SHIVAMOGGA LIVE NEWS | 17 OCTOBER 2023
SHIMOGA : ವಾಟ್ಸಪ್ ಸ್ಟೇಟಸ್ನಲ್ಲಿ (Status) ಪ್ರಚೋದನಕಾರಿ ವಿಡಿಯೋ ಅಪ್ಲೋಡ್ ಮಾಡಿದ್ದ ಆರೋಪ ಸಂಬಂಧ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಹಿಂದೂ ಹರ್ಷನ ಹತ್ಯೆ ಸಂದರ್ಭದ ವಿಡಿಯೋ ಉರ್ದು ಭಾಷೆಯಲಿದ್ದು ಪ್ರಚೋದನಕಾರಿಯಾಗಿದೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ. ದೊಡ್ಡಪೇಟೆ ಠಾಣೆಯಲ್ಲಿ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಈ ವಿಡಿಯೋವನ್ನು ಪರಿಶೀಲಿಸಿ ದೂರು ದಾಖಲಿಸಿಕೊಂಡಿದೆ. ಯುವಕನ ವಿರುದ್ಧ ತನಿಖೆ ನಡೆಸಲಾಗುತ್ತಿದೆ.