SHIVAMOGGA LIVE NEWS | 26 APRIL 2023
ELECTION NEWS : ಶಿವಮೊಗ್ಗ ವಿಧಾನಸಭೆ ಚುನಾವಣಾ ಕಣ ದಿನಕ್ಕೊಂದು ಅಚ್ಚರಿಯ ತಿರುವು ಪಡೆಯುತ್ತಿದೆ. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಚುನಾವಣಾ ರಾಜಕೀಯ ನಿವೃತ್ತಿ, ಆಯನೂರು ಮಂಜುನಾಥ್ ಮತ್ತು ಕೆ.ಬಿ.ಪ್ರಸನ್ನ ಕುಮಾರ್ ಅವರು ಜೆಡಿಎಸ್ ಸೇರ್ಪಡೆಯಾಗಿರುವುದು, ಇಬ್ಬರು ಪಾಲಿಕೆ ಸದಸ್ಯರು ಪ್ರಮುಖ ಪಕ್ಷಗಳ ಹುರಿಯಾಳುಗಳಾಗಿರುವುದು ಅಖಾಡವನ್ನು ರಂಗೇರಿಸಿದೆ.
ಹಿಂದುತ್ವದ ಪ್ರಯೋಗ ಶಾಲೆ
ಶಿವಮೊಗ್ಗ ಕ್ಷೇತ್ರ ಹಿಂದುತ್ವದ ಪ್ರಯೋಗ ಶಾಲೆ ಎಂದನಿಸಿಕೊಂಡಿತ್ತು. ಬಿಜೆಪಿ ಕ್ಲೀನ್ ಸ್ವೀಪ್ ಮಾಡಬಹುದಾಗಿದ್ದ ಕ್ಷೇತ್ರ ಎಂದು ವಿಶ್ಲೇಷಿಸಲಾಗುತ್ತಿತ್ತು. ಆದರೆ ಈ ಬಾರಿ ಚುನಾವಣೆ (ELECTION) ಹಿಂದಿನಂತಿಲ್ಲ. ಒನ್ ಸೈಡ್ ಆಗಬಹುದಾಗಿದ್ದ ಕ್ಷೇತ್ರದಲ್ಲಿ ಈಗ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಗೆಲುವು, ಸೋಲುಗಳ ಅಂತರ ತೀರ ಕಡಿಮೆ ಇರಲಿದೆ ಎಂದು ಹೇಳಲಾಗುತ್ತಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ತ್ರಿಕೋನ ಸ್ಪರ್ಧಾ ಕಣ
ಕೆ.ಎಸ್.ಈಶ್ವರಪ್ಪ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಅವರ ಬೆಂಬಲಿಗ, ಮಹಾನಗರ ಪಾಲಿಕೆ ಸದಸ್ಯ ಎಸ್.ಎನ್.ಚನ್ನಬಸಪ್ಪ ಅವರು ಬಿಜೆಪಿ ಅಭ್ಯರ್ಥಿ. ರಾಜಕೀಯದ ಜೊತೆಗೆ ಹಿಂದೂ ಸಂಘಟನೆಗಳ ಹೋರಾಟಗಳಲ್ಲಿ ಸಕ್ರಿಯವಾಗಿದ್ದರು. ಇದೆ ಕಾರಣಕ್ಕೆ ಅವರು ಗೆಲುವು ಸುಲಭ ಎಂಬುದು ಬಿಜೆಪಿ ಲೆಕ್ಕಾಚಾರ.
ಕಾಂಗ್ರೆಸ್ ಪಕ್ಷವು ಯುವ ನಾಯಕ, ಪಾಲಿಕೆ ಸದಸ್ಯ ಹೆಚ್.ಸಿ.ಯೋಗೇಶ್ ಅವರನ್ನು ಅಖಾಡಕ್ಕಿಳಿಸಿದೆ. ಹೊಸ ಮುಖ, ಪಾಲಿಕೆಯ ಕ್ರಿಯಾಶೀಲ ಸದಸ್ಯ. ಯುವಕರನ್ನು ಸೆಳೆಯುವ ಶಕ್ತಿ ಇದೆ. ಹಾಗಾಗಿ ಅವರು ಗೆಲುವು ಸಾಧಿಸಬಹುದು ಎಂಬುದು ಕಾಂಗ್ರೆಸ್ ಲೆಕ್ಕಾಚಾರ.
ಬಿಜೆಪಿ ತೊರೆದಿರುವ ಆಯನೂರು ಮಂಜುನಾಥ್ ಅವರು ಜೆಡಿಎಸ್ ಪಕ್ಷದ ಅಭ್ಯರ್ಥಿ. ಇದರಿಂದ ಪಕ್ಷಕ್ಕೆ ಹೊಸ ಹರುಪು ಬಂದಿದೆ. ಕಾಂಗ್ರೆಸ್ ತೊರೆದ ಕೆ.ಬಿ.ಪ್ರಸನ್ನ ಕುಮಾರ್ ಅವರು ಜೆಡಿಎಸ್ ಸದಸ್ಯರಾಗಿದ್ದಾರೆ. ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಅವರು ಸ್ವಂತ ಮತ ಬ್ಯಾಂಕ್ ಹೊಂದಿದ್ದಾರೆ. ಮೂವರು ಒಗ್ಗೂಡಿರುವುದರಿಂದ ಈ ಬಾರಿ ಗೆಲ್ಲಬಹುದು ಎಂಬ ಲೆಕ್ಕಾಚಾರವಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಪ್ರಚಾರಕ್ಕೆ ತೆರಳಿದ್ದ ಗೃಹ ಸಚಿವರಿಗೆ ಘೆರಾವ್, ತಾಂಡಾ ನಿವಾಸಿಗಳಿಂದ ಘೋಷಣೆ
ಮೂರು ಪ್ರಮುಖ ಪಕ್ಷಗಳು ಲಿಂಗಾಯತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಹಾಗಾಗಿ ಈ ಬಾರಿ ಲಿಂಗಾಯತ ಸಮುದಾಯದ ಮತಗಳು ಯಾರ ಪಾಲಿಗೆ ವರವಾಗಲಿದೆ ಎಂಬ ಕುತೂಹಲವು ಇದೆ.