ಶಿವಮೊಗ್ಗ ಲೈವ್.ಕಾಂ | SHIMOGA | 28 ಸೆಪ್ಟೆಂಬರ್ 2019

ಶಿವಮೊಗ್ಗ ಹಾಲು ಒಕ್ಕೂಟವು ಹಾಲು ಉತ್ಪಾದಕರಿಗೆ ದಸರಾ ಹಬ್ಬದ ಭರ್ಜರಿ ಕೊಡುಗೆ ನೀಡಿದೆ. ಉತ್ಪಾದಕರಿಗೆ ಹಾಲಿನ ದರವನನ್ಉ ಹೆಚ್ಚಳ ಮಾಡಲಾಗಿದೆ.

ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಉತ್ಪಾದಕರ ಹಾಲಿನ ದರವನ್ನು ಲೀಟರ್’ಗೆ 2.50 ರೂ. ಹೆಚ್ಚಳ ಮಾಡಿದೆ. ಕೇವಲ ಒಂದೂವರೆ ತಿಂಗಳ ಅಂತರದಲ್ಲಿ ಹಾಲಿನ ದರವನ್ನು ಲೀಟರ್’ಗೆ 5 ರೂ. ಹೆಚ್ಚಳ ಮಾಡಿದಂತೆ ಆಗಿದೆ.
ಲೀಟರ್ ಹಾಲಿಗೆ ಎಷ್ಟು ಮೊತ್ತ ಸಿಗಲಿದೆ ಗೊತ್ತಾ?
ಹಾಲು ಒಕ್ಕೂಟವು ಆಗಸ್ಟ್ 3ರಂದು ಲೀಟರ್ ಹಾಲಿಗೆ 2.50 ರೂ. ಹೆಚ್ಚಳ ಮಾಡಿತ್ತು. ಈ ಮತ್ತೊಮ್ಮೆ ಹೆಚ್ಚಳ ಮಾಡಿರುವುದರಿಂದ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್’ಗೆ 27 ರೂ. ಸಿಗಲಿದೆ. ಜಿಡ್ಡಿನ ಪ್ರಮಾಣ ಉತ್ತಮವಾಗಿದ್ದಲ್ಲಿ 28.50 ರೂ. ಸಿಗುತ್ತದೆ. ನಿರ್ದೇಶಕರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]