GOOD NEWS – ಶಿವಮೊಗ್ಗಕ್ಕೆ ಪ್ರಧಾನ ಮಂತ್ರಿ ಇ-ಬಸ್‌, ಎಲ್ಲ ಬಡಾವಣೆಗು ಕನೆಕ್ಷನ್‌, ಏನಿದು ಯೋಜನೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 22 SEPTEMBER 2023

Shivamogga-Live-Number-1-Website

SHIMOGA : ನಗರ ಸಾರಿಗೆ ವ್ಯವಸ್ಥೆ ಸುಧಾರಿಸಲು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಇ ಬಸ್‌ (E Bus) Shimoga-Live-Special-logoಯೋಜನೆ ಆರಂಭಿಸಿದೆ. ಶಿವಮೊಗ್ಗ ನಗರವು ಇ ಬಸ್‌ ಯೋಜನೆಗೆ ಆಯ್ಕೆಯಾಗಿದೆ. ಇನ್ನು ಕೆಲವೆ ತಿಂಗಳಲ್ಲಿ ನಗರದಾದ್ಯಂತ ಇ ಬಸ್‌ಗಳ ಸಂಚಾರ ಶುರುವಾಗುವ ಸಾದ್ಯತೆ ಇದೆ.

ಕಳೆದ ತಿಂಗಳು ಕೇಂದ್ರ ಸರ್ಕಾರದ ಕ್ಯಾಬಿನೆಟ್‌ ಸಭೆಯಲ್ಲಿ ಪ್ರಧಾನ ಮಂತ್ರಿ ಇ ಬಸ್‌ (E Bus) ಯೋಜನೆ ಜಾರಿ ಕುರಿತು ತೀರ್ಮಾನಿಸಲಾಗಿದೆ. ದೇಶಾದ್ಯಂತ 181 ನಗರಗಳಲ್ಲಿ ಯೋಜನೆ ಜಾರಿಯಾಗಲಿದೆ. ಶಿವಮೊಗ್ಗ ನಗರವು ಯೋಜನೆಗೆ ಆಯ್ಕೆಯಾಗಿದ್ದು 50 ಬಸ್ಸುಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಶಿವಮೊಗ್ಗದಲ್ಲಿ ಪ್ರಧಾನ ಮಂತ್ರಿ ಇ ಬಸ್‌ ಯೋಜನೆ ಜಾರಿಯಾಗುತ್ತಿದೆ. ಕೆಎಸ್‌ಆರ್‌ಟಿಸಿಯ ಶಿವಮೊಗ್ಗ ವಿಭಾಗದಿಂದ 50 ಬಸ್ಸುಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬಸ್ಸುಗಳು ಶಿವಮೊಗ್ಗ ನಗರ ಮತ್ತು ನಗರಕ್ಕೆ ಹೊಂದಿಕೊಂಡಿರುವ ಕೆಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲಿವೆ.ವಿಜಯ ಕುಮಾರ್‌, ಜಿಲ್ಲಾ ಅಧಿಕಾರಿ, ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗ

ಏನಿದು ಪಿಎಂ ಇ ಬಸ್‌ ಯೋಜನೆ?

ಮೂರು ಲಕ್ಷ ಮತ್ತು ಅದಕ್ಕಿಂತಲು ಹೆಚ್ಚಿನ ಜನ ಸಂಖ್ಯೆ ಇರುವ, ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದಿರುವ ನಗರಗಳಲ್ಲಿ ಇ ಬಸ್‌ ವ್ಯವಸ್ಥೆ ಜಾರಿಗೆ ಯೋಜಿಸಲಾಗಿದೆ. ಇದರ ಅನ್ವಯ 10 ಸಾವಿರ ಬಸ್ಸುಗಳನ್ನು ದೇಶಾದ್ಯಂತ ರಸ್ತೆಗಿಳಿಸುವ ಗುರಿ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಯೋಜನೆಗೆ ಹೂಡಿಕೆ ಮಾಡಲಿವೆ. ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ ಮಾದರಿ) ಯೋಜನೆ ಜಾರಿಯಾಗಲಿದೆ ಎಂದು ಕೇಂದ್ರ ಸರ್ಕಾರದ ಪಿಐಬಿ ಪ್ರಕಟಿಸಿದೆ.

ಪಿಎಂ ಇ ಬಸ್‌ ಯೋಜನೆಯಲ್ಲಿ ರಸ್ತೆಗಿಳಿಯುವ ಎಲ್ಲ ಬಸ್ಸುಗಳು ಬ್ಯಾಟರಿ ಚಾಲಿತವಾಗಿರಲಿವೆ. ನಿಲ್ದಾಣಗಳು ಅಥವಾ ಡಿಪೋದಲ್ಲಿ ಬಸ್ಸುಗಳಿಗೆ ವಿದ್ಯುತ್ ಮೂಲಕ ಚಾರ್ಜ್‌ ಮಾಡಿ, ನಂತರ ರಸ್ತೆಗಿಳಿಸಲಾಗುತ್ತದೆ. ಇದರಿಂದ ಸಾರಿಗೆ ನಿಗಮಗಳಿಗೆ ಡಿಸೇಲ್‌ ಖರೀದಿಸುವ ಹೊರೆ ತಗ್ಗಲಿದೆ.

ಶಿವಮೊಗ್ಗದಲ್ಲಿ ಸರ್ಕಾರಿ ಸಿಟಿ ಬಸ್‌

ಶಿವಮೊಗ್ಗದಲ್ಲಿ ಸದ್ಯ ಖಾಸಗಿ ಸಿಟಿ ಬಸ್ಸುಗಳು ಮಾತ್ರ ಸಂಚರಿಸುತ್ತಿವೆ. ಈ ಹಿಂದೆ ಜೆ-ನರ್ಮ್‌ ಯೋಜನೆ ಅಡಿ ಸರ್ಕಾರಿ ಸಿಟಿ ಬಸ್ಸುಗಳನ್ನು ಬಿಡಲಾಗಿತ್ತು. ಆದರೆ ಅದು ಯಶ ಕಾಣಲಿಲ್ಲ. ಜೆ-ನರ್ಮ್‌ ಬಸ್ಸುಗಳನ್ನು ಶಿವಮೊಗ್ಗದಿಂದ ಭದ್ರಾವತಿ, ತೀರ್ಥಹಳ್ಳಿ ಸೇರಿದಂತೆ ವಿವಿಧ ಮಾರ್ಗಗಳಿಗೆ ಸಂಚರಿಸುತ್ತಿವೆ. ಇ ಬಸ್‌ ಸೇವೆ ಆರಂಭವಾದರೆ ಶಿವಮೊಗ್ಗದಲ್ಲಿ ಸರ್ಕಾರಿ ಸಿಟಿ ಬಸ್ಸುಗಳ ಸಂಚಾರ ಆರಂಭವಾಗಲಿವೆ.

ಇದನ್ನೂ ಓದಿ – ವಿಮಾನ ನಿಲ್ದಾಣಕ್ಕೆ ಅರ್ಧ ಗಂಟೆಗೊಂದು KSRTC ಬಸ್‌, ರೈಲ್ವೆ ನಿಲ್ದಾಣಕ್ಕೆ ಯಾಕಿಲ್ಲ ಇಂತಹ ಸರ್ವಿಸ್‌?

