ಜಸ್ಟ್ ಮಾಹಿತಿ: ಚಲಿಸುತ್ತಿದ್ದ ಕಾರಿನ ಸನ್ ರೂಫ್‌ನಲ್ಲಿ (Sun Roof) ನಿಂತಿದ್ದ ಬಾಲಕನಿಗೆ ರೈಲ್ವೆ ಇಲಾಖೆಯ ಬ್ಯಾರಿಯರ್ ತಗುಲಿ ಗಾಯಗೊಂಡಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನೊಂದೆಡೆ ಸನ್ ರೂಫನ್‌ನಲ್ಲಿ ಮಕ್ಕಳನ್ನು ನಿಲ್ಲಿಸುವುದು ಅಥವಾ ಹಾಗೆ ನಿಂತು ಪ್ರಯಾಣಿಸುವುದು ಅಪಾಯಕಾರಿ ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಈ ಘಟನೆ ಆಗಿದ್ದೆಲ್ಲಿ? ಬಾಲಕನ ಸ್ಥಿತಿ ಹೇಗಿದೆ?
ಸೆ.7ರಂದು ಮಧ್ಯಾಹ್ನ ಚಲಿಸುತ್ತಿದ್ದ ಕೆಂಪು ಕಾರಿನ ಸನ್ ರೂಫ್‌ನಲ್ಲಿ ನಿಂತು ಪ್ರಯಾಣಿಸುತ್ತಿದ್ದ ಬಾಲಕನ ತಲೆ ರೈಲ್ವೆ ಇಲಾಖೆಯ ಹೈಟ್ ಬ್ಯಾರಿಯರ್‌ಗೆ ತಗುಲಿದೆ. ಬಾಲಕ ತಕ್ಷಣ ಕುಸಿದು ಕಾರಿನೊಳಗೆ ಬೀಳುತ್ತಾನೆ. ಮತ್ತೊಂದು ಕಾರಿನ ಡ್ಯಾಷ್ ಕ್ಯಾಮರಾದಲ್ಲಿ ಈ ಘಟನೆ ಸೆರೆಯಾಗಿತ್ತು. ಇದು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಜನರು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು, ಈ ಘಟನೆ ನಡೆದಿರುವುದು ಬೆಂಗಳೂರಿನ ವಿದ್ಯಾರಣ್ಯಪುರದ ಅತ್ತೂರ್ ಬಡಾವಣೆಯಲ್ಲಿ ಎಂದು ವರದಿಯಾಗಿದೆ. ಕಾರಿನ ವೇಗ ಕಡಿಮೆ ಇದ್ದರಿಂದ ಆರು ವರ್ಷದ ಬಾಲಕನ ತಲೆಗೆ ಭಾರಿ ಪೆಟ್ಟಾಗಿಲ್ಲ. ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಪಡೆದು ಬಾಲಕ ಬಿಡುಗಡೆಯಾಗಿದ್ದಾನೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇನ್ನು, ಪೊಲೀಸರು ಬಿಎನ್‌ಎಸ್ ಕಾಯ್ದೆಯ ಸೆಕ್ಷನ್ 281ರ ಅಡಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇಂತಹ ಘಟನೆ ಮೊದಲೇನಲ್ಲ
ಮಹಾರಾಷ್ಟ್ರದ ಪಾಲ್ಗಾರ್ ಜಿಲ್ಲೆಯ ಮನೋರ್ ಎಂಬಲ್ಲಿ 2023ರ ಜನವರಿಯಲ್ಲಿ ನಡೆದ ಘಟನೆಯಲ್ಲಿ ಸನ್ ರೂಫ್‌ನಲ್ಲಿ ನಿಂತಿದ್ದ ಬಾಲಕ ಮೃತಪಟ್ಟಿದ್ದ. ಕುಟುಂಬದೊಂದಿಗೆ ಕಾರಿನಲ್ಲಿ ತೆರಳುವಾಗ ದಿಶಾಂತ್ ತಿವಾರಿ (8) ಸನ್ ರೂಫ್‌ನಲ್ಲಿ ನಿಂತಿದ್ದ. ಕಾರು ಚಲಿಸುವಾಗ ಗಾಳಿ ಪಟದ ಮಾಂಜಾ ದಾರ ಆತನ ಕತ್ತು ಸೀಳಿತ್ತು. ಗಂಭೀರ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ಸಾಗಿಸಲು ಕುಟುಂಬದವರು ಪರದಾಡಿದರು. ಆಸ್ಪತ್ರೆಗೆ ತಲುಪಿದಾಗ ವೈದ್ಯರು ದಿಶಾಂತ್ ತಿವಾರಿ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದರು.
ಸನ್ ರೂಫ್‌ನ ಕಿರುಪರಿಚಯ
ಸನ್ ರೂಫ್‌ಗಳು ಈಗ ಅತ್ಯಂತ ಪ್ರತಿಷ್ಠೆಯ ಸಂಕೇತವಾಗಿವೆ. 1920ಕ್ಕೂ ಮೊದಲು ಕಾರುಗಳಲ್ಲಿ ಚಾಲಕನಿಗೆ ರೂಫ್ ಇರಲಿಲ್ಲ. ಹಿಂಬದಿ ಕೂರುವವರಿಗೆ ರೂಫ್, ಬಾಗಿಲು ಎಲ್ಲವು ಇತ್ತು. ಕ್ಯಾಬಿನ್ ಒಳಗೆ ಶುದ್ಧ ಗಾಳಿ, ಬೆಳಕು ಬರಲಿ ಎಂದು ಕಬ್ಬಿಣದ ರೂಪ್ ಇರುತಿತ್ತು.

20ನೇ ಶತಮಾನದಲ್ಲಿ ಸನ್ ರೂಫ್‌ಗಳನ್ನು ಕೈಯಿಂದಲೇ ತೆಗೆಯಬೇಕಿತ್ತು. ಕಾರುಗಳಲ್ಲಿ ಎಸಿ ಇಲ್ಲದ್ದರಿಂದ ಸನ್ ರೂಫ್ ಮೂಲಕ ಗಾಳಿ ಮತ್ತು ಬೆಳಕು ಬರುವಂತೆ ಮಾಡಲಾಗುತಿತ್ತು.
ಈಗ ಸನ್ ರೂಫ್‌ಗಳು ಸಂಪೂರ್ಣ ಆಟೊಮೇಟೆಡ್ ಆಗಿವೆ. ಅಲ್ಲದೆ ನಾನಾ ವೆರೈಟಿ ಸನ್ ರೂಫ್‌ಗಳು ಇದ್ದಾವೆ. ಪಾಪ್ ಅಪ್, ಸ್ಪಾಯ್ಲರ್, ಇನ್ ಬಿಲ್ಟ್, ಫೋಲ್ಡಿಂಗ್, ಟಾಪ್ ಮೌಂಟ್, ಪ್ಯಾನರೋಮಿಕ್, ಸೋಲಾರ್ ಸನ್ ರೂಫ್, ಮೂನ್ ರೂಫ್ ಸೇರಿದಂತೆ ನಾನಾ ಬಗೆಯಲ್ಲಿವೆ.

ಪೊಲೀಸ್ ಇಲಾಖೆಯಿಂದ ವಾರ್ನಿಂಗ್
ಕಾರುಗಳಲ್ಲಿ ಸನ್ ರೂಫ್ ಹೊಂದುವುದು ಪ್ರತಿಷ್ಠೆ ಎಂಬಂತಾಗಿದೆ. ಹಾಗಾಗಿ ಕಾರು ಕಂಪನಿಗಳು ಭಾರತದಲ್ಲಿ ಸನ್ ರೂಫ್‌ಗಳಿಗೆ ಆದ್ಯತೆ ನೀಡಲು ಆರಂಭಿಸಿವೆ. ಇವುಗಳ ಉದ್ದೇಶ ಅರಿಯದೆ ಕಲವರು ಮಕ್ಕಳನ್ನು ಸನ್ ರೂಫ್‌ನಲ್ಲಿ ನಿಲ್ಲಿಸಿ ಕಾರು ಚಲಾಯಿಸುತ್ತಿದ್ದಾರೆ. ಇದೇ ಕಾರಣಕ್ಕೆ ಪೊಲೀಸ್ ಇಲಾಖೆ ಕಾರು ಮಾಲೀಕರು ಅಥವಾ ಚಾಲಕರಿಗೆ ಎಚ್ಚರಿಕೆಯನ್ನು ನೀಡಿದೆ.
— SP Shivamogga (@Shivamogga_SP) September 8, 2025
ಇದನ್ನೂ ಓದಿ » ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೇಸ್, ಭದ್ರಾವತಿಯಲ್ಲಿ ಏನೇನಾಯ್ತು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
All about Sun Roof incidents
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು





