ಶಿವಮೊಗ್ಗ ಯುವ ಕಾಂಗ್ರೆಸ್‌ಗೆ ಹರ್ಷಿತ್‌ ಗೌಡ ನೂತನ ಅಧ್ಯಕ್ಷ, ಪಕ್ಷ ಸಂಘಟನೆ ಕುರಿತು ಹೇಳಿದ್ದೇನು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS, 10 FEBRUARY 2025

ಶಿವಮೊಗ್ಗ : ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷದ ಸಂಘಟನೆ ಮಾಡಿ ಜಿಲ್ಲಾಧ್ಯಕ್ಷ (President) ಸ್ಥಾನದ ಜವಾಬ್ದಾರಿ ನಿಭಾಯಿಸುತ್ತೇನೆ ಎಂದು ಯುವ ಕಾಂಗ್ರೆಸ್‌ ನೂತನ ಜಿಲ್ಲಾಧ್ಯಕ್ಷ ಹರ್ಷಿತ್‌ ಗೌಡ ತಿಳಿಸಿದರು. ಸುದ್ದಿಯ ಮುಂದಿನ 9 ಪ್ಯಾರಾಗಳು ಕೆಳಗಿವೆ.

ಯುವ ಕಾಂಗ್ರೆಸ್‌ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪಾಧಿಕಾರಿಗಳು ಇವತ್ತು ಪತ್ರಿಕಾಗೋಷ್ಠಿ ನಡೆಸಿದರು. ಚುನಾವಣೆ ಕುರಿತು ಮಾಹಿತಿ ನೀಡಿದರು.

Youth-congress-president-Harshith-Gowda-press-meet.

ಯಾರೆಲ್ಲ ಏನೆಲ್ಲ ಹೇಳಿದರು?

ಚುನಾವಣೆ ಸಂದರ್ಭ ಸಂಘಟನೆ ಮಾಡುವಾಗ ಇದ್ದ ಉತ್ಸಾಹವೆ ಮುಂದೆಯು ಇರಬೇಕು. ವಿವಿಧ ಸ್ಥಾನಗಳಿಗೆ ಆಯ್ಕೆಯಾದವರು, ಸೋತವರು ಒಟ್ಟಿಗೆ ಸಂಘಟನೆಯಲ್ಲಿ ತೊಡಗಲಿದ್ದಾರೆ.

• ಆರ್.ಪ್ರಸನ್ನ ಕುಮಾರ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ

Shimoga Congress president R Prasanna Kumar

ಈ ಬಾರಿ ಆನ್‌ಲೈನ್ ಮೂಲಕ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಳಸಿ ಮತದಾನ ಮತ್ತು ಮತ ಎಣಿಕೆ ಮಾಡಲಾಗಿದೆ. ಅರ್ಹ ಮತ್ತು ಸಮರ್ಪಕ ದಾಖಲೆಗಳನ್ನು ಅಪ್‌ಲೋಡ್‌ ಮಾಡಿದವರಿಗೆ ಮತದಾನ ಮಾಡಲು ಅವಕಾಶವಿತ್ತು. ಸೇವೆ, ಸಿದ್ಧಾಂತ ಮತ್ತು ಸಂಘಟನೆ ಯುವ ಕಾಂಗ್ರೆಸ್‌ನ ಧ್ಯೇಯ. ಈಗ ಆಯ್ಕೆಯಾದವರು ಈ ಧ್ಯೇಯದಂತೆ ಕೆಲಸ ಮಾಡಲಿದ್ದಾರೆ.

Youth-congress-president-Harshith-Gowda-press-meet.

• ಆದರ್ಶ ಹುಂಚದಕಟ್ಟೆ, ಯುವ ಕಾಂಗ್ರೆಸ್‌ ರಾಷ್ಟ್ರೀಯ ವಕ್ತಾರ

National Youth Congress leader Adarsh Humchadakatte

ಕಳೆದ ವರ್ಷದ ಆಗಸ್ಟ್‌ ತಿಂಗಳಲ್ಲಿ ಚುನಾವಣೆ ಪ್ರಕ್ರಿಯೆ ಆರಂಭವಾಗಿತ್ತು. ಸದಸ್ಯತ್ವ ಮಾಡಿಸಿದ್ದೆವು. ಫೆ.7ರಂದು ಫಲಿತಾಂಶ ಪ್ರಕಟವಾಗಿದೆ. ಅತಿ ಹೆಚ್ಚು ಮತಗಳನ್ನು ನೀಡಿ ಗೆಲ್ಲಿಸಿದ್ದಾರೆ. ಪಕ್ಷದ ಅಧ್ಯಕ್ಷರು, ಹಿರಿಯರ ಸಲಹೆ ಪಡೆದು ಉತ್ತಮ ಕೆಲಸ ಮಾಡುತ್ತೇವೆ.

• ಹರ್ಷಿತ್ ಗೌಡ, ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ

ಪ್ರಮುಖರಾದ ವಿಜಯ ಕುಮಾರ್‌, ಹೆಚ್‌.ಸಿ.ಯೋಗೇಶ್‌, ಮಧುಸೂದನ್‌, ಚೇತನ್‌, ಯುವ ಕಾಂಗ್ರೆಸ್‌ಗೆ ಆಯ್ಕೆಯಾದ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿದ್ದರು.

ಇದನ್ನೂ ಓದಿ » ವಾಯುಸೇನೆ ಅಧಿಕಾರಿ ಮಂಜುನಾಥ್‌ ಪಂಚಭೂತಗಳಲ್ಲಿ ಲೀನ, ಇಲ್ಲಿದೆ ಇಡೀ ದಿನದ ಕಂಪ್ಲೀಟ್‌ ಮಾಹಿತಿ

Leave a Comment