ಶಿವಮೊಗ್ಗ ನಗರದ ಎಲ್ಲ ಬಡಾವಣೆಗಳಿಗೆ ಇ ಬಸ್‌ಗಳು ಸಂಪರ್ಕ ಕಲ್ಪಿಸಲಿವೆ. ಇನ್ನು ನಗರದ ಹೊರವಲಯದಲ್ಲಿರುವ ಕೆಲವು ಗ್ರಾಮಗಳಿಗು ಇ ಬಸ್ಸುಗಳು ತೆರಳಲಿವೆ. ಇದರಿಂದ ವಿದ್ಯಾರ್ಥಿಗಳು, ಉದ್ಯೋಗಿಗಳ ನಿತ್ಯ ಸಂಚಾರಕ್ಕೆ ಅನುಕೂಲವಾಗಲಿವೆ. ಅಲ್ಲದೆ ಸಂಚಾರ ದಟ್ಟಣೆಯು ಸ್ವಲ್ಪ ತಗ್ಗಲಿದೆ. ಕೆಎಸ್‌ಆರ್‌ಟಿಸಿ ವತಿಯಿಂದ ಬಸ್ಸುಗಳು ಸಂಚರಿಸುವುದರಿಂದ ಪಾಸ್‌ ವ್ಯವಸ್ಥೆಯು ಲಭ್ಯವಾಗಲಿದೆ. ಇದರಿಂದ ನಿತ್ಯ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲ ಹೆಚ್ಚು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಬಸ್ಸಿಗಾಗಿ ಕಾದು ಕಾದು ನಿದ್ರೆಗೆ ಜಾರಿದ ಯುವಕ, ಎಚ್ಚರವಾದಾಗ ಕಾದಿತ್ತು ಆಘಾತ

ಸದ್ಯ ಶಿವಮೊಗ್ಗಕ್ಕೆ 50 ಇ ಬಸ್‌ಗಳ ಅಗತ್ಯವಿದೆ ಎಂದು ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಪ್ಪಿಗೆ ನೀಡಿದರೆ ಕೆಲವೆ ತಿಂಗಳಲ್ಲಿ ಶಿವಮೊಗ್ಗದಲ್ಲಿ ಇ ಬಸ್‌ ಸೇವೆ ಆರಂಭವಾಗಲಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : September 22, 2023

ಶಿವಮೊಗ್ಗದ ರೆಸಾರ್ಟ್‌ನಲ್ಲಿ ವಿದ್ಯುತ್‌ ಶಾಕ್‌ಗೆ ಮಹಿಳೆ ಬಲಿ, ಸ್ವಲ್ಪದರಲ್ಲಿ ತಪ್ಪಿತು ದೊಡ್ಡ ಅನಾಹುತ, ಆಗಿದ್ದೇನು?

ಶಿವಮೊಗ್ಗದ ರೆಸಾರ್ಟ್‌ನಲ್ಲಿ ವಿದ್ಯುತ್‌ ಶಾಕ್‌ಗೆ ಮಹಿಳೆ ಬಲಿ, ಸ್ವಲ್ಪದರಲ್ಲಿ ತಪ್ಪಿತು ದೊಡ್ಡ ಅನಾಹುತ, ಆಗಿದ್ದೇನು?

ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್‌ ರೈಲಿಗೆ ಏಪ್ರಿಲ್‌ 8 ರಿಂದ ಅತ್ಯಾಧುನಿಕ LHB ಬೋಗಿಗಳು, ಏನಿದು?

ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್‌ ರೈಲಿಗೆ ಏಪ್ರಿಲ್‌ 8 ರಿಂದ ಅತ್ಯಾಧುನಿಕ LHB ಬೋಗಿಗಳು, ಏನಿದು?

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್‌? – ಇಂದಿನ ಅಡಿಕೆ ಧಾರಣೆ

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್‌? – ಇಂದಿನ ಅಡಿಕೆ ಧಾರಣೆ

ಶಿವಮೊಗ್ಗದಲ್ಲಿ 250 ಗಾಯಕರನ್ನು ಒಂದೇ ಕಡೆ ಸೇರಿಸುವ ವಿಭಿನ್ನ ಪ್ರಯೋಗ, ಯಾವಾಗ? ಎಲ್ಲಿ?

ಶಿವಮೊಗ್ಗದಲ್ಲಿ 250 ಗಾಯಕರನ್ನು ಒಂದೇ ಕಡೆ ಸೇರಿಸುವ ವಿಭಿನ್ನ ಪ್ರಯೋಗ, ಯಾವಾಗ? ಎಲ್ಲಿ?

ಬೆಂಗಳೂರಿನಿಂದ ಶಿವಮೊಗ್ಗದ ಮನೆಗೆ ಮರಳಿದ ಇಂಜಿನಿಯರ್‌ ಕುಟುಂಬ, ಒಳಗೆ ಕಾಲಿಟ್ಟಾಗ ಕಾದಿತ್ತು ಆಘಾತ

ಬೆಂಗಳೂರಿನಿಂದ ಶಿವಮೊಗ್ಗದ ಮನೆಗೆ ಮರಳಿದ ಇಂಜಿನಿಯರ್‌ ಕುಟುಂಬ, ಒಳಗೆ ಕಾಲಿಟ್ಟಾಗ ಕಾದಿತ್ತು ಆಘಾತ

ಹೊಸನಗರ ಕ್ಷೇತ್ರಕ್ಕಾಗಿ ಪಾದಯಾತ್ರೆ? ಹೇಗಿತ್ತು ಮೊದಲ ದಿನ? ಯಾರೆಲ್ಲ ಇದ್ದರು?

ಹೊಸನಗರ ಕ್ಷೇತ್ರಕ್ಕಾಗಿ ಪಾದಯಾತ್ರೆ? ಹೇಗಿತ್ತು ಮೊದಲ ದಿನ? ಯಾರೆಲ್ಲ ಇದ್ದರು?

ಭದ್ರಾವತಿಯಲ್ಲಿ 13 ವರ್ಷಗಳ ಬಳಿಕ ಆರೋಪಿ ಪತ್ತೆ, ಏನಿದು ಕೇಸ್?

ಭದ್ರಾವತಿಯಲ್ಲಿ 13 ವರ್ಷಗಳ ಬಳಿಕ ಆರೋಪಿ ಪತ್ತೆ, ಏನಿದು ಕೇಸ್?

ATMನಲ್ಲಿ ಹಣ ಡ್ರಾ ಮಾಡುವಾಗ ಹುಷಾರ್‌, ಅನವಟ್ಟಿಯಲ್ಲಿ ದಾಖಲಾಯ್ತು ಕೇಸ್‌, ಏನಿದು?

ATMನಲ್ಲಿ ಹಣ ಡ್ರಾ ಮಾಡುವಾಗ ಹುಷಾರ್‌, ಅನವಟ್ಟಿಯಲ್ಲಿ ದಾಖಲಾಯ್ತು ಕೇಸ್‌, ಏನಿದು?

ಬೆಳ್ಳೂರು ಸುತ್ತಾಮುತ್ತಾ ಒಂಟಿ ಸಲಗ ಪ್ರತ್ಯಕ್ಷ, ಗ್ರಾಮಸ್ಥರಿಗೆ ಆತಂಕ

ಬೆಳ್ಳೂರು ಸುತ್ತಾಮುತ್ತಾ ಒಂಟಿ ಸಲಗ ಪ್ರತ್ಯಕ್ಷ, ಗ್ರಾಮಸ್ಥರಿಗೆ ಆತಂಕ

ನಗರಸಭೆ ಸಿಬ್ಬಂದಿ ಎಂದು ನಂಬಿಸಿ ₹11.62 ಲಕ್ಷದ ಚಿನ್ನಾಭರಣ ಕಳವು, ಹೇಗಾಯ್ತು ಘಟನೆ?

ನಗರಸಭೆ ಸಿಬ್ಬಂದಿ ಎಂದು ನಂಬಿಸಿ ₹11.62 ಲಕ್ಷದ ಚಿನ್ನಾಭರಣ ಕಳವು, ಹೇಗಾಯ್ತು ಘಟನೆ?

Leave a Comment