SHIVAMOGGA LIVE NEWS | 16 AUGUST 2023
SHIMOGA : ಡ್ರ್ಯಾಗರ್ನಿಂದ ಯುವಕನ ಹೊಟ್ಟೆ, ಕೈಗೆ ಚುಚ್ಚಿ ಗಾಯಗೊಳಿಸಿ ಗಲಾಟೆ ಮಾಡುತ್ತಿದ್ದಾಗ ರಾತ್ರಿ ಗಸ್ತು (Night Beat) ಪೊಲೀಸರು ದಾಳಿ ನಡೆಸಿ ಯುವಕರನ್ನು ವಶಕ್ಕೆ ಪಡೆದಿದ್ದಾರೆ. ವಿನೋಬನಗರ (Vinobanagara) ಎಪಿಎಂಸಿ ತರಕಾರಿ ಮಂಡಿ ಬಳಿ ಘಟನೆ ಸಂಭವಿಸಿದೆ.
ಕಾಶಿಪುರದ ಲೋಕೇಶ್ ಎಂಬಾತನನ್ನು ಸುತ್ತುವರಿದಿದ್ದ ಯುವಕರ ಗುಂಪು ಆತನ ಹೊಟ್ಟೆ ಮತು ಬಲಗೈಗೆ ಡ್ರ್ಯಾಗರ್ನಿಂದ ಚುಚ್ಚಿ ಗಾಯಗೊಳಿಸಿತ್ತು. ಮಧ್ಯರಾತ್ರಿ 1.30ರ ಹೊತ್ತಿಗೆ ರಾತ್ರಿ ಗಸ್ತು ತಿರುಗುತ್ತಿದ್ದ ವಿನೋಬನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಯುವಕರನ್ನು ವಶಕ್ಕೆ ಪಡೆದಿದ್ದಾರೆ. 11 ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ- ಆಯನೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ MLA ದಿಢೀರ್ ಭೇಟಿ, ಗ್ರಾಮಸ್ಥರಿಂದ ಸಮಸ್ಯೆಗಳ ಪಟ್ಟಿ
ಯುವಕರ ಬಳಿ ಇದ್ದ 13 ಇಂಚಿನ ಡ್ರ್ಯಾಗರ್, ಒಂದು ಪಲ್ಸರ್ ಎನ್ಎಸ್ 200 ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ. ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.