SHIVAMOGGA LIVE NEWS | 6 APRIL 2024
ELECTION SPECIAL : ಒಂದು ಕ್ಷೇತ್ರದಲ್ಲಿ ಚುನಾವಣೆ ಗೆದ್ದವರು ಮುಂದಿನ ಚುನಾವಣೆಯನ್ನು ಮತ್ತೊಂದು ಕ್ಷೇತ್ರದಲ್ಲಿ ಎದುರಿಸಿ, ಗೆಲ್ಲುವುದು ಸಣ್ಣ ವಿಚಾರವಲ್ಲ. ಶಿವಮೊಗ್ಗದಲ್ಲಿ ಸಂಸದರಾಗಿದ್ದ ಟಿ.ವಿ.ಚಂದ್ರಶೇಖರಪ್ಪ ಅವರು ಪಕ್ಕದ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ನಂತರ ಶಿವಮೊಗ್ಗಕ್ಕೆ ಹಿಂತಿರುಗಿ ಇಲ್ಲಿ ಪುನಃ ಎರಡು ಬಾರಿ ಗೆಲುವು ಸಾಧಿಸಿದ್ದರು.
ನಾಲ್ಕುದುರೆಯ ನಾಯಕ ನಾಲ್ಕು ಬಾರಿ ಸಂಸದ
ಟಿ.ವಿ.ಚಂದ್ರಶೇಖರಪ್ಪ ಅವರು ಚನ್ನಗಿರಿ ತಾಲೂಕು ಬಸವಾಪಟ್ಟಣ ಹೋಬಳಿಯ ನಾಲ್ಕುದುರೆ ಗ್ರಾಮದವರು. ನಿಷ್ಠಾವಂತ ಕಾಂಗ್ರೆಸ್ ಮುಖಂಡ. 1971ರಲ್ಲಿ ಶಿವಮೊಗ್ಗದಲ್ಲಿ ಗೆದ್ದು ಸಂಸದರಾಗಿದ್ದರು. 1980ರಲ್ಲಿ ದಾವಣಗೆರೆ ಕ್ಷೇತ್ರದಿಂದ ಸಂಸದರಾಗಿದ್ದರು. 1984 ಮತ್ತು 1989ರಲ್ಲಿ ಪುನಃ ಶಿವಮೊಗ್ಗದ ಸಂಸದರಾಗಿದ್ದರು.
ದಾವಣಗೆರೆಗೆ ಹೋಗಿದ್ದೇಕೆ?
1971ರಲ್ಲಿ ಟಿ.ವಿ.ಚಂದ್ರಶೇಖರಪ್ಪ ಅವರಿಗೆ ಟಿಕೆಟ್ ನೀಡಿದ್ದ ಕಾಂಗ್ರೆಸ್, 1977ರ ಚುನಾವಣೆಯಲ್ಲಿ ಎ.ಆರ್.ಬದ್ರಿನಾರಾಯಣ ಅವರಿಗೆ ಟಿಕೆಟ್ ನೀಡಿ ಗೆಲುವು ಸಾಧಿಸಿತ್ತು. ಆದರೆ ತುರ್ತು ಪರಿಸ್ಥಿತಿ ಬಳಿಕ ದೇಶದ ರಾಜಕಾರಣದಲ್ಲಿ ಹಲವು ಬದಲಾವಣೆಯಾಗಿತ್ತು. 1977ರಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂದಿತ್ತು. ಮೂರೇ ವರ್ಷಕ್ಕೆ ಎಲ್ಲವು ಬದಲಾಗಿ ಸರ್ಕಾರ ಪತನವಾಯಿತು. 1980ರಲ್ಲಿ ಲೋಕಸಭೆಗೆ ಚುನಾವಣೆ ಎದುರಾಯಿತು. ದಾವಣಗೆರೆಯಲ್ಲಿ ಎರಡು ಬಾರಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಕೊಂಡಜ್ಜಿ ಬಸಪ್ಪ ಪಕ್ಷ ತೊರೆದು ಜನತಾ ಪಕ್ಷದಿಂದ ಕಣಕ್ಕಿಳಿದಿದ್ದರು. ಇವರ ವಿರುದ್ಧ ಸಮರ್ಥ ಅಭ್ಯರ್ಥಿ ನಿಲ್ಲಿಸಬೇಕು ಎಂದು ನಿರ್ಧರಿಸಿದ ಕಾಂಗ್ರೆಸ್ ಟಿ.