ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 10 JANUARY 2024
WHATSAPP NEWS : ಪ್ರಮುಖ ಸಂಸ್ಥೆಗಳು, ಉದ್ಯಮಗಳು, ಸೆಲಬ್ರಿಟಿಗಳ ಸಾಮಾಜಿಕ ಜಾಲತಾಣ ಖಾತೆಗಳನ್ನು ಯಾರು ಬೇಕಿದ್ದರು ಡೂಪ್ಲಿಕೇಟ್ ಮಾಡುವ ಸಾಧ್ಯತೆ ಇದೆ. ಹಾಗಾಗಿ ವಿವಿಧ ಸಾಮಾಜಿಕ ಜಾಲತಾಣ ಸಂಸ್ಥೆಗಳು ವೆರಿಫೈಡ್ ಬ್ಯಾಡ್ಜ್ಗಳನ್ನು, ಟಿಕ್ ಮಾರ್ಕ್ಗಳನ್ನು ನೀಡುತ್ತಿವೆ. ಟ್ವಿಟರ್, ಫೇಸ್ಬುಕ್ನಲ್ಲಿ ಟಿಕ್ ಮಾರ್ಕ್ಗಳನ್ನು ಕಾಣಬಹುದು. ಇದೇ ರೀತಿಯ ಬ್ಯಾಡ್ಜ್ ಈಗ ವಾಟ್ಸಪ್ಗು ಬರುತ್ತಿದೆ.
ಈಚೆಗೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ವಾಟ್ಸಪ್ ಖಾತೆ ಎಂದು ನಂಬಿಸಿ ವಾಟ್ಸಪ್ನಲ್ಲಿ ಲಿಂಕ್ ಹರಿದಾಡಿತ್ತು. ಸಿಎಂ ಪಿಣರಾಯಿ ವಿಜಯನ್ ಅವರ ಅಧಿಕೃತ ಖಾತೆ ಎಂದು ನಂಬಿಕೊಂಡು ಹಲವು ವಾಟ್ಸಪ್ ಗ್ರೂಪ್ ಸೇರಿದ್ದರು. ಇಂತಹ ಗೊಂದಲ ತಡೆಯಲು ವಾಟ್ಸಪ್ ಸಂಸ್ಥೆ ಬಿಸ್ನೆಸ್ಗಳಿಗೆ ಬ್ಯಾಡ್ಜ್ ನೀಡಲು ನಿರ್ಧರಿಸಿದೆ.
ಇದನ್ನೂ ಓದಿ – ಒಂದೇ ತಿಂಗಳು 71 ಲಕ್ಷ ವಾಟ್ಸಪ್ ಬ್ಯಾನ್, ನಿಮ್ಮ ವಾಟ್ಸಪ್ ಕಾಪಾಡಿಕೊಳ್ಳಲು ಇಲ್ಲಿದೆ ಸುಲಭ ಮಾರ್ಗ
ಫೇಸ್ಬುಕ್ನಲ್ಲಿ ಇರವ ಹಾಗೆ ಇನ್ಮುಂದೆ ವಾಟ್ಸಪ್ ಖಾತೆಗಳಿಗು ಬ್ಲೂ ಟಿಕ್ ಬರಲಿದೆ. ವಾಟ್ಸಪ್ ಡಿಪಿಯ ಕೆಳಗೆ ಬ್ಲೂ ಟಿಕ್ ಕಾಣಿಸಲಿದೆ. ವೆರಿಫೈಡ್ ಬಿಸ್ನೆಸ್ ಖಾತೆದಾರರಿಗೆ ಮಾತ್ರ ಈ ಟಿಕ್ ನೀಡಲಾಗುತ್ತಿದೆ. ಈ ಅಕೌಂಟ್ಗಳಿಗೆ ಹೆಚ್ಚುವರಿ ಫೀಚರ್ಗಳು ಲಭ್ಯವಾಗಲಿದೆ. ಇದಕ್ಕೆ ವಾಟ್ಸಪ್ ದರ ನಿಗದಿ ಮಾಡುವ ಸಂಭವವು ಇದೆ ಎಂದು ವರದಿಯಾಗಿದೆ.
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು






