ಒಂದೇ ದಿನದಲ್ಲಿ ಖಾಸಗಿ ಆಸ್ಪತ್ರೆಗಳ ಬೇಡಿಕೆ ಮಣಿದ ಸರ್ಕಾರ, ಸಿ.ಟಿ. ಸ್ಕ್ಯಾನ್ ದರದಲ್ಲಿ ಬದಲಾವಣೆ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

STATE NEWS | 8 MAY 2021

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಖಾಸಗಿ ಆಸ್ಪತ್ರೆಗಳ ಬೇಡಿಕೆಗೆ ರಾಜ್ಯ ಸರ್ಕಾರ ಒಂದೇ ದಿನದಲ್ಲಿ ಮಣಿದಿದೆ. ಸಿಟಿ ಸ್ಕ್ಯಾನ್ ದರವನ್ನು ಏರಿಕೆ ಮಾಡಿ ನೂತನ ಆದೇಶ ಹೊರಡಿಸಿದೆ.

ಸಿ.ಟಿ. ಸ್ಕ್ಯಾನ್‍ ದರವನ್ನು 1500 ರೂ.ಗೆ ಸರ್ಕಾರ ನಿಗದಿ ಮಾಡಿತ್ತು. ಆದರೆ ಈಗ 2500 ರೂ. ವರೆಗೂ ಸ್ವೀಕರಿಸಬಹುದು ಎಂದು ತಿಳಿಸಿದೆ. ಖಾಸಗಿ ಆಸ್ಪತ್ರೆ ಮತ್ತು ಆರೋಗ್ಯ ಕೇಂದ್ರಗಳಲ್ಲಿ ಈ ದರ ವಿಧಿಸಬಹುದು ಎಂದು ಆದೇಶದಲ್ಲಿ ಹೇಳಲಾಗಿದೆ.

ಬಿಪಿಎಲ್‍ ಕಾರ್ಡುದಾರರಿಗೆ 1500 ರೂ. ನಿಗದಿಪಡಿಸಲಾಗಿದೆ. ಎದೆಯ ಡಿಜಿಟಲ್ ಅಥವಾ ಸಾಮಾನ್ಯ ಸ್ವರೂಪದ ಎಕ್ಸ್‍ರೆ ದರದಲ್ಲಿ ಯಾವುದೆ ಬದಲಾವಣೆ ಆಗಿಲ್ಲ. ಎಕ್ಸ್‍ರೆಗೆ 250 ರೂ. ವರೆಗೂ ನಿಗದಿಪಡಿಸಿದೆ.

ಕರೋನ ಸೋಂಕಿತರಿಗೆ ಶ್ವಾಸಕೋಶದ ಸೋಂಕಿನ ಪ್ರಮಾಣ ತಿಳಿಯಲು ಸಿ.ಟಿ.ಸ್ಕ್ಯಾನ್ ಮತ್ತು ಎಕ್ಸ್‍ರೇ ಮಾಡಲಾಗುತ್ತದೆ. ಇದನ್ನೆ ಬಂಡವಾಳ ಮಾಡಿಕೊಂಡು ಕೆಲವು ಖಾಸಗಿ ಆಸ್ಪತ್ರೆಯಲ್ಲಿ ದುಬಾರಿ ದರ ವಿಧಿಸಲಾಗುತ್ತಿತ್ತು. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಆದೇ ಹೊರಡಿಸಿತ್ತು.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment