ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 2 FEBRUARY 2023
SHIMOGA | 17ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳು, ಕನ್ನಡಪರ ಚರ್ಚೆಯ ಜೊತೆಗೆ ಬಗೆ ಬಗೆ ವಸ್ತುಗಳ ಖರೀದಿಗು ಅವಕಾಶ ಕಲ್ಪಿಸಲಾಗಿದೆ. ಸಾಹಿತ್ಯ ಗ್ರಾಮದಲ್ಲಿ ವಿವಿಧ ಸ್ಟಾಲ್ ಗಳನ್ನು ನಿರ್ಮಿಸಲಾಗಿದ್ದು ಪುಸ್ತಕ ಸೇರಿದಂತೆ ಜವಳಿ ಮತ್ತು ಇತರೆ ವಸ್ತುಗಳ ಖರೀದಿಗೆ ಜನರು ದಾಂಗುಡಿ ಇಟ್ಟಿದ್ದಾರೆ. (Sammelana Shops)
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗದ ಗೋಪಿಶೆಟ್ಟಿಕೊಪ್ಪದ ಚಾಲುಕ್ಯ ನಗರದ ಸಾಹಿತ್ಯ ಗ್ರಾಮದಲ್ಲಿ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಇಂದು ಸಮ್ಮೇಳನದ ಕೊನೆಯ ದಿನ.
ವಿವಿಧ ಮಳಿಗೆಗಳು
ಸಾಹಿತ್ಯ ಗ್ರಾಮದ ಆವರಣದಲ್ಲಿ ವಿವಿಧ ಸ್ಟಾಲ್ ಗಳನ್ನು (Sammelana Shops) ಹಾಕಲಾಗಿದೆ. ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಳಿಗೆ ಮೊದಲ ಆದ್ಯತೆ. ನವ ಭಾರತ ಪಬ್ಲಿಕೇಷನ್, ಕುವೆಂಪು ವಿಶ್ವವಿದ್ಯಾಲಯ ಪ್ರಕಾಶನ, ಪ್ರಜ್ಞಾ ಬುಕ್ ಗ್ಯಾಲರಿ ಸೇರಿದಂತೆ ವಿವಿಧ ಪ್ರಕಾಶನ ಮತ್ತು ಪುಸ್ತಕ ಮಳಿಗೆಗಳಿವೆ.
ಮಹಿಳೆಯರ ಗಮನ ಸೆಳೆಯುವ ವಿವಿಧ ಸ್ಟಾಲ್ ಗಳು ಇಲ್ಲಿವೆ. ಮೇಕಪ್ ವಸ್ತುಗಳು, ಬಳೆ, ಕಿವಿಯೋಲೆ, ಸರಗಳು ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳ ಮಾರಾಟ ಮಳಿಗೆಗಳು ಇಲ್ಲಿವೆ. ಸೀರೆಗಳು, ಖಾದಿ ಬಟ್ಟೆ ಮಾರಾಟ ಸ್ಟಾಲ್ ಗಳಿವೆ.
ಮಕ್ಕಳು, ಮಹಿಳೆಯರು ಇಷ್ಟಪಡುವ ಹಲವು ವಸ್ತುಗಳು ಇಲ್ಲಿ ಮಾರಾಟವಾಗುತ್ತಿದೆ. ಸಾಹಿತ್ಯ ಗ್ರಾಮಕ್ಕೆ ಬಂದವರಿಗೆ ಸಾಹಿತ್ಯ ಗೋಷ್ಠಿಗಳ ಜೊತೆಗೆ ವಿವಿಧ ವಸ್ತುಗಳು, ತಿನಿಸು ಖರೀದಿ ಮಾಡಬಹುದಾಗಿದೆ.
ಇದನ್ನೂ ಓದಿ – ಅಧ್ಯಕ್ಷರ ಅದ್ಧೂರಿ ಮೆರವಣಿಗೆ, ಸಮ್ಮೇಳನಕ್ಕೆ ಚಾಲನೆ, ಭಾಷಣದಲ್ಲಿ ಏನೇನೆಲ್ಲ ಪ್ರಸ್ತಾಪಿಸಿದರು?