ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 11 APRIL 2024
ELECTION NEWS : ಲೋಕಸಭೆ ಚುನಾವಣೆಯ ಸ್ವತಂತ್ರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರು ಚುನಾವಣಾ ಆಯೋಗಕ್ಕೆ ತಮ್ಮ ಆಸ್ತಿ ವಿವರ ಸಲ್ಲಿಸಿದ್ದಾರೆ. ಈಶ್ವರಪ್ಪ ಮತ್ತು ಅವರ ಪತ್ನಿ ಜಯಲಕ್ಷ್ಮಿ ಅವರ ಹೆಸರಿನಲ್ಲಿರುವ ಆಸ್ತಿ, ನಗದು, ಚಿನ್ನಾಭರಣದ ವಿವರ ಸಲ್ಲಿಸಿದ್ದಾರೆ.
ಈಶ್ವರಪ್ಪ ಅವರು ತಮ್ಮ ಪತ್ನಿಗೆ ಸಾಲ ನೀಡಿದಾರೆ. ಇಬ್ಬರ ಬಳಿಯು ಒಂದೇ ಒಂದು ವಾಹನವಿಲ್ಲ. ಇನ್ನು, ಬಿ.ಕಾಂ. ಪದವೀಧರ ಈಶ್ವರಪ್ಪ ಅವರ ವಿರುದ್ಧ ಒಂದೇ ಒಂದು ಪ್ರಕರಣವಿಲ್ಲ ಎಂದು ಅಫಿಡವಿಟ್ನಲ್ಲಿ ತಿಳಿಸಿದ್ದಾರೆ.
ಈಶ್ವರಪ್ಪ ಎಲ್ಲೆಲ್ಲಿ ಎಷ್ಟು ಅಸ್ತಿ ಸಂಪಾದಿಸಿದ್ದಾರೆ?
ಈಶ್ವರಪ್ಪ ಬಳಿ ಇರುವ ನಗದು ಎಷ್ಟು?
ಈಶ್ವರಪ್ಪ ಬಳಿ 25 ಲಕ್ಷ ರೂ. ನಗದು ಇದೆ. ಪತ್ನಿ ಬಳಿ 2 ಲಕ್ಷ ರೂ. ಇದೆ. ಕೆಎಸ್ಸಿಎ ಬ್ಯಾಂಕ್ನ ಶಾಸಕರ ಭವನ ಶಾಖೆಯಲ್ಲಿ ಈಶ್ವರಪ್ಪ ಹೆಸರಿನಲ್ಲಿ ಎರಡು ಖಾತೆಗಳಿವೆ. ಒಂದರಲ್ಲಿ 1.38 ಲಕ್ಷ ರೂ. ನಗದು, ಮತ್ತೊಂದು ಖಾತೆಯಲ್ಲಿ 1,699 ರೂ. ನಗದು ಇದೆ. ಬ್ಯಾಂಕ್ ಆಫ್ ಬರೋಡಾದ ಶಿವಮೊಗ್ಗ ಶಾಖೆಯಲ್ಲಿ ಎರಡು ಖಾತೆ ಇದೆ. ಒಂದರಲ್ಲಿ 5.45 ಲಕ್ಷ ರೂ., ಮತ್ತೊಂದರಲ್ಲಿ 1 ಲಕ್ಷ ರೂ. ನಗದು ಇದೆ. ಪತ್ನಿ ಜಯಲಕ್ಷ್ಮಿ ಅವರ ಹೆಸರಿನಲ್ಲಿ ಬ್ಯಾಂಕ್ ಆಫ್ ಬರೋಡದಲ್ಲಿ ಖಾತೆ ಇದ್ದು, 77 ಸಾವಿರ ರೂ. ನಗದು ಇದೆ.
