ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಬೆಂಗಳೂರು : ಕರೋನ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳುವ ಕುರಿತು ರಾಜ್ಯ ಸರ್ಕಾರ ನೂತನ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಬೆಡ್ ಮತ್ತು ವೆಂಟಿಲೇಟರ್ ಕೊರತೆಯನ್ನು ನೀಗಿಸುವ ಸಲುವಾಗಿ ಈ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ.
ವಿಧಾನಸೌಧದಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಸುದ್ದಿಗೋಷ್ಠಿ ನಡೆಸಿ ನೂತನ ಮಾರ್ಗಸೂಚಿಯ ಕುರಿತು ತಿಳಿಸಿದರು.
ಸಚಿವರು ಹೇಳಿದ್ದೇನು? ಮಾರ್ಗಸೂಚಿಯಲ್ಲಿ ಏನಿದೆ?
ಪಾಸಿಟಿವ್ ಬಂದಿದೆ ಅಂದಾಕ್ಷಣ ಶೇ.90ರಷ್ಟು ಮಂದಿ ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆ ಇಲ್ಲ. ಐಸೊಲೇಷನ್ನಲ್ಲಿ ಇದ್ದುಕೊಂಡು ಚಿಕಿತ್ಸೆ ಪಡೆಯಬಹುದಾಗಿದೆ. ಇದಕ್ಕಾಗಿ ಪ್ರತ್ಯೇಕ್ಷ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಆಸ್ಪತ್ರೆಗಳಿಗೂ ಈ ಮಾರ್ಗಸೂಚಿ ತಿಳಿಸಲಾಗಿದೆ.
ಜೂನ್ವರೆಗೆ ಔಷಧಕ್ಕಾಗಿ 81.32 ಕೋಟಿ ರೂ. ಅಂದಾಜು ಮಾಡಿ ಕ್ಯಾಬಿನೆಟ್ನಲ್ಲಿ ಅನುಮತಿ ಪಡೆಯಲಾಗಿದೆ. ಲಸಿಕೆಗೆ 400 ಕೋಟಿ ರೂ., ರೆಮಿಡಿಸ್ವೀರ್ 28 ಕೋಟಿ ರೂ. ಮಂಜೂರು ಮಾಡಲಾಗಿದೆ.
ಇದನ್ನೂ ಓದಿ – ರಾಜ್ಯದಲ್ಲಿ 14 ದಿನ ಬಿಗಿ ಕ್ರಮ ಘೋಷಣೆ, ಏನಿರುತ್ತೆ? ಏನಿರಲ್ಲ?
ಬೆಂಗಳೂರಿನಲ್ಲಿ ವಿಕ್ಟೋರಿಯಾ ಮತ್ತು ಬೌರಿಂಗ್ ಆಸ್ಪತ್ರೆಯಲ್ಲಿ ಇನ್ನು ಎಂಟು ಹತ್ತು ದಿನದಲ್ಲಿ ಹೆಚ್ಚುವರಿ 250 ಹಾಸಿಗೆ ಜೋಡಣೆಯಾಗಲಿದೆ.
ಐಸಿಯು, ವೆಂಟಿಲೇಟರ್ ಸೇರಿ, ಎಲ್ಲಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೂರು ಸಾವಿರ ಹಾಸಿಗೆಗಳನ್ನು ಹೆಚ್ಚಳ ಮಾಡಲಾಗುತ್ತದೆ.
ಒಂದೇ ಮೆಷಿನ್ನಲ್ಲಿ ಇಬ್ಬರಿಗೆ ಆಕ್ಸಿಜನ್ ಪೂರೈಕೆ ಮಾಡುವ ಪೋರ್ಟಬಲ್ ಆಕ್ಸಿಜನ್ ಕಾನ್ಸನ್ಟ್ರೇಟರ್ಗಳನ್ನು ಅಳವಿಡಿಸುವುದು. ಕೋವಿಡ್ ಕೇರ್ ಸೆಂಟರ್ ಮತ್ತು ಹೊಟೇಲ್ಗಳಲ್ಲಿ ಸ್ಟೆಪ್ ಡೌನ್ ಆಸ್ಪತ್ರೆಗಳನ್ನು ಸ್ಥಾಪಿಸಿ ಚಿಕಿತ್ಸೆ ನೀಡಲಾಗುತ್ತದೆ.
ಹೋಂ ಕ್ವಾರಂಟೈನ್ನಲ್ಲಿ ಇರುವವರೊಂದಿಗೆ ಪ್ರತಿದಿನ ವೈದ್ಯರು ಮಾತನಾಡಿ, , ಸ್ಥೈರ್ಯ ಮತ್ತು ಮಾರ್ಗದರ್ಶನ ನೀಡಲು ಕ್ರಮ. ಇನ್ನೊಂದೆರಡು ದಿನದಲ್ಲಿ ಒಂದು ಸಾವಿರ ಜನರು ಇರುವ ಕಾಲ್ ಸೆಂಟರ್ಗಳನ್ನು ಸ್ಥಾಪಿಸಲು ಕ್ರಮ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422