ಶಿವಮೊಗ್ಗದಿಂದ ಬೆಂಗಳೂರಿಗೆ ಎಷ್ಟು ರೈಲುಗಳಿವೆ? ಇಲ್ಲಿದೆ ಪರಿಷ್ಕೃತ ವೇಳಾಪಟ್ಟಿ

 ಶಿವಮೊಗ್ಗ  LIVE 

ರೈಲ್ವೆ ಸುದ್ದಿ: ನೈಋತ್ಯ ರೈಲ್ವೆ ಇಲಾಖೆಯು ಜನವರಿ 1ರಿಂದ ಹಲವು ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ. ಶಿವಮೊಗ್ಗ – ಬೆಂಗಳೂರು ಮಧ್ಯೆ ಸಂಚರಿಸುವ ಕೆಲವು ರೈಲುಗಳ ವೇಳಾಪಟ್ಟಿಯಲ್ಲಿಯು ಬದಲಾವಣೆಯಾಗಿದೆ. ಅವುಗಳ ವೇಳಾಪಟ್ಟಿ (train timings) ಇಲ್ಲಿದೆ.

ವಾರದ ಎಲ್ಲ ದಿನವು ಬೆಳಗ್ಗೆ 5.15ಕ್ಕೆ ಶಿವಮೊಗ್ಗದಿಂದ ಹೊರಡಲಿದೆ. ಬೆಳಗ್ಗೆ 9.50ಕ್ಕೆ ಬೆಂಗಳೂರಿನ ಮಜೆಸ್ಟಿಕ್‌ ರೈಲ್ವೆ ನಿಲ್ದಾಣ ತಲುಪಲಿದೆ.

ಭದ್ರಾವತಿಗೆ 5.31ಕ್ಕೆ ತಲುಪಿ 5.33ಕ್ಕೆ ಹೊರಡಲಿದೆ. ತರೀಕೆರೆ (5.50/5.51), ಬೀರೂರು (6.17/6.18), ಕಡೂರು (6.27/6.28), ಅರಸೀಕೆರೆ (6.58/7.00), ತಿಪಟೂರು (7.14/7.15), ತುಮಕೂರು (8.09/8.10), ಯಶವಂತಪುರ (9.18/9.20), ಬೆಂಗಳೂರು 9.50ಕ್ಕೆ ತಲುಪಲಿದೆ.

shimoga-to-bangalore-jan-shatabdi-train-railway.webp

ಪ್ರತಿದಿನ ಬೆಳಗ್ಗೆ 5.20ಕ್ಕೆ ತಾಳಗುಪ್ಪದಿಂದ ಹೊರಡಲಿದೆ. ಸಾಗರದಿಂದ ಬೆಳಗ್ಗೆ 5.37ಕ್ಕೆ ಹೊರಡಲಿದೆ. ಶಿವಮೊಗ್ಗದಿಂದ ಬೆಳಗ್ಗೆ 7.10ಕ್ಕೆ ಹೊರಡಲಿದೆ. ಭದ್ರಾವತಿ 7.30ಕ್ಕೆ, ಮಧ್ಯಾಹ್ನ 12ಕ್ಕೆ ಬೆಂಗಳೂರು ತಲುಪಲಿದೆ.

ಶಿವಮೊಗ್ಗದಿಂದ ಪ್ರತಿದಿನ ಮಧ್ಯಾಹ್ನ 3.50ಕ್ಕೆ ಹೊರಡಲಿದೆ. ಭದ್ರಾವತಿಯಿಂದ 4.10ಕ್ಕೆ ಹೊರಡಲಿದೆ. ರಾತ್ರಿ 8.35ಕ್ಕೆ ಯಶವಂತಪುರ ತಲುಪಲಿದೆ.

251221 Vistadom Train Boggie for Shimoga Yeshwanthapura Train

ವಾರಕ್ಕೆ ಒಮ್ಮೆ ಮಾತ್ರ ರೈಲು ಸಂಚರಿಸಲಿದೆ. ಶನಿವಾರ ಸಂಜೆ 5.40ಕ್ಕೆ ಹೊರಡಲಿದೆ. ರಾತ್ರಿ 11 ಗಂಟೆಗೆ ಬೆಂಗಳೂರು ತಲುಪಲಿದೆ. ಭಾನುವಾರ ಬೆಳಗ್ಗೆ 4.55ಕ್ಕೆ ಚೆನ್ನೈ ತಲುಪಲಿದೆ.

ಪ್ರತಿದಿನ ತಾಳಗುಪ್ಪದಿಂದ ರಾತ್ರಿ 8.55ಕ್ಕೆ ಹೊರಡಲಿದೆ. ರಾತ್ರಿ 11 ಗಂಟೆಗೆ ಶಿವಮೊಗ್ಗದಿಂದ ಹೊರಡಲಿದೆ. ಬೆಳಗ್ಗೆ 4.50ಕ್ಕೆ ಬೆಂಗಳೂರು ತಲುಪಲಿದೆ. ಬೆಳಗ್ಗೆ 8.20ಕ್ಕೆ ಮೈಸೂರು ತಲುಪಲಿದೆ.

ಭಾನುವಾರ, ಮಂಗಳವಾರ, ಗುರುವಾರ ಮಾತ್ರ ಈ ರೈಲು ಸಂಚರಿಸಲಿದೆ. ಶಿವಮೊಗ್ಗದಿಂದ ರಾತ್ರಿ 11.55ಕ್ಕೆ ಹೊರಡಲಿದೆ. ಮರುದಿನ ಬೆಳಗ್ಗೆ 4.45ಕ್ಕೆ ಯಶವಂತಪುರ ತಲುಪಲಿದೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment