
ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಜುಲೈ 2020
ಕರೋನದಿಂದ ರಕ್ಷಣೆಗೆ ಬೆಂಗಳೂರಿನಲ್ಲಿ ಪೊಲೀಸರಿಗೆ ಕಷಾಯ ನೀಡಲಾಗುತ್ತಿದೆ. ಇದರಿಂದ ಪ್ರಭಾವಿತರಾದ ಶಿವಮೊಗ್ಗದ ಸಬ್ ಇನ್ಸ್ಪೆಕ್ಟರ್ ಒಬ್ಬರು, ಮನೆಯಿಂದಲೇ ಕಷಾಯ ಪುಡಿ ಸಿದ್ಧಪಡಿಸಿಕೊಂಡು ಬಂದು ಠಾಣೆಯಲ್ಲಿ ಕಷಾಯ ತಯಾರು ಮಾಡಿ ಸಿಬ್ಬಂದಿಗೆ ಕೊಟ್ಟಿದ್ದಾರೆ.

ಯಾರದು ಸಬ್ ಇನ್ಸ್ಪೆಕ್ಟರ್?
ಶಿವಮೊಗ್ಗದ ಪೂರ್ವ ಟ್ರಾಫಿಕ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಭಾರತಿ ಅವರು ಸಿಬ್ಬಂದಿಗೆ ಕಷಾಯ ಸಿದ್ಧಪಡಿಸಿ ನೀಡಿದ್ದಾರೆ. ಇವತ್ತು ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳಿಗೆ ಕಷಾಯ ನೀಡಿದ್ದಾರೆ.
ಕಷಾಯದ ವಿಡಿಯೋ ವೈರಲ್
ಸಬ್ ಇನ್ಸ್ಪೆಕ್ಟರ್ ಭಾರತಿ ಅವರು ಟ್ರಾಫಿಕ್ ಸಿಬ್ಬಂದಿಗಳಿಗೆ ಕಷಾಯ ನೀಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಕುರಿತು ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಸಬ್ ಇನ್ಸ್ಪೆಕ್ಟರ್ ಭಾರತಿ ಅವರು, ನಮ್ಮ ಅತ್ತೆ, ಮಾವ ಕೇರಳದವರು. ಅವರಿಗೆ ಆಯುರ್ವೇದದತ್ತ ಒಲವು ಹೆಚ್ಚು. ಪ್ರತಿದಿನ ಮನೆಯಲ್ಲಿ ಕಷಾಯ ಇರುತ್ತದೆ. ಅದೆ ಕಷಾಯದ ಪುಡಿಯನ್ನು ತಂದು ಸಿದ್ಧಪಡಿಸಿ ನಮ್ಮ ಸಿಬ್ಬಂದಿಗೂ ನೀಡಿದ್ದೇನೆ ಅನ್ನುತ್ತಾರೆ ಅವರು.
ಇದು ಡಿಫರೆಂಟ್ ಕಷಾಯ
ಚಕ್ಕೆ, ಲವಂಗ, ಜೀರಿಗೆ, ಬೆಲ್ಲ, ಶುಂಠಿ, ಅಶ್ವಗಂಧ, ಮೆಣಸಿನಕಾಳು, ಪುದೀನ ಸೇರಿದಂತೆ 20ಕ್ಕೂ ಹೆಚ್ಚು ಪದಾರ್ಥಗಳನ್ನು ಬಳಕೆ ಮಾಡಿಕೊಂಡು ಕಷಾಯ ಸಿದ್ಧಪಡಿಸಲಾಗಿದೆ. ಸಬ್ ಇನ್ಸ್ಪೆಕ್ಟರ್ ಭಾರತಿ ಅವರು ತಮ್ಮ ಮನೆಯಲ್ಲೇ ಇವೆಲ್ಲದರ ಪೌಡರ್ ಸಿದ್ಧಪಡಿಸಿ, ಕಷಾಯ ಮಾಡಿ ತಂದು ಸಿಬ್ಬಂದಿಗಳಿಗೆ ನೀಡಿದ್ದಾರೆ.
ಪಾಯಿಂಟ್ ಟೂ ಪಾಯಿಂಟ್ ತಲುಪಿಸಬೇಕಿದೆ
ಈಗ ಸದ್ಯಕ್ಕೆ ಸಂಚಾರಿ ಠಾಣೆಯಲ್ಲಿದ್ದ ಸಿಬ್ಬಂದಿಗಳಿಗಷ್ಟೆ ಕಷಾಯ ನೀಡಿದ್ದಾರೆ. ‘ದೊಡ್ಡ ಫ್ಲಾಸ್ಕ್ಗೆ ಹುಡುಕುತ್ತಿದ್ದೇನೆ. ಪ್ರತಿ ಪಾಯಿಂಟ್ನಲ್ಲಿರುವ ಸಿಬ್ಬಂದಿಗೆ ಬೆಳಗ್ಗೆ ಮತ್ತು ಸಂಜೆ ಬಿಸಿ ಬಿಸಿ ಕಷಾಯ ತಲುಪಿಸಲು ಅನುಕೂಲವಾಗಲಿದೆ’ ಅಂತಾರೆ ಪಿಎಸ್ಐ ಭಾರತಿ.
ಕರೋನ ಸೋಂಕು ತಡೆಗೆ ಕಷಾಯ ಅನುಕೂಲ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಈಗ ಬಹುತೇಕರು ಕಷಾಯಕ್ಕೆ ಮಾರು ಹೊಗಿದ್ದಾರೆ. ಪೊಲೀಸರು ಅತಿ ಹೆಚ್ಚಾಗಿ ಕರೋನಾಗೆ ತುತ್ತಾಗುತ್ತಿದ್ದಾರೆ. ಇದನ್ನು ತಪ್ಪಿಸಿ, ಅವರ ಆರೋಗ್ಯ ವೃದ್ಧಿಗೆ ಪಿಎಸ್ಐ ಭಾರತಿ ಅವರು ಕಷಾಯ ನೀಡುತ್ತಿದ್ದಾರೆ. ಇದು ಮಾದರಿಯಾಗಿದ್ದು, ಪಿಎಸ್ಐ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200