ವಿವಿಧ ಸಂಸ್ಥೆಗಳಲ್ಲಿ ಈಶ್ವರಪ್ಪ ಹೂಡಿಕೆ
ಈಶ್ವರಪ್ಪ ಬೆಂಗಳೂರಿನ ವಿಶ್ವ ವಿನಾಯಕ ಬಿಲ್ಡ್ ಟೆಕ್ನಲ್ಲಿ 9 ಲಕ್ಷ ರೂ., ಪ್ರೊಫೆಷನಲ್ ಗ್ಲೋಬಲ್ ಇನ್ಫ್ರಾನಲ್ಲಿ 40 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಪಾಲುದಾರಿಕೆ ಸಂಸ್ಥೆ ಮೈಸೂರಿನ ವರ್ಸೋಕೆಮ್ನಲ್ಲಿ 1.50 ಲಕ್ಷ ರೂ. ಶಿವಮೊಗ್ಗದ ಉಡುಪು ಫ್ಯಾಷನ್ಸ್ನಲ್ಲಿ 20 ಲಕ್ಷ ರೂ., ಶ್ರೀ ಮಾರಿಕಾಂಬ ಮೈಕ್ರೋ ಫೈನಾನ್ಸ್ನಲ್ಲಿ 15 ಲಕ್ಷ ರೂ., ಮಾರಿಕಾಂಬ ಸೌಹಾರ್ದ ಸಹಕಾರಿಯಲ್ಲಿ 50 ಸಾವಿರ ರೂ., ಬೆಂಗಳೂರಿನ ರೆಟ್ರಾ ಲೈಫ್ ಸೈನ್ಸಸ್ನಲ್ಲಿ 9 ಲಕ್ಷ ರೂ., ಮೆಟ್ರೋ ಹೆಲ್ತ್ ಕೇರ್ನಲ್ಲಿ 55 ಲಕ್ಷ ರೂ., ಆರ್3ಎಸ್ ಬಿಸ್ನೆಸ್ ಪಾರ್ಕ್ನಲ್ಲಿ 10 ಲಕ್ಷ ರೂ., ಸತ್ಯಧರ್ಮ ಪ್ರಕಾಶನದಲ್ಲಿ 1.25 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ.
ಪತ್ನಿ ಜಯಲಕ್ಷ್ಮಿ ಅವರು ಪಾಲುದಾರರಾಗಿರುವ ಜಾಮ್ ಪೈಪ್ಸ್ನಲ್ಲಿ 44.42 ಲಕ್ಷ ರೂ., ಶ್ವೇತಾ ಎಂಟರ್ಪ್ರೈಸೆಸ್ನಲ್ಲಿ 1.12 ಲಕ್ಷ ರೂ., ಚೈತ್ರಾ ಎಂಟರ್ಪ್ರೈಸೆಸ್ನಲ್ಲಿ 62.57 ಲಕ್ಷ ರೂ., ಭುಮಿಕಾ ಲಾಜಿಸ್ಟಿಕ್ಸ್ನಲ್ಲಿ 44.91 ಲಕ್ಷ ರೂ., ಪುಷ್ಪಕ್ ಎಂಟರ್ಪ್ರೈಸೆಸ್ನಲ್ಲಿ 2.59 ಲಕ್ಷ ರೂ., ಆದಿತ್ಯ ಟ್ರಾನ್ಸ್ಪೋರ್ಟ್ನಲ್ಲಿ 4.53 ಲಕ್ಷ ರೂ., ಉಡುಪು ಫ್ಯಾಷನ್ಸ್ನಲ್ಲಿ 20 ಲಕ್ಷ ರೂ., ರೆಟ್ರಾ ಲೈಫ್ ಸೈನ್ಸಸ್ನಲ್ಲಿ 14 ಲಕ್ಷ ರೂ., ಮಾರಿಕಾಂಬ ಮೈಕ್ರೋ ಫೈನಾನ್ಸ್ನಲ್ಲಿ 4 ಲಕ್ಷ ರೂ., ಬೆಂಗಳೂರಿನ ಭಾರತ್ ಇಂಡಸ್ಟ್ರೀಸ್ನಲ್ಲಿ 80.15 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ.
