ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಯುವ ಕಾಂಗ್ರೆಸ್‌ನ (Youth Congress) ನೂತನ ಜಿಲ್ಲಾಧ್ಯಕ್ಷ ಹರ್ಷಿತ್ ಗೌಡ ಮತ್ತು ಪದಾಧಿಕಾರಿಗಳು ಇವತ್ತು ಅಧಿಕಾರ ಸ್ವೀಕರಿಸಿದರು. ಯುವ ಕಾಂಗ್ರೆಸ್ ಧ್ವಜ ಪಡೆದು, ಪ್ರಮಾಣ ವಚನ ಸ್ವೀಕರಿಸಿ ನೂತನ ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡರು.

ನಗರದ ಬಂಜಾರ ಕನ್ವೆನಷನ್ ಹಾಲ್‌ನಲ್ಲಿ ಆಯೋಜಿಸಿದ್ದ ಯುವ ನಾಯಕತ್ವ ಸಮಾವೇಶದಲ್ಲಿ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ ಗೌಡ ಜಿಲ್ಲಾಧ್ಯಕ್ಷ ಹರ್ಷಿತ್ ಗೌಡ ಅವರಿಗೆ ಯುವ ಕಾಂಗ್ರೆಸ್ ಧ್ವಜ ಹಸ್ತಾಂತರಿಸಿದರು. ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್ ಪ್ರಮಾಣವಚನ ಬೋಧಿಸಿದರು.
ಯಾರೆಲ್ಲ ಏನೆಲ್ಲ ಮಾತನಾಡಿದರು?
ಹಿಂದೆ ನಾಯಕರು ಅಧಿಕಾರ ಕೊಡುತ್ತಿದ್ದರು. ಈಗ ಯುವ ಕಾಂಗ್ರೆಸಿಗರು ಅಧಿಕಾರ ಪಡೆಯುತ್ತಿದ್ದಾರೆ. ಅಧಿಕಾರಕ್ಕೇರಿದವರು ಲೆಟರ್ ಹೆಡ್, ವಿಸಿಟಿಂಗ್ ಕಾರ್ಡ್‌ಗೆ ಸೀಮಿತ ಆಗಬಾರದು. ಜವಾಬ್ದಾರಿಯನ್ನು ನಿಭಾಯಿಸಬೇಕು. ಮುಂದೆ ಶಾಸಕ, ಸಚಿವರಾಗಿ ಅಧಿಕಾರ ಬೇಕು ಅಂದರೆ ವಿದ್ಯಾರ್ಥಿ ಕಾಂಗ್ರೆಸ್ ಬಲಪಡಿಸಬೇಕು.
– ಮಂಜುನಾಥ ಭಂಡಾರಿ, ಕಾಂಗ್ರೆಸ್ ಕಾರ್ಯಾಧ್ಯಕ್ಷ
ನಾನು ಹನ್ನೊಂದು ವರ್ಷ ಜೆಡಿಎಸ್ ಯುವ ಘಟಕದ ಅಧ್ಯಕ್ಷನಾಗಿದ್ದೆ. ಯುವ ಘಟಕದ ನಿರ್ವಹಣೆಯ ಕಷ್ಟ ಗೊತ್ತಿದೆ. ರಾಜ್ಯ ಸರ್ಕಾರ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಿದ್ದೇವೆ. ವಿರೋಧಿಗಳ ಟೀಕೆ ಟಿಪ್ಪಣಿಗೆ ತಲೆ ಕೆಡಿಸಿಕೊಳ್ಳಬೇಡಿ. ಬಂಗಾರಪ್ಪ ಅವರು ಅಧಿಕಾರ ಅನುಭವಿಸಿದ್ದೇ ಕಾಂಗ್ರೆಸ್ ಪಕ್ಷದಿಂದ. ಯುವ ನಾಯಕರು ಧೈರ್ಯವಾಗಿ ಜನಪರವಾಗಿ ಧ್ವನಿ ಎತ್ತಬೇಕು.
– ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ
ಪ್ರತಿ ಬೂತ್‌ನಲ್ಲಿ ಡಿಜಿಟಲ್ ಯೂಥ್ ಸಿದ್ದಪಡಿಸಬೇಕು. ಕಾಂಗ್ರೆಸ್‌ನ ಇತಿಹಾಸ, ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕು. ಬಿಜೆಪಿಯ ವಾಟ್ಸಪ್ ಯುನಿವರ್ಸಿಟಿ ಹಬ್ಬಿಸುತ್ತಿರುವ ಸುಳ್ಳುಗಳನ್ನು ಜನರಿಗೆ ಮನವರಿಕೆ ಮಾಡಬೇಕು. ಬಿಜೆಪಿ ಅಂದರೆ ಬೆಲೆ ಏರಿಕೆ, ಭ್ರಷ್ಟಾಚಾರ, ಸುಳ್ಳು ಅನ್ನುವುದನ್ನ ಜನರಿಗೆ ತಿಳಿಸಬೇಕು.
– ಬಿ.ವಿ.ಶ್ರೀನಿವಾಸ್, ರಾಷ್ಟ್ರೀಯ ಯುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ
ವಿಧಾನ ಪರಿಷತ್ ಸದಸ್ಯೆ ಬಲ್ಕಿಸ್ ಬಾನು, ಪ್ರಮುಖರಾದ ಆಯನೂರು ಮಂಜುನಾಥ್, ಎಂ.ಶ್ರೀಕಾಂತ್, ರವಿಕುಮಾರ್, ಹೆಚ್.ಸಿ.ಯೋಗೇಶ್, ಹೆಚ್.ಎಸ್.ಸುಂದರೇಶ್, ವಿಜಯಕುಮಾರ್, ವೇದಾ ವಿಜಯಕುಮಾರ್, ಪಲ್ಲವಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರ್ಷಿತ್ ಗೌಡ, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ವಿಜಯ ಕುಮಾರ್ ಸೇರಿದಂತೆ ಹಲವರು ಇದ್ದರು.






ಇದನ್ನೂ ಓದಿ » ಶಿವಮೊಗ್ಗದಲ್ಲಿ ಇದೇ ಮೊದಲ ಬಾರಿ ಸಾಮೂಹಿಕವಾಗಿ ಸಾವಿರ ಜನರಿಂದ ವಚನ ಗಾಯನ, ಹೇಗಿರುತ್ತೆ ಕಾರ್ಯಕ್ರಮ?


LATEST NEWS
- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

- ಬೆಟ್ಟೆ, ರಾಶಿ ರೇಟ್ ಇವತ್ತು ಎಷ್ಟಿದೆ? ಸರಕು ದರ ಮತ್ತೆ ಹೆಚ್ಚಾಯ್ತಾ? – 3 ಮಾರ್ಚ್ 2026

- ಶಿವಮೊಗ್ಗದಲ್ಲಿ ರಂಗ ಹಬ್ಬ, ನಾಲ್ಕು ದಿನ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕವಿದೆ?

- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

- ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

About The Editor
ನಿತಿನ್ ಆರ್.ಕೈದೊಟ್ಲು






