ಬಸ್‌ ಪಾಸ್‌ ನವೀಕರಣಕ್ಕೆ ಅರ್ಜಿ ಸಲ್ಲಿಕೆಗೆ ಸೂಚನೆ, ಹೇಗೆ ಸಲ್ಲಿಸಬೇಕು? ಏನೆಲ್ಲ ದಾಖಲೆ ಬೇಕು?

 ಶಿವಮೊಗ್ಗ  LIVE 

ಶಿವಮೊಗ್ಗ: ಅಂಗವಿಕಲರಿಗೆ 2026ನೇ ಸಾಲಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್‌ಗಳ (bus passes) ವಿತರಣೆ ಹಾಗೂ ನವೀಕರಣಕ್ಕೆ ಸೇವಾ ಸಿಂಧು ಆನ್‌ಲೈನ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಡಿ.30ರಿಂದ ಫೆ.28ರವರೆಗೆ ಅರ್ಜಿ ಸಲ್ಲಿಸುವುದು ಕಡ್ಡಾಯ.

ಹೊಸದಾಗಿ ಪಾಸ್ ಪಡೆಯಲು ವಿಭಾಗೀಯ ನಿಯಂತ್ರಣಾಧಿಕಾರಿಗಳು ಶಿವಮೊಗ್ಗ ವಿಭಾಗ ಎಂಬ ಕೌಂಟರ್ ಆಯ್ಕೆ ಮಾಡಿಕೊಳ್ಳಬೇಕು. 2025ನೇ ಸಾಲಿನಲ್ಲಿ ಪಾಸ್ ಪಡೆದಿರುವ ಫಲಾನುಭವಿಗಳು ಪಾಸ್ ನವೀಕರಣಕ್ಕಾಗಿ ಘಟಕ ವ್ಯವಸ್ಥಾಪಕರ ಕೌಂಟರ್ ಆಯ್ಕೆ ಮಾಡಬೇಕು.

ಇದನ್ನೂ ಓದಿ » ಹೋಂ ಸ್ಟೇ ಮಾಲೀಕ, ರೂಂ ಬಾಯ್‌ ಸೇರಿ ಮೂವರಿಗೆ 20 ವರ್ಷ ಜೈಲು, ದಂಡ, ಕಾರಣವೇನು?

ಪಾಸ್ ಪಡೆಯಲು ಬರುವಾಗ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಯವರಿಂದ ದೃಢೀಕರಿಸಿದ ಮಾನ್ಯತೆ ಇರುವ ಅಂಗವಿಕಲರ ಗುರುತಿನ ಚೀಟಿ ಪುಸ್ತಕ ಅಥವಾ ಯುಡಿಐಡಿ ಸ್ಮಾರ್ಟ್ ಕಾರ್ಡ್, ಅಂಗವೈಕಲ್ಯದ ಬಗ್ಗೆ ಪ್ರಮಾಣಪತ್ರ, ಫಲಾನುಭವಿಗಳ ಇತ್ತೀಚಿನ ಮೂರು ಭಾವಚಿತ್ರ, 2025ನೇ ಸಾಲಿನಲ್ಲಿ ಪಡೆದಿರುವ ಮೂಲ ಪಾಸ್, ಆಧಾ‌ರ್ ಇಲ್ಲವೇ ಪಡಿತರ ಚೀಟಿ ನೀಡಬೇಕು. ಇದೆಲ್ಲವೂ ಜೆಪಿಜಿ ಅಥವಾ ಪಿಡಿಎಫ್ ನಮೂನೆಯಲ್ಲಿರಬೇಕು. ಪಾಸ್ ಶುಲ್ಕ ₹660 ನಗದು ಮೂಲಕ ಪಾವತಿಸಬೇಕು.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment