ವಿದ್ಯುತ್‌ ಬಳಕೆದಾರರಿಗೆ ಗುಡ್‌ ನ್ಯೂಸ್‌ | ಪೋಡಿ, ಸರ್ವೆ, ಹದ್ದುಬಸ್ತು ಸೇವಾ ಶುಲ್ಕ ಇಳಿಕೆ – ಸರ್ಕಾರದ ಸುದ್ದಿ ಫಟಾಫಟ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 4 JANUARY 2024

KARNATAKA GOVERNMENT : ವಿದ್ಯುತ್‌ ಬಳಕೆದಾರರಿಗೆ ರಾಜ್ಯ ಸರ್ಕಾರ ಗುಡ್‌ FATAFAT-NEWS-1ನ್ಯೂಸ್‌ ನೀಡಿದೆ. ಜನವರಿ ತಿಂಗಳಲ್ಲಿ ವಿದ್ಯುತ್‌ ಬಿಲ್‌ ಹೊರೆ ತುಸು ಕಡಿಮೆಯಾಗಲಿದೆ. ನವೆಂಬರ್‌ ತಿಂಗಳಲ್ಲಿ ಇಂಧನ ಮತ್ತು ವಿದ್ಯುತ್‌ ಖರೀದಿ ಹೊಂದಾಣಿಕೆ ವೆಚ್ಚ ಇಳಿಕೆಯಾಗಿದೆ. ಆದ್ದರಿಂದ ಜನವರಿ ತಿಂಗಳ ವಿದ್ಯುತ್‌ ಬಿಲ್‌ನಲ್ಲಿ ಪ್ರತಿ ಯುನಿಟ್‌ಗೆ 3 ಪೈಸೆಯಿಂದ 51 ಪೈಸೆವರೆಗೂ ಕಡಿತ ಮಾಡಲು ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ ನಿರ್ಧರಿಸಿದೆ. ಈ ಸಂಬಂಧ ಎಲ್ಲಾ ಎಸ್ಕಾಂಗಳಿಗೆ ಸೂಚನೆ ನೀಡಲಾಗಿದೆ.

ಪೋಡಿ, ಸರ್ವೆ, ಹದ್ದುಬಸ್ತು ಸೇವಾ ಶುಲ್ಕ ಇಳಿಕೆ

FATAFAT-NEWS-2ಜಮೀನಿನ ಅಳತೆ, ಸರ್ವೇ, ಪೋಡಿ, ಹದ್ದುಬಸ್ತು ಸೇವಾ ಶುಲ್ಕವನ್ನು ಇಳಿಕೆ ಮಾಡಲಾಗಿದೆ. ಸ್ವಾವಲಂಬಿ ಯೋಜನೆ ಅಡಿ ಜಮೀನು ನಕ್ಷೆಗಾಗಿ (ಸ್ಕೆಚ್‌) ಸಲ್ಲಿಸುವ ಪ್ರತಿ ಅರ್ಜಿಗೆ ಪರಿಷ್ಕೃತ ಶುಲ್ಕ ನಿಗದಿ ಪಡಿಸಲಾಗಿದೆ. 11 ಇ ನಕ್ಷೆ, ತತ್ಕಾಲ್‌ ಪೋಡಿ, ಭೂ ಪರಿವರ್ತನೆ ಪೂರ್ವನಕ್ಷೆ ಶುಲ್ಕ ಪ್ರತಿ 2 ಎಕರೆಗೆ ನಗರ ಪ್ರದೇಶದಲ್ಲಿ 2500 ರೂ., ಗ್ರಾಮೀಣ ಭಾಗದಲ್ಲಿ 1500 ರೂ.  2 ಎಕರೆ ಬಳಿಕ ಪ್ರತಿ ಎಕರೆಗೆ ನಗರ ಪ್ರದೇಶದಲ್ಲಿ 1 ಸಾವಿರ ರೂ., ಗ್ರಾಮೀಣ ಭಾಗದಲ್ಲಿ 400 ರೂ. ನಿಗದಿಪಡಿಸಲಾಗಿದೆ. ಇನ್ನು, ಜಮೀನು ಹದ್ದುಬಸ್ತಿಗೆ 2 ಎಕರೆವರೆಗೆ ನಗರ ಪ್ರದೇಶದಲ್ಲಿ 2 ಸಾವಿರ ರೂ., ಗ್ರಾಮೀಣ ಭಾಗದಲ್ಲಿ 500 ರೂ., 2 ಎಕರೆಗಿಂತಲು ಹೆಚ್ಚಿನ ಜಾಗಕ್ಕೆ ನಗರ ಪ್ರದೇಶದಲ್ಲಿ ಪ್ರತಿ ಎಕರೆಗೆ 400 ರೂ., ಗ್ರಾಮೀಣ ಭಾಗದಲ್ಲಿ 300 ರೂ. ನಿಗದಿಪಡಿಸಲಾಗಿದೆ.

7 ಸಾವಿರ ರೈತರಿಗೆ ಹಕ್ಕುಪತ್ರ

FATAFAT-NEWS-3ಅರಣ್ಯ ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿರುವ 7 ಸಾವಿರ ರೈತರಿಗೆ ಹಕ್ಕುಪತ್ರ ನೀಡಲಾಗುತ್ತಿದೆ. ನಿಗದಿತ ಅವಧಿ ಒಳಗೆ ಅರ್ಜಿ ಸಲ್ಲಿಸಿದ್ದವರಿಗೆ ಹಕ್ಕು ಪತ್ರ ನೀಡಲು ಸರ್ಕಾರ ತೀರ್ಮಾನಿಸಿದೆ. ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಿರುವ 13,750 ಪ್ರಕರಣಗಳ 31,864 ಎಕರೆ ಭೂಮಿ ಇದೆ. ಈ ಪೈಕಿ 7 ಸಾವಿರ ಪ್ರಕರಣಗಳಿಗೆ ಹಕ್ಕು ಪತ್ರ ನೀಡಲಾಗುವುದು. ಆದರೆ 3 ಎಕರೆಗಿಂತ ಹೆಚ್ಚಿನ ಭೂಮಿ ನೀಡುವುದಿಲ್ಲ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಉಚಿತ ಟಿಕೆಟ್‌ ಮೌಲ್ಯ 3 ಸಾವಿರ ಕೋಟಿ

Fatafat 3ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಶಕ್ತಿ ಯೋಜನೆಗೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉಚಿತ ಟಿಕೆಟ್‌ ಮೌಲ್ಯ 3 ಸಾವಿರ ಕೋಟಿ ರೂ.ಗೆ ತಲುಪಿದೆ. ಈವರೆಗೆ ಮಹಿಳಾ ಪ್ರಯಾಣಿಕರ ಸಂಖ್ಯೆ 126 ಕೋಟಿಗೆ ತಲುಪಿದೆ. ‘ಭವಿಷ್ಯದಲ್ಲಿ ಸೇವೆ ಇನ್ನಷ್ಟು ಉತ್ತಮವಾಗಲಿದೆ. ಯಾರಿಗು ತೊಂದರೆ ಆಗದಂತೆ ಅಗತ್ಯವಿರುವ ಕಡೆಗೆ ಹೆಚ್ಚುವರಿ ಬಸ್‌ ಓಡಿಸಲಾಗುತ್ತದೆʼ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಇದನ್ನೂ ಓದಿ – ಮೇಲೆ ಸಚಿವರ ಸಭೆ, ಕೆಳಗೆ ಕರೆಂಟ್ ಇಲ್ಲದೆ ನೆಲದ ಮೇಲೆ ಕುಳಿತ ಜನ, ಶಿವಮೊಗ್ಗದಲ್ಲಿ ಇದೆಂಥಾ ಅವಸ್ಥೆ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment