ಶಿವಮೊಗ್ಗ ಲೈವ್.ಕಾಂ | TALAGUPPA NEWS | 25 ಜುಲೈ 2021
ತಾಳಗುಪ್ಪದಿಂದ ರೈಲು ಸಂಚಾರ ಪುನಾರಂಭವಾಗಿದೆ. ಶನಿವಾರದಿಂದಲೇ ತಾಳಗುಪ್ಪದಿಂದ ರೈಲುಗಳು ಬೆಂಗಳೂರು, ಮೈಸೂರಿಗೆ ಪ್ರಯಾಣ ಬೆಳೆಸಿವೆ.
![]() |
ಭಾರಿ ಮಳೆಗೆ ವರದಾ ನದಿ ಉಕ್ಕಿ ಹರಿದಿತ್ತು. ಸಾಗರ ಜಂಬಗಾರು ಮತ್ತು ತಾಳಗುಪ್ಪ ನಡುವೆ ಹಲವು ಕಡೆ ರೈಲು ಹಳಿ ಜಲಾವೃತವಾಗಿತ್ತು. ಹಾಗಾಗಿ ಶುಕ್ರವಾರ ರಾತ್ರಿ ತೆರಳಬೇಕಿದ್ದ ತಾಳಗುಪ್ಪ – ಮೈಸೂರು ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು. ಅಲ್ಲದೆ ಇಂಟರ್‍ಸಿಟಿ ರೈಲು ಸಂಚಾರವನ್ನು ಶಿವಮೊಗ್ಗಕ್ಕೆ ಸೀಮಿತಗೊಳಿಸಲಾಗಿತ್ತು.
ಪುನಾರಂಭವಾಯಿತು ರೈಲು ಸಂಚಾರ
ಶನಿವಾರದಿಂದ ರೈಲು ಸಂಚಾರ ಪುನಾರಂಭವಾಗಿದೆ. ತಾಳಗುಪ್ಪದಿಂದ ಮೈಸೂರಿಗೆ ರೈಲುಗಳು ಸಂಚರಿಸಿದವು. ಪ್ರಯಾಣಿಕರ ಸಂಖ್ಯೆಯು ದೊಡ್ಡದಾಗಿತ್ತು. ಇವತ್ತಿನಿಂದ ರೈಲು ಸಂಚಾರ ಯಥಾಸ್ಥಿತಿಯಲ್ಲಿ ಇರಲಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಹಳಿ ಪರಿಶೀಲಿಸಿದ ಅಧಿಕಾರಿಗಳು
ಹಳಿ ಜಲಾವೃತವಾಗಿದ್ದರಿಂದ ರೈಲು ಸಂಚಾರ ಪುನಾರಂಭಕ್ಕೂ ಮೊದಲು ಹಳಿ ಪರಿಶೀಲನೆ ನಡೆಸಬೇಕಾಗುತ್ತದೆ. ರೈಲ್ವೆ ಅಧಿಕಾರಿಗಳು ಶುಕ್ರವಾರ ಮತ್ತು ಶನಿವಾರ ಹಳಿಯ ಪರಿಶೀಲಿಸಿದರು. ಹಳಿ ಡ್ಯಾಮೇಜ್ ಆಗಿದೆಯೇ, ರೈಲು ಸಂಚರಿಸಿದರೆ ನೆಲ ಕುಸಿಯಬುಹುದೆ ಎಂದೆಲ್ಲ ಪರಿಶೀಲನೆ ಮಾಡಿದ ಬಳಿಕ ರೈಲು ಸಂಚಾರಕ್ಕೆ ಅವಕಾಶ ನೀಡಲಾಯಿತು.
.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200