ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 3 ಏಪ್ರಿಲ್ 2022
ಯುಗಾದಿ ಹಬ್ಬದ ಮರುದಿನ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಚಂದ್ರ ದರ್ಶನವಾಗಿದೆ. ಜನ ಚಂದ್ರನನ್ನು ಕಣ್ತುಂಬಿಕೊಂಡು, ಪೂಜೆ ಸಲ್ಲಿಸಿದ್ದಾರೆ. ಇತ್ತ ಶಿವಮೊಗ್ಗ ನಗರದಲ್ಲಿ ಜನರ ಪಾಲಿಗೆ ಇವತ್ತೂ ನಿರಾಸೆಯಾಗಿದೆ.
ಯುಗಾದಿ ಹಬ್ಬದ ಸಂಜೆ ಚಂದ್ರ ದರ್ಶನ ಮಾಡಿ, ಹಿರಿಯರ ಆಶೀರ್ವಾದ ಪಡೆಯಬೇಕು ಎಂಬ ಸಂಪ್ರದಾಯವಿದೆ. ಶುಭಕೃತ್ ಸಂವತ್ಸರದ ಮೊದಲ ದಿನ ಮಲೆನಾಡಿನಾದ್ಯಂತ ವರ್ಷಧಾರೆ ಆರಂಭವಾಗಿತ್ತು. ಹಾಗಾಗಿ ಚಂದ್ರ ದರ್ಶನವಾಗಿರಲಿಲ್ಲ.
ಎರಡನೆ ದಿನ ಕಂಡ ಚಂದಿರ
ಇವತ್ತು ಜಿಲ್ಲೆಯಾದ್ಯಂತ ಚಂದ್ರ ದರ್ಶನವಾಗಿದೆ. ಸಂಜೆಯಾಗುತ್ತಲೆ ಜನರು ಆಗಸದೆಡೆಗೆ ಮುಖ ಮಾಡಿ ನಿಂತಿದ್ದರು. ರಸ್ತೆಗಳು, ಕ್ರೀಡಾಂಗಣ, ಬಯಲು ಪ್ರದೇಶ, ಮನೆಯ ಟೆರೇಸ್ ಮೇಲೆ ನಿಂತು ಚಂದ್ರ ದರ್ಶನ ಪಡೆದರು. ಚಂದಿರನನ್ನು ಕಣ್ತುಂಬಿಕೊಳ್ಳುತ್ತಿದ್ದ ಹಾಗೆ ಜನರು ಪೂಜೆ ಸಲ್ಲಿಸಿದರು.
ಶಿವಮೊಗ್ಗ ನಗರದವರಿಗೆ ನಿರಾಸೆ
ಇತ್ತ ಶಿವಮೊಗ್ಗ ನಗರದಲ್ಲಿ ಇವತ್ತು ಮೋಡ ಕವಿದ ವಾತಾವರಣವಿದೆ. ಮೋಡದ ಮರೆಯಲ್ಲಿ ಚಂದ್ರ ಕಣ್ಮರೆಯಾಗಿದ್ದು, ಜನ ನಿರಾಸೆ ಪಡುವಂತಾಯಿತು.
PHOTO : PRASANNA BHAT
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – shivamoggalive@gmail.com
WhatsApp Number – 7411700200
LATEST NEWS
- ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

- ಬ್ಯಾಂಕ್ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

- ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

- ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್, ಯಾಕೆ?

- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್ 2026 – ಅಡಿಕೆ ಧಾರಣೆ

About The Editor
ನಿತಿನ್ ಆರ್.ಕೈದೊಟ್ಲು
















