ಶಿವಮೊಗ್ಗ ಲೈವ್.ಕಾಂ | SAGARA | 27 ಸೆಪ್ಟೆಂಬರ್ 2019

ಸಿಗಂದೂರು ಲಾಂಚ್ ಬಳಿ, ಕಳಸವಳ್ಳಿ ಗ್ರಾಮದಲ್ಲಿನ ನಕಲಿ ರಸೀದಿ ಪ್ರಕರಣದಲ್ಲಿ ತುಮರಿ ಗ್ರಾಮ ಪಂಚಾಯಿತಿ ಪ್ರಭಾರ ಪಿಡಿಒ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ಇವತ್ತು ಸಾಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆ ಅಧಿಕಾರಿಗಳು, ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ, ಶಾಸಕರು, ಉಪವಿಭಾಗಾಧಿಕಾರಿ ಕಚೇರಿ ಮತ್ತು ತಾಲೂಕು ಪಂಚಾಯಿತಿಗೆ ಮನವಿ ಸಲ್ಲಿಸಲಾಯಿತು.
ತುಮರಿ ಪ್ರಭಾರ ಪಿಡಿಒ ಇಮ್ತಿಯಾಜ್ ಪಾಷಾ ಅವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಅವರ ವಿರುದ್ಧ ಮಾಡಲಾಗಿರುವ ಆರೋಪ ಆಧಾರ ರಹಿತವಾಗಿದೆ. ನಕಲಿ ರಶೀದಿ ಮೇಲೆ ಪಂಚಾಯಿತಿ ಮೊಹರಾಗಲಿ, ಪಿಡಿಒ ಸಹಿಯಾಗಲಿ ಇಲ್ಲ. ದುರುದ್ದೇಶಪೂರ್ವಕವಾಗಿ ನಕಲಿ ರಶೀದಿ ಮುದ್ರಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇಲಾಖಾ ವಿಚಾರಣೆ ನಡೆಸದೆ ಪಿಡಿಒ ವಿರುದ್ಧ ಪ್ರಕರಣ ದಾಖಲಿಸಿರುವುದರ ಹಿಂದೆ ಷಡ್ಯಂತ್ರ ಅಡಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸಂಘದ ಅಧ್ಯಕ್ಷ ಮೊಹಮ್ಮದ್ ಹನೀಫ್, ಕಾರ್ಯದರ್ಶಿ ಆದರ್ಶ, ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಪ್ರಮುಖರಾದ ಹೆಚ್.ಎಂ.ಪಂಡಿತಾರಾಧ್ಯ, ಕೃಷ್ಣಪ್ಪ, ಸುರೇಶ್, ಅಶ್ಫಾಕ್ ಅಹಮ್ಮದ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]