ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 6 MAY 2024
ELECTION NEWS : ಜಿಲ್ಲೆಯ ಮಸ್ಟರಿಂಗ್ ಕೇಂದ್ರಗಳಿಂದ ಚುನಾವಣ ಅಧಿಕಾರಿ, ಸಿಬ್ಬಂದಿ ಕ್ಷೇತ್ರದ ಮತಗಟ್ಟೆಗಳಿಗೆ ತೆರಳಿದರು. ಮತಯಂತ್ರಗಳು ಸೇರಿದಂತೆ ವಿವಿಧ ಪರಿಕರಗಳನ್ನು ಕೊಂಡೊಯ್ದರು. ಮಸ್ಟರಿಂಗ್ ಕೇಂದ್ರದಿಂದ ತೆರಳುವ ಮುನ್ನ ಕರ್ತವ್ಯ ನಿರತ ಸಿಬ್ಬಂದಿಗೆ ಕೊನೆಯ ಹಂತದ ತರಬೇತಿ ನೀಡಲಾಯಿತು.
ಎಲ್ಲೆಲ್ಲಿಂದ ತೆರಳಿದರು ಸಿಬ್ಬಂದಿ?
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಕ್ಕೆ ಶಿವಮೊಗ್ಗದ ಹೆಚ್.ಎಸ್ ರುದ್ರಪ್ಪ ರಾಷ್ಟ್ರೀಯ ಪದವಿಪೂರ್ವ ಕಾಲೇಜು, ಭದ್ರಾವತಿ ಕ್ಷೇತ್ರಕ್ಕೆ ಸಂಚಿ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪಿಯು ಕಾಲೇಜು, ಶಿವಮೊಗ್ಗ ಕ್ಷೇತ್ರಕ್ಕೆ ಸಹ್ಯಾದ್ರಿ ಕಾಮರ್ಸ್ ಆಂಡ್ ಮ್ಯಾನೇಜ್ಮೆಂಟ್ ಕಾಲೇಜು, ತೀರ್ಥಹಳ್ಳಿಗೆ ಡಾ.ಯು.ಆರ್.ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆ ಮತ್ತು ಪಿಯು ಕಾಲೇಜ್, ಶಿಕಾರಿಪುರ ಮತಕ್ಷೇತ್ರಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸೊರಬ ಕ್ಷೇತ್ರಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಾಗೂ ಸಾಗರ ಕ್ಷೇತ್ರಕ್ಕೆ ಸರ್ಕಾರಿ ಜ್ಯೂನಿಯರ್ ಪಿಯು ಕಾಲೇಜಿನಲ್ಲಿ ಮಸ್ಟರಿಂಗ್ ನಡೆಯಿತು.
ಚುನಾವಣೆ ಸಿಬ್ಬಂದಿ ಎರಡು ಮತ ಯಂತ್ರ, ವಿವಿ ಪ್ಯಾಟ್ ಮತ್ತು ಅಗತ್ಯ ವಸ್ತುಗಳನ್ನು ಹೊತ್ತು ನಿಗದಿ ರೂಟ್ನ ಬಸ್ಸುಗಳಲ್ಲಿ ತೆರಳಿದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಚುನಾವಣೆ ಮಸ್ಟರಿಂಗ್ ಕೇಂದ್ರಗಳಿಗೆ ಆಗಮಿಸಿದ ಬಸ್ಸುಗಳು, ಎಷ್ಟು ವಾಹನ ಬಳೆಕಯಾಗ್ತಿದೆ? ಇಲ್ಲಿದೆ ಡಿಟೇಲ್ಸ್
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422