ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 15 APRIL 2024
BENGALURU : ರಾಘವೇಂದ್ರ ಅವರು ಐದು ಲಕ್ಷ ಲೀಡ್‌ನಲ್ಲಿ ಗೆಲ್ಲಬೇಕು ಎಂದು ಈಶ್ವರಪ್ಪ ಅವರು ಹೇಳಿದ್ದರು. ಕೇಂದ್ರದಲ್ಲಿ ಸಚಿವರಾಗಬೇಕು ಎಂದು ಭಾಷಣ ಮಾಡಿದ್ದರು. ಆದರೆ ಎರಡೇ ವಾರದಲ್ಲಿ ನಮ್ಮ ಕುಟುಂಬ ಮತ್ತು ಹಿಂದುತ್ವದ ಕುರಿತು ಪ್ರಶ್ನೆ ಮಾಡಿದ್ದಾರೆ ಎಂದು ಲೋಕಸಭೆ ಚುನಾವಣೆ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಬೇಸರ ವ್ಯಕ್ತಪಡಿಸಿದರು.
ರಾಘವೇಂದ್ರ ಭಾಷಣದ 3 ಪ್ರಮುಖಾಂಶ
ಬೆಂಗಳೂರಿನಲ್ಲಿ ಖಾಸಗಿ ಹೊಟೇಲ್‌ನಲ್ಲಿ ಶಿವಮೊಗ್ಗ ಕ್ಷೇತ್ರದ ಮತದಾರರ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ರಾಘವೇಂದ್ರ, ಈಶ್ವರಪ್ಪ ಅವರು ಬಂಡಾಯ ಸ್ಪರ್ಧೆ ಮಾಡುತ್ತಿದ್ದಾರೆ. ಅವರು ಬಳಸುತ್ತಿರುವ ಪದಗಳನ್ನು ಜನ ಗಮನಿಸುತ್ತಿದ್ದಾರೆ. ಅದನ್ನೆಲ್ಲ ಆಶೀರ್ವಾದ ಎಂದು ಭಾವಹಿಸುತ್ತೇನೆ. ಅವರಂತೆ ನಾನೂ ಪತ್ರಿಕಾಗೋಷ್ಠಿ ಮಾಡಬಹುದು. ಅದೇ ಪದಗಳನ್ನು ಉಪಯೋಗಿಸಬಹುದು. ಆದರೆ ಈಶ್ವರಪ್ಪ ಅವರು ಹಿರಿಯರ ಸ್ಥಾನದಲ್ಲಿದ್ದಾರೆ ಎಂದು ತಿರುಗೇಟು ನೀಡಿದರು.
ಮೋದಿ ಅವರಿಗಿಂತಲು ಹಿಂದುತ್ವ ಬೇಕ. ಯಡಿಯೂರಪ್ಪ ಅವರು ಶಿಕಾರಿಪುರಕ್ಕೆ ಆರ್‌ಎಸ್‌ಎಸ್ ಪ್ರಚಾರಕರಾಗಿ ಬಂದಿದ್ದರು. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಈದ್ಗಾ ಮೈದಾನ ಹೋರಾಟ, ಕಾಶ್ಮೀರದ ಲಾಲ್ ಚೌಕದಲ್ಲಿ ತ್ರಿವರ್ಣ ಧ್ವಜ ಹಾರಾಟ, ರಾಮ ಮಂದಿರಕ್ಕಾಗಿ ಕರಸೇವೆ ಮಾಡಿದ್ದರು. ಹಿಂದುತ್ವ ಅನ್ನುವುದು ಜಾಹೀರಾತು ಅಲ್ಲ. ಅದು ನಮ್ಮ ಜೀವನ ಶೈಲಿ. ನಮ್ಮ ರಕ್ತದಲ್ಲಿದೆ. ರಾಘವೇಂದ್ರ ಬಿಜೆಪಿಯ ಅಧಿಕೃತ ಅಭ್ಯರ್ಥಿ. ನಾನು ಗೆದ್ದರಷ್ಟೆ ಮೋದಿ ಅವರ ಪರವಾಗಿರುತ್ತದೆ. ಆದರೆ ಮೋದಿ ಅವರ ಫೋಟೊ ಬಳಸಿ ಗೆಲ್ಲಬಹುದು ಎಂದುಕೊಂಡರೆ ತಪ್ಪು ಎಂದರು.
ಶಿವಮೊಗ್ಗದಲ್ಲಿ ವೈಯಕ್ತಿಕ ಟೀಕೆಗಳನ್ನು ಮಾಡಿಕೊಂಡು ಪ್ರಚಾರ ನಡೆಸಲಾಗುತ್ತಿದೆ. ನಾನು ಹಿಂದೆ ಯಾವೆಲ್ಲ ಯೋಜನೆ ತಂದಿದ್ದೇನೆ. ಮುಂದೇನು ಮಾಡುತ್ತೇನೆ ಎಂಬುದರ ಕುರಿತು ಚರ್ಚೆ ನಡೆಸುತ್ತಿಲ್ಲ. ವಿರೋಧ ಮಾಡಲೇಬೇಕು ಎನ್ನುವ ವ್ಯಕ್ತಿಯ ಕೊನೆಯ ಅಸ್ತ್ರ ಅಪಪ್ರಚಾರ. ಕುವೆಂಪು ಸೇರಿದಂತೆ ಅನೇಕ ಹಿರಿಯರನ್ನು ನೀಡಿದ ನಾಡಿನಲ್ಲಿ ವೈಯಕ್ತಿಕ ಟೀಕೆಗೆ ಸೀಮಿತವಾಗಿರುವುದು ದುರದೃಷ್ಟ ಎಂದು ಬಿ.ವೈ.ರಾಘವೇಂದ್ರ ತಿಳಿಸಿದರು.
ಇದನ್ನೂ ಓದಿ – ‘ನಂದೇ ಒರಿಜಿನಲ್ ಬಿಜೆಪಿ, ನಾನು ಎ ಟೀಮ್, ಈಗ ನಾನು ಕಾಯುತ್ತಿರುವುದು ಒಂದೇ ವಿಷಯಕ್ಕೆ’
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422