ಶಿವಮೊಗ್ಗ ಜಿಲ್ಲೆಯಲ್ಲಿ ತಗ್ಗಿದ ಮಳೆ, ಎಲ್ಲೆಲ್ಲಿ ಎಷ್ಟಾಗಿದೆ ವರ್ಷಧಾರೆ? ಇಲ್ಲಿದೆ ಹೋಬಳಿವಾರು ಮಾಹಿತಿ

ಮಳೆ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಒಂದೇ ದಿನಕ್ಕೆ ಮಳೆ ಪ್ರಮಾಣ ತೀವ್ರ ಕುಸಿತ ಕಂಡಿದೆ. ಜೂನ್‌ 9ರ ಬೆಳಗ್ಗೆ 8:30ರಿಂದ ಜೂನ್‌ 10ರ ಬೆಳಗ್ಗೆ 8:30ರವರೆಗೆ ಕೇವಲ ಜಿಲ್ಲೆಯಲ್ಲಿ ಸರಾಸರಿ 27 ಮಿ.ಮೀ ಮಳೆಯಾಗಿದೆ. ಜೂನ್‌ 8ರಂದು ಜಿಲ್ಲೆಯಲ್ಲಿ 114 ಮಿ.ಮೀ ಮಳೆಯಾಗಿತ್ತು.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ತಾಲೂಕುಗಳಲ್ಲಿ ತಗ್ಗಿದ ಮಳೆ

ಶಿವಮೊಗ್ಗ ತಾಲೂಕಿನಲ್ಲಿ 6.7 ಮಿ.ಮೀ, ಭದ್ರಾವತಿ ತಾಲೂಕಿನಲ್ಲಿ 3 ಮಿ.ಮೀ, ತೀರ್ಥಹಳ್ಳಿಯಲ್ಲಿ 5.7 ಮಿ.ಮೀ, ಹೊಸನಗರ ತಾಲೂಕಿನಲ್ಲಿ 6.6 ಮಿ.ಮೀ, ಸಾಗರ ತಾಲೂಕಿನಲ್ಲಿ 4 ಮಿ.ಮೀ, ಸೊರಬ 0.5 ಮಿ.ಮೀ ಹಾಗೂ ಶಿಕಾರಿಪುರ ತಾಲೂಕುಗಳಲ್ಲಿ ತಲಾ 0.5 ಮಿ.ಮೀ ಮಳೆಯಾಗಿದೆ.

People-hold-and-walks-in-Rain-at-Shimoga

ಯಾವ್ಯಾವ ಹೋಬಳಿಯಲ್ಲಿ ಎಷ್ಟಾಗಿದೆ ಮಳೆ?

ಶಿವಮೊಗ್ಗ ತಾಲೂಕು: ಶಿವಮೊಗ್ಗ-2 ಹೋಬಳಿಯಲ್ಲಿ 5.3 ಮಿ.ಮೀ, ಶಿವಮೊಗ್ಗ-1 ರಲ್ಲಿ 9.3 ಮಿ.ಮೀ, ಹಾರನಹಳ್ಳಿಯಲ್ಲಿ 1.8 ಮಿ.ಮೀ, ಹೊಳಲೂರು-1 ರಲ್ಲಿ 2.9 ಮಿ.ಮೀ, ಹೊಳಲೂರು-2 ರಲ್ಲಿ 6.9 ಮಿ.ಮೀ, ಕುಂಸಿ ಹೋಬಳಿಯಲ್ಲಿ 3.2 ಮಿ.ಮೀ, ನಿಧಿಗೆ-1 ರಲ್ಲಿ 12.7 ಮಿ.ಮೀ, ನಿಧಿಗೆ-2 ರಲ್ಲಿ 13 ಮಿ.ಮೀ ಹಾಗೂ ಆಯನೂರು ಹೋಬಳಿಯಲ್ಲಿ 4.6 ಮಿ.ಮೀ ಮಳೆಯಾಗಿದೆ.

Shivamogga Live Promotion

ಭದ್ರಾವತಿ ತಾಲೂಕು: ಭದ್ರಾವತಿ-1 ರಲ್ಲಿ 2.5 ಮಿ.ಮೀ, ಭದ್ರಾವತಿ-2 ರಲ್ಲಿ 2.4 ಮಿ.ಮೀ, ಹೊಳೆಹೊನ್ನೂರು-1 ರಲ್ಲಿ 6.5 ಮಿ.ಮೀ, ಹೊಳೆಹೊನ್ನೂರು-3 ರಲ್ಲಿ 3.7 ಮಿ.ಮೀ, ಹೊಳೆಹೊನ್ನೂರು-2 ರಲ್ಲಿ 2.6 ಮಿ.ಮೀ ಹಾಗೂ ಕೂಡ್ಲಿಗೆರೆ ಹೋಬಳಿಯಲ್ಲಿ 2.6 ಮಿ.ಮೀ ನಷ್ಟು ಮಳೆ ದಾಖಲಾಗಿದೆ.

