ಶಿವಮೊಗ್ಗ ಜನಶತಾಬ್ದಿ ಸೇರಿ ಹಲವು ರೈಲುಗಳ ಪ್ರಯಾಣ ಅವಧಿ ಕಡಿತ, ಯಶವಂತಪುರ ರೈಲಿನ ವೇಳಾಪಟ್ಟಿ ಬದಲು

 ಶಿವಮೊಗ್ಗ  LIVE 

ರೈಲ್ವೆ ಸುದ್ದಿ: ನೈಋತ್ಯ ರೈಲ್ವೆ ನೂತನ ವೇಳಾಪಟ್ಟಿ ಪ್ರಕಟಿಸಿದೆ. ಜನವರಿ 1ರಿಂದ ಪರಿಷ್ಕೃತ ವೇಳಾಪಟ್ಟಿ ಜಾರಿಗೆ ಬರಲಿದೆ. ಅದರಂತೆ ಶಿವಮೊಗ್ಗದ ಕೆಲವು ರೈಲುಗಳ (Shivamogga trains) ಪ್ರಯಾಣ ಅವಧಿ ಕಡಿತವಾಗಲಿದೆ. ನಿಗದಿಗಿಂತಲು ಕೆಲವು ನಿಮಿಷ ಬೇಗ ನಿಲ್ದಾಣಗಳನ್ನು ತಲುಪಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಯಾವ್ಯಾವ ರೈಲು? ಏನೇನು ಬದಲಾವಣೆ?
» ರೈಲಿನ ಟೈಮ್‌ ಟೇಬಲ್‌ ಬದಲು

ಯಶವಂತಪುರ – ಶಿವಮೊಗ್ಗ (ರೈಲು ಸಂಖ್ಯೆ 16581) – ಈವರೆಗು ಸೋಮವಾರ, ಬುಧವಾರ, ಶನಿವಾರ ಚಲಿಸುತ್ತಿತ್ತು. ಇನ್ಮುಂದೆ ಮಂಗಳವಾರ, ಗುರುವಾರ, ಭಾನುವಾರ ಸಂಚರಿಸಲಿದೆ. ಜನವರಿ 1ರಿಂದ ಜಾರಿಗೆ ಬರಲಿದೆ.

ರೈಲುಗಳ ಪ್ರಯಾಣ ಅವಧಿ ಕಡಿತ

ನೈಋತ್ಯ ರೈಲ್ವೆ ವ್ಯಾಪ್ತಿಯ 123 ರೈಲುಗಳು ಸ್ಪೀಡ್‌ ಆಗಲಿವೆ. ಈ ಪೈಕಿ ಶಿವಮೊಗ್ಗ ಜಿಲ್ಲೆಗೆ ಸೇರಿದ ರೈಲುಗಳು ಇವೆ. ಅವುಗಳ ಪಟ್ಟಿ ಇಲ್ಲಿದೆ.

Shimoga-Janshatabdi-train-speed-up - Shivamogga Trains

» ಯಶವಂತಪುರ – ಶಿವಮೊಗ್ಗ (ರೈಲು ಸಂಖ್ಯೆ 16581) : ಜನವರಿ 1 ರಿಂದ ಈ ರೈಲಿನ ಪ್ರಯಾಣ ಅವಧಿ 25 ನಿಮಿಷ ಕಡಿತವಾಗಲಿದೆ. ಈವರೆಗು 6 ಗಂಟೆ 10 ನಿಮಿಷ ತೆಗೆದುಕೊಳ್ಳುತ್ತಿದ್ದ ರೈಲು ಇನ್ಮುಂದೆ 5 ಗಂಟೆ 45 ನಿಮಿಷದಲ್ಲಿ ಶಿವಮೊಗ್ಗ ತಲುಪಲಿದೆ.

» ಎಂಜಿಆರ್‌ ಚೆನ್ನೈ – ಶಿವಮೊಗ್ಗ (ರೈಲು ಸಂಖ್ಯೆ 12691): ಜನವರಿ 1 ರಿಂದ ಈ ರೈಲಿನ ಪ್ರಯಾಣ ಅವಧಿ 25 ನಿಮಿಷ ನಿಮಿಷ ಕಡಿತವಾಗಲಿದೆ. ಈವರೆಗು 12 ಗಂಟೆ 50 ನಿಮಿಷ ತೆಗೆದುಕೊಳ್ಳುತ್ತಿದ್ದ ರೈಲು ಇನ್ಮುಂದೆ 12 ಗಂಟೆ 30 ನಿಮಿಷದಲ್ಲಿ ಶಿವಮೊಗ್ಗ ತಲುಪಲಿದೆ.

ಇದನ್ನೂ ಓದಿ » ಶಿವಮೊಗ್ಗದ ಎರಡು ಎಕ್ಸ್‌ಪ್ರೆಸ್‌ ರೈಲುಗಳು ಇನ್ಮುಂದೆ ಸೂಪರ್‌ ಫಾಸ್ಟ್‌ ರೈಲುಗಳು, ಯಾವ್ಯಾವ ರೈಲು?

» ಶಿವಮೊಗ್ಗ – ಯಶವಂತಪುರ (ರೈಲು ಸಂಖ್ಯೆ 16582): ಜನವರಿ 1 ರಿಂದ ಈ ರೈಲಿನ ಪ್ರಯಾಣ ಅವಧಿ 15 ನಿಮಿಷ ನಿಮಿಷ ಕಡಿತವಾಗಲಿದೆ. ಈವರೆಗು 5 ಗಂಟೆ 5 ನಿಮಿಷ ತೆಗೆದುಕೊಳ್ಳುತ್ತಿದ್ದ ರೈಲು ಇನ್ಮುಂದೆ 4 ಗಂಟೆ 50 ನಿಮಿಷದಲ್ಲಿ ಯಶವಂತಪುರ ತಲುಪಲಿದೆ.

» ಯಶವಂತಪುರ – ಶಿವಮೊಗ್ಗ (ರೈಲು ಸಂಖ್ಯೆ 20689 (16579)): ಜನವರಿ 1 ರಿಂದ ಈ ರೈಲು 10 ನಿಮಿಷ ಸ್ಪೀಡ್‌ ಆಗಲಿವೆ. ಈವರೆಗು 5 ಗಂಟೆ ತೆಗೆದುಕೊಳ್ಳುತ್ತಿದ್ದ ರೈಲು ಇನ್ಮುಂದೆ 4 ಗಂಟೆ 50 ನಿಮಿಷದಲ್ಲಿ ಯಶವಂತಪುರ ತಲುಪಲಿದೆ.

» ಬೆಂಗಳೂರು – ಶಿವಮೊಗ್ಗ ಜನಶತಾಬ್ದಿ (ರೈಲು ಸಂಖ್ಯೆ 12089): ಜನವರಿ 1 ರಿಂದ ಈ ರೈಲು 5 ನಿಮಿಷ ಸ್ಪೀಡ್‌ ಆಗಲಿವೆ. ಈವರೆಗು 4 ಗಂಟೆ 25 ನಿಮಿಷ ತೆಗೆದುಕೊಳ್ಳುತ್ತಿದ್ದ ರೈಲು ಇನ್ಮುಂದೆ 4 ಗಂಟೆ 20 ನಿಮಿಷದಲ್ಲಿ ಶಿವಮೊಗ್ಗ ತಲುಪಲಿದೆ. (Shivamogga Trains)

» ಮೈಸೂರು – ತಾಳಗುಪ್ಪ (ರೈಲು ಸಂಖ್ಯೆ 16227): ಜನವರಿ 1 ರಿಂದ ಈ ರೈಲು 10 ಮುಂಚಿತವಾಗಿ ನಿಗದಿತ ನಿಲ್ದಾಣ ತಲುಪಲಿದೆ. ಈವರೆಗು ಪ್ರಯಾಣದ ಅವಧಿ 12 ಗಂಟೆ 20 ನಿಮಿಷ ಇತ್ತು. ಇನ್ಮುಂದೆ 12 ಗಂಟೆ 10 ನಿಮಿಷದಲ್ಲಿ ಪ್ರಯಾಣ ಮುಗಿಸಲಿದೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment