ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 10 APRIL 2024
SHIMOGA : ಚಂದ್ರ ದರ್ಶನದ ಬೆನ್ನಿಗೆ ಹಿಂದೂಗಳು ಪೂಜೆ ಸಲ್ಲಿಸಿ ಬೇವು ಬೆಲ್ಲ ಹಂಚಿದರು. ಇತ್ತ ಮುಸ್ಲಿಂ ಸಮುದಾಯದವರು ರಂಜಾನ್ ಹಬ್ಬದ ಸಿದ್ಧತೆ ಆರಂಭಿಸಿದ್ದಾರೆ.
ಯುಗಾದಿ ಹಬ್ಬದಂದು ಚಂದ್ರ ದರ್ಶನ ಮಾಡಬೇಕು. ಮಂಗಳವಾರ ಚಂದ್ರ ಕಾಣಿಸಿದ ಹಿನ್ನೆಲೆ ಬುಧವಾರ ಸಂಜೆ ವೇಳೆ ಜನರು ಆಗಸದತ್ತ ಕಣ್ಣು ನೆಟ್ಟಿದ್ದರು. ಮನೆಗಳ ಟೆರೇಸ್ ಮೇಲೆ, ರಸ್ತೆಗಳು, ಖಾಲಿ ಜಾಗದಲ್ಲಿ ನಿಂತು ಚಂದ್ರ ದರ್ಶನ ಮಾಡಿದರು. ಚಂದ್ರ ಕಾಣಿಸುತ್ತಿದ್ದಂತೆ ಪೂಜೆ ಸಲ್ಲಿಸಿ, ಹಿರಿಯರಿಗೆ ನಮಸ್ಕರಿಸಿ, ಬೇವು ಬೆಲ್ಲ ಹಂಚಲಾಯಿತು.
ಇನ್ನೊಂದೆಡೆ ಮುಸ್ಲಿಂ ಸಮುದಾಯದವರು ಕೂಡ ಚಂದ್ರ ದರ್ಶನ ಮಾಡಿದರು. ಚಂದ್ರ ಕಾಣಿಸುತ್ತಿದ್ದಂತೆ ಮಸೀದಿಗಳ ಮೈಕ್ ಮೂಲಕ ಮಾಹಿತಿ ನೀಡಲಾಯಿತು. ಇದರ ಬೆನ್ನಿಗೆ ಮುಸ್ಲಿಂ ಸಮುದಾಯ ಗುರುವಾರ ರಂಜಾನ್ ಆಚರಣೆಗೆ ಸಿದ್ಧತೆ ಆರಂಭಿಸಿದೆ.
ಇದನ್ನೂ ಓದಿ – ‘ಚೆಕ್‌ಪೋಸ್ಟ್‌ನಲ್ಲಿ ಪೊಲೀಸ್, ಸರ್ಕಾರಿ ವಾಹನಗಳು, ಆಂಬುಲೆನ್ಸ್‌ಗಳ ತಪಾಸಣೆಗೆ ಸೂಚನೆʼ
LATEST NEWS
- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

- ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

- ₹1,00,000 ಲಂಚದ ಹಣದೊಂದಿಗೆ ಲೋಕಾಯುಕ್ತರಿಗೆ ಸಿಕ್ಕಿಬಿದ್ದ ಅಧಿಕಾರಿ, ಮಧ್ಯವರ್ತಿ

- ಸರಕು ರೇಟ್ ಕುಸಿತ, ಉಳಿದ ಮಾದರಿ ಅಡಿಕೆ ರೇಟ್ ಎಷ್ಟಿದೆ? | 2 ಮಾರ್ಚ್ 2026

- ಮಾರಿಕಾಂಬ ಜಾತ್ರೆಯಲ್ಲಿ ಕಳೆದು ಹೋದ ವೃದ್ಧೆ, ಪತ್ತೆ ಮಾಡಿ ಮನೆಗೆ ಬಿಟ್ಟು ಬಂದ ಪೊಲೀಸ್, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು






