಡಿದ ಕೈದಿ, ಕಾರಣವೇನು?
ಮಾವನ ಮನೆಗೆ ಬಂದಿದ್ದರು
ಶ್ರೀಕಾಂತ ತನ್ನ ಪತ್ನಿ ತೇಜಸ್ವಿನಿ ಜೊತೆ ಲಕ್ಕವಳ್ಳಿಯಲ್ಲಿನ ಮಾವನ ಮನೆಗೆ ಬಂದಿದ್ದರು. ಅಲ್ಲಿಂದ ತಮ್ಮೂರಿಗೆ ಹಿಂತಿರುಗುವಾಗ, ಶಿವಮೊಗ್ಗದಲ್ಲಿ ಲಾಡ್ಜ್ ರೂಂ ಮಾಡುವಂತೆ ಪತ್ನಿ ಒತ್ತಾಯಿಸಿದ್ದಾಳೆ. ಹಾಗಾಗಿ ಅಶೋಕ ಲಾಡ್ಜ್ನಲ್ಲಿ ಶ್ರೀಕಾಂತ ರೂಂ ಮಾಡಿದ್ದಾರೆ. ಸಂಜೆ ವೇಳೆಗೆ ಶ್ರೀಕಾಂತ್ ಬಾತ್ ರೂಂಗೆ ಹೋಗಿ ಹೊರಬಂದಾಗ ರೂಂನಲ್ಲಿ ಪತ್ನಿ ಇರಲಿಲ್ಲ. ರೂಂ ಬಾಗಿಲು ಹೊರಗಿನಿಂದ ಲಾಕ್ ಆಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ – ಸೊಳ್ಳೆ ಬತ್ತಿ ತರಲು ಹೋಗಿದ್ದಾಗ ಕಿರಿಕ್, ಯುವಕನ ಕೈಗೆ ಚಾಕುವಿನಿಂದ ಹಲ್ಲೆ ಆರೋಪ, ದೂರು, ಪ್ರತಿದೂರು ದಾಖಲು
ಮೊಬೈಲು, ಪರ್ಸು, ಬ್ಯಾಗ್ ಇರಲಿಲ್ಲ
ಶ್ರೀಕಾಂತನ ಪತ್ನಿ ತೇಜಸ್ವಿನಿ ಆತನ ಮೊಬೈಲ್ ಫೋನ್, ಫರ್ಸ್, ಬ್ಯಾಗನ್ನು ಎತ್ತಿಕೊಂಡು ರೂಂ ಬಾಗಿಲು ಲಾಕ್ ಮಾಡಿಕೊಂಡು ಹೋಗಿದ್ದಳು. ರೂಂ ಬಾಯ್ ಸಹಾಯದಿಂದ ಶ್ರೀಕಾಂತ್ ಬಾಗಿಲು ತೆಗೆಸಿ ಎಲ್ಲೆಡೆ ಹುಡುಕಾಡಿದ್ದಾರೆ. ತೇಜಸ್ವಿನಿ ತನ್ನದು ಮತ್ತು ಪತಿಯ ಮೊಬೈಲ್ ಫೋನುಗಳನ್ನು ಸ್ವಿಚ್ ಆಫ್ ಮಾಡಿದ್ದಾಳೆ. ದಿಕ್ಕು ತೋಚದೆ ಶ್ರೀಕಾಂತ್ ದೊಡ್ಡಪೇಟೆ ಠಾಣೆಯಲ್ಲಿ ದೂರು ನೀಡಿದ್ದಾನೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.