ವಿ.ಚಂದ್ರಶೇಖರಪ್ಪ ಅವರನ್ನು ಶಿವಮೊಗ್ಗದಿಂದ ದಾವಣಗೆರೆಗೆ ಕಳುಹಿಸಿತು. ಕಾಂಗ್ರೆಸ್ ಲಕ್ಕಾಚಾರ ಫಲಿಸಿತು. ಹೊಸ ಅಭ್ಯರ್ಥಿಯಾದರೂ ಜನ ಕೈ ಹಿಡಿದರು. ಚಲಾವಣೆಯಾದ 4.43 ಲಕ್ಷ ಮತಗಳ ಪೈಕಿ ಚಂದ್ರಶೇಖರಪ್ಪ 2.35 ಲಕ್ಷ ಮತ ಪಡೆದಿದ್ದರು. ಗೆದ್ದೇ ಗೆಲ್ಲುತ್ತಾರೆ ಅಂದುಕೊಂಡಿದ್ದ ಕೊಂಡಜ್ಜಿ ಬಸಪ್ಪ 97 ಸಾವಿರ ಮತಗಳನ್ನು ಮಾತ್ರ ಪಡೆದಿದ್ದರು. ಮೊದಲ ಬಾರಿ ಲೋಕಸಭೆಗೆ ಸ್ಪರ್ಧಿಸಿದ್ದ ಶಾಮನೂರು ಶಿವಶಂಕರಪ್ಪ 86 ಸಾವಿರ ಮತ ಪಡೆದಿದ್ದರು. (four time mp)
ಮತ್ತೆ ಶಿವಮೊಗ್ಗಕ್ಕೆ ಮರಳಿದರು
ದಾವಣಗೆರೆಯಲ್ಲಿ ವಿಜಯಿಯಾಗಿ ಸೋಲಿಲ್ಲದ ಸರದಾರ ಪಟ್ಟ ಪಡೆದ ಟಿ.ವಿ.ಚಂದ್ರಶೇಖರಪ್ಪ ಅವರನ್ನು ಮುಂದಿನ ಚುನಾವಣೆಗೆ ಕಾಂಗ್ರೆಸ್ ಪಕ್ಷ ಶಿವಮೊಗ್ಗಕ್ಕೆ ಕರೆಯಿಸಿತು. 1984 ಮತ್ತು 1989ರಲ್ಲಿ ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧಿಸಿ ಶಿವಮೊಗ್ಗದ ಸಂಸದರಾಗಿದ್ದರು. ಈ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ದೇಶಾದ್ಯಂತ ಅಲೆ ಇತ್ತು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ಬಳಿಕ ದೇಶಾದ್ಯಂತ ಕಾಂಗ್ರೆಸ್‌ಗೆ ಭಾರಿ ಜನ ಬೆಂಬಲ ವ್ಯಕ್ತವಾಗಿತ್ತು. ಇದೂ ಕೂಡ ಟಿ.ವಿ.ಚಂದ್ರಶೇಖರಪ್ಪ ಅವರ ಗೆಲುವಿಗೆ ಪ್ರಮುಖ ಕಾರಣಗಳಾಗಿದ್ದವು. (four time mp)
ಇದನ್ನೂ ಓದಿ – ಶಿವಮೊಗ್ಗದ ಸಂಸದನ ಆ ನಿರ್ಧಾರ ಸಾಮಾನ್ಯದ್ದಲ್ಲ, ಸಂಸತ್ ಇತಿಹಾಸದಲ್ಲೇ ಮೊದಲು, ಆಮೇಲೆ ಅವರು ಸಿಎಂ ಆದರು
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200