ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 11 DECEMBER 2023
BE ALERT : ನಟಿ, ವಕೀಲೆ ಮಾಳವಿಕ ಅವಿನಾಶ್ ಅವರ ಹೆಸರಿನಲ್ಲಿದ್ದ ಸಿಮ್‌ನಿಂದ ಕಿರುಕುಳದ ಮೆಸೇಜ್‌ಗಳು ರವಾನೆಯಾಗಿದ್ದರಿಂದ ಮುಂಬೈನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಮಾಳವಿಕ ಅವಿನಾಶ್ ಅವರ ಹೆಸರಿನಲ್ಲಿದ್ದ ಎಲ್ಲ ಸಿಮ್ ಕಾರ್ಡ್‌ಗಳನ್ನು ಬ್ಲಾಕ್ ಮಾಡಲು ಟೆಲಿಕಾಂ ರೆಗುಲೇಟರಿ ಅಥಾರಿಟಿ ಆಫ್ ಇಂಡಿಯಾಗೆ (ಟ್ರಾಯ್) ಸೂಚಿಸಿದ್ದರು. ಈ ಹಿನ್ನೆಲೆ ಮಾಳವಿಕ ಅವಿನಾಶ್ ಅವರಿಗೆ ಟ್ರಾಯ್ ಮೆಸೇಜ್ ರವಾನಿಸಿತ್ತು.
ಮೆಸೇಜ್ ಬರುತ್ತಿದ್ದಂತೆ ಮಾಳವಿಕ ಅವಿನಾಶ್ ಅವರು ಟ್ರಾಯ್ ಸಂಸ್ಥೆ ಮತ್ತು ಮುಂಬೈ ಪೊಲೀಸರನ್ನು ಸಂಪರ್ಕಿಸಿದ್ದರು. ಆಗಲೆ ಅವರ ಆಧಾರ್ ಕಾರ್ಡ್ ದುರ್ಬಳಕೆ ಆಗಿರುವ ವಿಷಯ ಗೊತ್ತಾಗಿದ್ದು. ತಮ್ಮ ಪರಿಚಯ ತಿಳಿಸಿ, ವಿಷಯ ಮನವರಿಕೆ ಮಾಡಿದ್ದರಿಂದ ಅವರ ಸಿಮ್ ಕಾರ್ಡ್ ಸಂಪರ್ಕ ಉಳಿಯಿತು.
ನಿಮಗೂ ಇದೆ ಪರಿಸ್ಥಿತಿ ಎದುರಾಗಬಹುದು
ನಟಿ ಮಾಳವಿಕ ಅವಿನಾಶ್ ಅವರ ಸ್ಥಿತಿ ಯಾರಿಗೆ ಬೇಕಿದ್ದರು ಎದುರಾಗಬಹುದು. ಸ್ವಲ್ಪ ಯಾಮಾರಿದರೆ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಆದರೆ ಮುಂಜಾಗ್ರತೆ ವಹಿಸಿದರೆ ಸಂಕಷ್ಟದಿಂದ ಪಾರಾಗಬಹುದು. ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದೆ ಈಗಲೆ ಪತ್ತೆ ಹಚ್ಚಿದರೆ ಸುರಕ್ಷಿತವಾಗಿ ಉಳಿಯಬಹುದು.
ನಮ್ಮ ಹೆಸರಲ್ಲಿ ಎಷ್ಟು ಸಿಮ್‌ಗಳಿವೆ?
ಕೇಂದ್ರ ಸರ್ಕಾರದ ಸಂಚಾರ ಸಾಥಿ ವೆಬ್‌ಸೈಟ್ ಮೂಲಕ ನಮ್ಮ ಹೆಸರಿನಲ್ಲಿ ಎಷ್ಟು ಸಿಮ್‌ಗಳಿವೆ ಎಂದು ಪತ್ತೆ ಹಚ್ಚಬಹುದು. ಈ ವೆಬ್‌ಸೈಟ್‌ಗೆ https://sancharsaathi.gov.in/ ಹೋಗಿ KNOW MOBILE CONNECTIONS IN YOUR NAME ಮೇಲೆ ಕ್ಲಿಕ್ ಮಾಡಬೇಕು. ಮೊಬೈಲ್ ನಂಬರ್ ಮತ್ತು CAPTCHA ದಾಖಲಿಸಿದರೆ ಮೊಬೈಲ್‌ಗೆ ಒಟಿಪಿ ಬರಲಿದೆ. ಅದನ್ನು ಎಂಟರ್ ಮಾಡದರೆ ನಿಮ್ಮ ಹೆಸರಿನಲ್ಲಿರುವ ಎಲ್ಲ ಮೊಬೈಲ್ ನಂಬರ್‌ಗಳ ವಿವರ ಬರಲಿದೆ.
ಒಂದು ವೇಳೆ ಯಾವುದಾರು UNKNOWN ನಂಬರ್ ನಿಮ್ಮ ಹೆಸರಿನಲ್ಲಿದ್ದರೆ ಅದನ್ನು ಕೂಡಲೆ ರಿಪೋರ್ಟ್ ಮಾಡಬಹುದು.
ಇದನ್ನೂ ಓದಿ – ಜನ ಶತಾಬ್ದಿ, ಇಂಟರ್‌ಸಿಟಿ ವಿರುದ್ಧ ದೂರು, ಬಳಕೆದಾರರ ಸಭೆಯಲ್ಲಿ ಏನೇನೆಲ್ಲ ಚರ್ಚೆಯಾಯ್ತು? ಇಲ್ಲಿದೆ 7 ಪಾಯಿಂಟ್
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422