ಹೆಂಡತಿಗೆ 15 ಲಕ್ಷ ರೂ. ಸಾಲ
ಈಶ್ವರಪ್ಪ ಅವರು ವಿವಿಧ ಸಂಸ್ಥೆಗಳಿಗೆ ಸಾಲ ನೀಡಿದ್ದಾರೆ. ಬೆಂಗಳೂರಿನ ಭಾರತ್ ಇಂಡಸ್ಟ್ರೀಸ್ಗೆ 65.15 ಲಕ್ಷ ರೂ., ಜಯಲಕ್ಷ್ಮಿ ಫ್ಯೂಯಲ್ಸ್ಗೆ 16.50 ಲಕ್ಷ ರೂ., ಮಲ್ಲೇಶ್ವರ ಎಂಟರ್ಪ್ರೈಸೆಸ್ನಲ್ಲಿ 1.84 ಲಕ್ಷ ರೂ., ಪತ್ನಿ ಜಯಲಕ್ಷ್ಮಿ ಅವರಿಗೆ 15.78 ಲಕ್ಷ ರೂ. ಸಾಲ ನೀಡಿದ್ದಾಗಿ ಅಫಿಡವಿಟ್ನಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು, ಈಶ್ವರಪ್ಪ ಅವರಿಗೆ ಬರಬೇಕಿರುವ ಬಾಡಿಗೆ ಮೊತ್ತ 23.36 ಲಕ್ಷ ರೂ., ವ್ಯಕ್ತಿಗಳಿಂದ ಬರಬೇಕಿರುವುದು 26.89 ಲಕ್ಷ ರೂ., ಪತ್ನಿ ಜಯಲಕ್ಷ್ಮಿ ಅವರಿಗೆ ವ್ಯಕ್ತಿಗಳಿಗೆ 66.25 ಲಕ್ಷ ರೂ., ಬರಬೇಕಿದೆ. ಮತ್ತೊಂದೆಡೆ ಈಶ್ವರಪ್ಪ ಅವರು ಕೋಟಿ ಕೋಟಿ ರೂ. ಸಾಲಗಾರರಾಗಿದ್ದಾರೆ. ಈಶ್ವರಪ್ಪ ಅವರಿಗೆ 5.87 ಕೋಟಿ ರೂ. ಸಾಲವಿದೆ. ಪತ್ನಿ ಜಯಲಕ್ಷ್ಮಿ ಅವರಿಗೆ 70.80 ಲಕ್ಷ ಸಾಲವಿದೆ.
ಪತ್ನಿ ಬಳಿ ಹೆಚ್ಚು ಬಂಗಾರ, ಬೆಳ್ಳಿ
ಈಶ್ವರಪ್ಪ ಬಳಿ 300 ಗ್ರಾಂ ಬಂಗಾರ, 2 ಕೆ.ಜಿ ಬೆಳ್ಳಿ ವಸ್ತುಗಳಿವೆ. ಇದರ ಮೌಲ್ಯ 18.50 ಲಕ್ಷ ರೂ., ಪತ್ನಿ ಜಯಲಕ್ಷ್ಮಿ ಅವರ ಬಳಿ 500 ಗ್ರಾಂ ಚಿನ್ನ, 5 ಕೆ.ಜಿ ಬೆಳ್ಳಿ ವಸ್ತುಗಳಿವೆ. ಇದರ ಮೌಲ್ಯ 30 ಲಕ್ಷ ರೂ.
ಕೃಷಿ, ವಾಣಿಜ್ಯ ಭೂಮಿ ಎಲ್ಲೆಲ್ಲಿದೆ?
