ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಮೇ 2020
ಕೇಂದ್ರ ಸರ್ಕಾರ ಘೋಷಣೆ ಮಾಡಿರುವ 20 ಲಕ್ಷ ಕೋಟಿ ಹಣದ ಪ್ಯಾಕೇಜ್ ಒಂದು ವಾರದ ಟಿವಿ ಮೆಗಾ ಧಾರಾವಾಹಿಯಂತಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಲೇವಡಿ ಮಾಡಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕರೋನಾ ಸಂಕಷ್ಟದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಘೋಷಿಸಿರುವ ಈ 20 ಲಕ್ಷ ಕೋಟಿ ಪ್ಯಾಕೇಜ್, ಕೇವಲ ಪುಸ್ತಕದ ಬದನೆಕಾಯಿಯಂತೆ ಕಾಣುತ್ತಿದೆ ಎಂದು ವ್ಯಂಗ್ಯವಾಡಿದರು.
2 ತಿಂಗಳ ಕಾಲ ಲಾಕ್‌ಡೌನ್‌ನಿಂದಾಗಿ ದೇಶದ ಎಲ್ಲಾ ವರ್ಗದ ಜನರಿಗು ಕೇಂದ್ರದ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಆದರೆ ಕೇಂದ್ರದ ಪ್ಯಾಕೇಜ್‌ನಿಂದ ಎಲ್ಲಾ ಕ್ಷೇತ್ರದವರಿಗೂ ನಿರಾಸೆ ಆಗಿದೆ. ಜಿಡಿಪಿಯ ಕೇವಲ 1% ಮಾತ್ರ ಕೇಂದ್ರ ಸರ್ಕಾರ ವಿನಿಯೋಗ ಮಾಡುತ್ತಿದೆ. ಈ ಪ್ಯಾಕೇಜ್ ಗಿಮಿಕ್ ಎಂದು ಟೀಕಿಸಿದರು.
ಎಲ್ಲಾ ಉದ್ಯಮಿಗಳು ಸಾಲದಲ್ಲಿದ್ದಾರೆ. ಮತ್ತೆ ಸಾಲ ಮಾಡಲು ಕೇಂದ್ರ ಸರ್ಕಾರ ಉತ್ತೇಜಿಸುವುದು ಸರಿಯಲ್ಲ. ಕೇಂದ್ರದ ತೀರ್ಮಾನಗಳು ಬೋಗಸ್ ಅನಿಸುತ್ತಿದೆ. 2 ವರ್ಷಗಳ ಕಾಲ ಜಿಎಸ್‌ಟಿ ಸಂಗ್ರಹ ಮಾಡಬಾರದು. ಇಲ್ಲದಿದ್ದರೆ ವರ್ಕಿಂಗ್ ಕ್ಯಾಪಿಟಲ್, ಕಾರ್ಮಿಕರು ಇಲ್ಲದೇ ಉದ್ಯಮಗಳು ಪುನಾರಂಭಗೊಳ್ಳುವುದು ಸಾಧ್ಯವಾಗುವುದಿಲ್ಲ ಎಂದರು.
ರೈತರಿಗೆ 1 ಲಕ್ಷ ಕೋಟಿ ಹಣ ನಿಗದಿಪಡಿಸಿರುವುದು ಕಾಗದದಲ್ಲಿ ಮಾತ್ರ ಕಾಣಿಸಲಾಗಿದೆ. ಕೃಷಿ ಇಲಾಖೆ ಚಟುವಟಿಕೆಗೆ ಸಹಕರಿಸಬೇಕಾದ ಕೇಂದ್ರದ ಬಿಜೆಪಿ ಸರ್ಕಾರ ನೇರವಾಗಿ ಸಹಾಯ ಮಾಡಬೇಕಿತ್ತು. ಕೃಷಿಕರಿಗೆ ಯಾವುದೇ ಹೊಸ ಯೋಜನೆಗಳು ಇಲ್ಲ. ಬೆಳೆದ ಬೆಳೆಗೆ ಮಾರುಕಟ್ಟೆ ಸಿಗುತ್ತಿಲ್ಲ. ಪ್ಯಾಕೇಜ್ ಮೂಲಕ ಮೊದಲು ರೈತರ ಸಾಲ ಮನ್ನಾ ಮಾಡಬೇಕು. 2 ವರ್ಷ ಅವರು ಚೇತರಿಸಿಕೊಳ್ಳಲು ಬೀಜ ಮತ್ತು ಗೊಬ್ಬರ ಉಚಿತವಾಗಿ ನೀಡಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ರಾಮೇಗೌಡ, ನಾಗರಾಜ್‌ಗೌಡ, ಚಂದ್ರಶೇಖರ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]