₹1,400 ಇದ್ದ ಶುಲ್ಕ ಈಗ ₹28,000, ಶಿವಮೊಗ್ಗ ಲಾರಿ ಮಾಲೀಕರ ಆಕ್ರೋಶ, ಕಾರಣವೇನು?

ಶಿವಮೊಗ್ಗ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾರಿಗಳ ಎಫ್‌ಸಿ (FC) ಮತ್ತು ಆರ್‌ಆರ್‌ಸಿ (RRC) ಶುಲ್ಕವನ್ನು ದಿಢೀರ್ ಆಗಿ ಹೆಚ್ಚಿಸಿರುವುದನ್ನು ಖಂಡಿಸಿ, ಶಿವಮೊಗ್ಗ ಜಿಲ್ಲಾ ಲಾರಿ ಮಾಲೀಕರ (Lorry Owners) ಸಂಘವು ಇಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು.

ಲಾರಿ ಮಾಲೀಕರ ಆಗ್ರಹಗಳೇನು? ಇಲ್ಲಿದೆ ಪಾಯಿಂಟ್ಸ್‌

ಶುಲ್ಕದ ಹೊರೆ: ಈ ಹಿಂದೆ ಕೇವಲ ₹1,400ಇದ್ದ ಎಫ್‌ಸಿ ಮತ್ತು ಆರ್‌ಆರ್‌ಸಿ ಶುಲ್ಕವನ್ನು ಈಗ ಅತಿಹೆಚ್ಚು ಅಂದರೆ ₹28,000 ಗಳಿಗೆ ಏರಿಸಲಾಗಿದೆ. ಇದು ಮಾಲೀಕರಿಗೆ ಭರಿಸಲಾಗದ ಹೊರೆಯಾಗಿದೆ.

Truck-Owners-sumbmit-memorandum-to-ADC-Abhishek-in-shimoga

ಆರ್ಥಿಕ ಸಂಕಷ್ಟ: ಈಗಾಗಲೇ ರಸ್ತೆ ತೆರಿಗೆ, ಇನ್ಶೂರೆನ್ಸ್, ಪರ್ಮಿಟ್ ಮತ್ತು ಟೋಲ್ ಪಾವತಿಗಳ ಜೊತೆಗೆ ವಾಹನ ನಿರ್ವಹಣಾ ವೆಚ್ಚವೂ ಹೆಚ್ಚಾಗಿದೆ. ಈ ನಡುವೆ ಶುಲ್ಕದ ಏರಿಕೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.

ಸ್ಥಗಿತಗೊಂಡ ಲಾರಿಗಳು: ಈ ಆರ್ಥಿಕ ಸಂಕಷ್ಟದಿಂದ ಜಿಲ್ಲೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಲಾರಿಗಳ ಸಂಚಾರವನ್ನು ಸ್ಥಗಿತಗೊಳಿಸಿ ನಿಲ್ಲಿಸಲಾಗಿದೆ. ಇದು ಸ್ವಂತ ಲಾರಿ ಹೊಂದಿರುವ ಚಾಲಕರಿಗೂ ಸಂಕಷ್ಟ ತಂದೊಡ್ಡಿದೆ.

ಇದನ್ನೂ ಓದಿ – ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್‌ನಲ್ಲಿ ಲಕ್ಷ ಲಕ್ಷದ ಚಿನ್ನಾಭರಣ ಬಿಟ್ಟು ಇಳಿದ ಮಹಿಳೆ

ಟೋಲ್ ತೆರವಿಗೆ ಆಗ್ರಹ: ಇತರೆ ರಾಜ್ಯಗಳಲ್ಲಿ ಕಾಲಾವಧಿ ಮುಗಿದ ಟೋಲ್ ಪ್ಲಾಜಾಗಳನ್ನು ತೆಗೆದು ಹಾಕಿರುವಂತೆ, ಕರ್ನಾಟಕದಲ್ಲೂ ಅಂತಹ ಟೋಲ್ ಕೇಂದ್ರಗಳನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಆಗ್ರಹಿಸಲಾಗಿದೆ. ಮನವಿ ಸಲ್ಲಿಸುವ ಸಂದರ್ಭ ಸಂಘದ ಗೌರವಾಧ್ಯಕ್ಷ ಎಸ್.ಎಸ್. ಜ್ಯೋತಿ ಪ್ರಕಾಶ್, ಅಧ್ಯಕ್ಷ ಕೆ.ಎನ್. ಭೋಜರಾಜ್, ಕಾರ್ಯಾಧ್ಯಕ್ಷ ವೈ.ಹೆಚ್.ನಾಗರಾಜ್ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Sunrise Facility Services, Sri sai Trust Shimoga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : March 16, 2026 at 11:00 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಮಾರ್ಚ್ 16, 2026

Leave a Comment