SHIVAMOGGA LIVE NEWS | 1 NOVEMBER 2023
SHIMOGA : ದೀಪಾವಳಿ ಹಬ್ಬ ಮತ್ತು ಇತ್ತೀಚಿನ ಅಗ್ನಿ ಅವಘಡಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ರೈಲ್ವೆ ಮಂಡಳಿ, ಆರ್ಪಿಎಫ್ ಮುಖ್ಯ ಕಚೇರಿಯ ನಿರ್ದೇಶನದಂತೆ ಸುಲಭವಾಗಿ ಬೆಂಕಿ ಹರಡುವ ವಸ್ತುಗಳನ್ನು (crackers) ಸಾಗಿಸುವುದರ ವಿರುದ್ಧ ವಿಶೇಷ ಜಾಗೃತಿ ಅಭಿಯಾನವನ್ನು ಮಂಗಳವಾರ ನಗರದ ರೈಲ್ವೆ ನಿಲ್ದಾಣದಲ್ಲಿ ಪೋಸ್ಟ್ ಕಮಾಂಡರ್, ರೈಲ್ವೆ ರಕ್ಷಣಾ ಪಡೆಯಿಂದ ನಡೆಸಲಾಯಿತು.
ರೈಲುಗಳಲ್ಲಿ ಅಥವಾ ರೈಲ್ವೆ ನಿಲ್ದಾಣ ಆವರಣದಲ್ಲಿ ಯಾವುದೆ ದಹನಕಾರಿ ವಸ್ತುಗಳು, ಪಟಾಕಿಗಳನ್ನು ಕೊಂಡೊಯ್ಯದಂತೆ ತಿಳಿವಳಿಕೆ ಮೂಡಿಸಲಾಯಿತು.
ಇದನ್ನೂ ಓದಿ- 12 ಸೆಕೆಂಡ್ನ ವಿಡಿಯೋ ಅಪ್ಲೋಡ್ ಮಾಡಿದ್ದವನ ವಿರುದ್ಧ ದಾಖಲಾಯ್ತು ಕೇಸ್
ರೈಲುಗಳಲ್ಲಿ ಪಟಾಕಿ, ಸಿಲಿಂಡರ್ ಇತರೆ ದಹನಕಾರಿ ವಸ್ತುಗಳನ್ನು ಸಾಗಿಸುವುದು ಕಂಡು ಬಂದರೆ ರೈಲ್ವೆ ಕಾಯಿದೆಯಂತೆ 3 ವರ್ಷ ಜೈಲು ಶಿಕ್ಷೆ ಅಥವಾ 1 ಸಾವಿರ ರೂ. ದಂಡ ಅಥವಾ ಎರಡನ್ನೂ ವಿಧಿಸಲಾಗುವುದು ಎಂಬ ಬಗ್ಗೆ ಮಾಹಿತಿ ನೀಡಲಾಯಿತು. ಈ ವೇಳೆ ಆರ್ಪಿಎಫ್ ಇನ್ಸ್ಪೆಕ್ಟರ್ ಬಿ.ಎನ್. ಕುಬೇರಪ್ಪ, ಸಬ್ ಇನ್ಸ್ಪೆಕ್ಟರ್ ಸಂತೋಷ್ ಗಾಂಪ್ಟರ್ ಹಾಗೂ ಸಿಬ್ಬಂದಿ ಇದ್ದರು.