ತೀರ್ಥಹಳ್ಳಿ ತಾಲೂಕು: ತೀರ್ಥಹಳ್ಳಿ ಹೋಬಳಿಯಲ್ಲಿ 6.4 ಮಿ.ಮೀ, ಆಗ್ರಹಾರದಲ್ಲಿ 2.2 ಮಿ.ಮೀ, ಆಗುಂಬೆ ಭಾಗದಲ್ಲಿ 10.5 ಮಿ.ಮೀ, ಮಂಡಗದ್ದೆಯಲ್ಲಿ 3.5 ಮಿ.ಮೀ ಹಾಗೂ ಮತ್ತೂರು ಹೋಬಳಿಯಲ್ಲಿ 5.7 ಮಿ.ಮೀ ಮಳೆಯಾಗಿದೆ.

ಹೊಸನಗರ ತಾಲೂಕು: ಹೊಸನಗರ ಕಸಬಾ ಹೋಬಳಿಯಲ್ಲಿ 1.7 ಮಿ.ಮೀ, ಹುಂಚಾ ಹೋಬಳಿಯಲ್ಲಿ 4.1 ಮಿ.ಮೀ, ಕೆರೆಹಳ್ಳಿಯಲ್ಲಿ 5 ಮಿ.ಮೀ ಹಾಗೂ ನಗರ ಹೋಬಳಿಯಲ್ಲಿ 12 ಮಿ.ಮೀ ನಷ್ಟು ಸಾಧಾರಣ ಮಳೆ ಬಿದ್ದಿದೆ.

ಸಾಗರ ತಾಲೂಕು: ಸಾಗರ ಕಸಬಾದಲ್ಲಿ 0.9 ಮಿ.ಮೀ, ಆನಂದಪುರದಲ್ಲಿ 4.7 ಮಿ.ಮೀ, ಭಾರಂಗಿಯಲ್ಲಿ 5.3 ಮಿ.ಮೀ, ಆವಿನಹಳ್ಳಿಯಲ್ಲಿ 4.7 ಮಿ.ಮೀ, ಕರೂರು ಹೋಬಳಿಯಲ್ಲಿ 4.2 ಮಿ.ಮೀ ಹಾಗೂ ತಾಳಗುಪ್ಪ ಹೋಬಳಿಯಲ್ಲಿ 3 ಮಿ.ಮೀ ಮಳೆಯಾಗಿದೆ.

ಶಿಕಾರಿಪುರ ತಾಲೂಕು: ಶಿಕಾರಿಪುರ ಕಸಬಾದಲ್ಲಿ 0.4 ಮಿ.ಮೀ, ಅಂಜನಾಪುರದಲ್ಲಿ 0.9 ಮಿ.ಮೀ, ಹೊಸೂರಿನಲ್ಲಿ 0.6 ಮಿ.ಮೀ, ಉಡುಗಣಿಯಲ್ಲಿ 0.1 ಮಿ.ಮೀ ಹಾಗೂ ತಾಳಗುಂದ ಹೋಬಳಿಯಲ್ಲಿ 0.4 ಮಿ.ಮೀ ನಷ್ಟು ಅತ್ಯಲ್ಪ ಮಳೆ ದಾಖಲಾಗಿದೆ.

ಸೊರಬ ತಾಲೂಕು: ಸೊರಬ ಕಸಬಾದಲ್ಲಿ 0.7 ಮಿ.ಮೀ, ಆನವಟ್ಟಿಯಲ್ಲಿ 0.3 ಮಿ.ಮೀ, ಚಂದ್ರಗುತ್ತಿಯಲ್ಲಿ 1 ಮಿ.ಮೀ, ಜಡೆ ಹೋಬಳಿಯಲ್ಲಿ 0.1 ಮಿ.ಮೀ, ಕುಪ್ಪಗಡ್ಡೆಯಲ್ಲಿ 0.5 ಮಿ.ಮೀ ಹಾಗೂ ಉಳವಿ ಹೋಬಳಿಯಲ್ಲಿ 0.1 ಮಿ.ಮೀ ಮಳೆಯಾಗಿದೆ.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.