ಈಶ್ವರಪ್ಪ ಅವರ ಬಳಿ ಒಟ್ಟು 22.35 ಕೋಟಿ ರೂ. ಮೌಲ್ಯದ ಅಸ್ತಿ ಇದೆ. ಪತ್ನಿ ಜಯಲಕ್ಷ್ಮಿ ಅವರ ಹೆಸರಿನಲ್ಲಿ 3.10 ಕೋಟಿ ರೂ. ಮೌಲ್ಯದ ಆಸ್ತಿ ಇದೆ. ಈಶ್ವರಪ್ಪ ಅವರ ಹೆಸರಿನಲ್ಲಿ ನಿದಿಗೆ ಗ್ರಾಮದಲ್ಲಿ 1.31 ಎಕರೆ, ಊರಗಡೂರಿನಲ್ಲಿ 1.05 ಎಕರೆ, ಸೋಮಯ್ಯ ಲೇಔಟ್ನಲ್ಲಿ ಪತ್ನಿ ಜಯಲಕ್ಷ್ಮಿ ಅವರೊಂದಿಗೆ ಜಂಟಿ ಖಾತೆಯೊಂದಿಗೆ 3880 ಚದರ ಅಡಿ ಕೃಷಿಯೇತರ ಭೂಮಿ ಇದೆ. ಮಾಚೇನಹಳ್ಳಿಯಲ್ಲಿ 4.24 ಎಕರೆ ಕೃಷಿಯೇತರ ಭೂಮಿ ಪುತ್ರ ಕಾಂತೇಶ್ ಜೊತೆ ಜಂಟಿ ಖಾತೆ.
ಬಿ.ಹೆಚ್.ರಸ್ತೆಯಲ್ಲಿ 11,926 ಚದರ ಅಡಿಯಲ್ಲಿ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡ (ಪುತ್ರ ಕಾಂತೇಶ್ ಜೊತೆ ಜಂಟಿ ಖಾತೆ). ಬೆಂಗಳೂರು ಜಯನಗರದ ಸೌತ್ ಎಂಡ್ ಸರ್ಕಲ್ನಲ್ಲಿ 30×40 ಅಡಿಯಲ್ಲಿ ವಾಣಿಜ್ಯ ಕಟ್ಟಡ. ಬೆಂಗಳೂರಿನ ಕುಮಾರ ಪಾರ್ಕ್ನಲ್ಲಿ 5700 ಚದರ ಅಡಿಯಲ್ಲಿ ವಾಣಿಜ್ಯ ಕಟ್ಟಡ. ಶಿವಮೊಗ್ಗದ ಮಲ್ಲೇಶ್ವರ ನಗರದಲ್ಲಿ ಪತ್ನಿ ಜಯಲಕ್ಷ್ಮಿ ಅವರೊಂದಿಗೆ ಜಂಟಿ ಖಾತೆಯೊಂದಿಗೆ 4500 ಚದರ ಅಡಿಯ ವಸತಿ ಕಟ್ಟಡ.
ಚರಾ, ಸ್ಥಿರಾಸ್ತಿಗಳ ಒಟ್ಟು ಮೌಲ್ಯ
ಈಶ್ವರಪ್ಪ ಬಳಿ ಇರುವ ಚರಾಸ್ತಿಯ ಒಟ್ಟು ಮೌಲ್ಯ 4.28 ಕೋಟಿ ರೂ., ಪತ್ನಿ ಜಯಲಕ್ಷ್ಮಿ ಅವರ ಬಳಿ 3.77 ಕೋಟಿ ರೂ. ಇನ್ನು, ಸ್ಥಿರಾಸ್ತಿಗಳ ಪೈಕಿ, ಈಶ್ವರಪ್ಪ ಸ್ವಯಾರ್ಜಿತ ಆಸ್ತಿ ಮೌಲ್ಯ 10.95 ಕೋಟಿ ರೂ., ಪಿತ್ರಾರ್ಜಿತ ಆಸ್ತಿ ಮೌಲ್ಯ 1.60 ಕೋಟಿ ರೂ., ಪತ್ನಿ ಜಯಲಕ್ಷ್ಮಿ ಅವರ ಹೆಸರಿನಲ್ಲಿರುವ ಸ್ವಯಾರ್ಜಿತ ಆಸ್ತಿ ಮೌಲ್ಯ 7.31 ಕೋಟಿ ರೂ., ಪಿತ್ರಾರ್ಜಿತ ಆಸ್ತಿ ಮೌಲ್ಯ 1.60 ಕೋಟಿ ರೂ., ಎಂದು ಅಫಿಡವಿಟ್ನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ನರೇಂದ್ರ ಮೋದಿ, ತದ್ರೂಪಿ ಕಂಡು ಜನರಲ್ಲಿ ಅಚ್ಚರಿ, ಯಾರಿದು? ಎಲ್ಲಿಯವರು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422